• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಸ್ಲಾಮೋಫೋಬಿಯಾ ನಿಷೇಧ: ಫೇಸ್‌ಬುಕ್‌ಗೆ ಇಮ್ರಾನ್ ಖಾನ್ ಮನವಿ

|

ಇಸ್ಲಾಮಾಬಾದ್, ಅಕ್ಟೋಬರ್ 26: ಇಸ್ಲಾಮೋಫೋಬಿಕ್ ಅಂಶಗಳನ್ನು (ಇಸ್ಲಾಂ ಬಗ್ಗೆ ಭೀತಿ ಮೂಡಿಸುವುದು) ನಿಷೇಧಿಸುವಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್ ಫೇಸ್‌ಬುಕ್‌ಗೆ ಪತ್ರ ಬರೆದಿದ್ದಾರೆ.

ಇಸ್ಲಾಮೋಫೋಬಿಕ್ ಅಂಶಗಳು ಫೇಸ್‌ಬುಕ್‌ನಲ್ಲಿ ಪ್ರಚೋದನೆ ಮೂಡಿಸುತ್ತಿದ್ದು, ಮುಸ್ಲಿಮರ ನಡುವೆ ತೀವ್ರಗಾಮಿತನವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 'ಬೆಳೆಯುತ್ತಿರುವ ಇಸ್ಲಾಮೋಫೋಬಿಯಾವು ಮುಖ್ಯವಾಗಿ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣ ವೇದಿಕೆಗಳ ಮೂಲಕ ಜಗತ್ತಿನಾದ್ಯಂತ ಉಗ್ರಗಾಮಿತನ ಹಾಗೂ ಹಿಂಸಾಚಾರಕ್ಕೆ ಉತ್ತೇಜನ ನೀಡುತ್ತಿದೆ ಎಂದಿದ್ದಾರೆ.

ಫೇಸ್‌ಬುಕ್ ಕಾರ್ಯನಿರ್ವಾಹಕಿ ಅಂಖಿ ದಾಸ್ ವಿಚಾರಣೆ ನಡೆಸಿದ ಸಂಸದೀಯ ಸಮಿತಿ

'ಹತ್ಯಾಕಾಂಡಕ್ಕೆ ಅವಕಾಶ ನೀಡುವಂತಹ ಇಸ್ಲಾಂ ದ್ವೇಷದ ಚಟುವಟಿಕೆಗಳು ಹಾಗೂ ಇಸ್ಲಾಮೋಫೋಬಿಯಾಗಳಿಗೆ ನಿಮ್ಮ ಫೇಸ್‌ಬುಕ್‌ನಲ್ಲಿ ನೀಡಿರುವ ಜಾಗದ ಮೇಲೆ ನಿಷೇಧ ಹೇರಬೇಕೆಂದು ಕೇಳುತ್ತೇನೆ' ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ತನ್ನ ದ್ವೇಷ ಭಾಷಣ ನೀತಿಯನ್ನು ಉನ್ನತೀಕರಿಸುತ್ತಿದ್ದು, ಹತ್ಯಾಕಾಂಡಕ್ಕೆ ಪ್ರಚೋದನೆ ನೀಡುವ ಹಾಗೂ ದ್ವೇಷ ಬಿತ್ತುವಂತಹ ಅಂಶಗಳನ್ನು ನಿಷೇಧಿಸುತ್ತಿರುವುದಾಗಿ ಫೇಸ್‌ಬುಕ್ ಹೇಳಿಕೆ ನೀಡಿತ್ತು.

ಅಮೆರಿಕ ಚುನಾವಣೆ: 276 ನಕಲಿ ಖಾತೆಗಳನ್ನು ರದ್ದುಗೊಳಿಸಿದ ಫೇಸ್‌ಬುಕ್

ಫೇಸ್‌ಬುಕ್‌ನಲ್ಲಿ ಇಸ್ಲಾಮೋಫೋಬಿಯಾ ಹೆಚ್ಚಾಗಲು ಭಾರತ ಮತ್ತು ಫ್ರಾನ್ಸ್ ಮುಖ್ಯ ಕಾರಣ ಎಂದೂ ಅವರು ಆರೋಪಿಸಿದ್ದಾರೆ. ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿ ಪ್ರತಿಭಟನೆಗಳನ್ನು ಅವರು ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್ ಹರಡಲು ತಬ್ಲಿಘಿ ಸಮುದಾಯ ಕಾರಣವೆಂದು ಫೇಸ್‌ಬುಕ್‌ನಲ್ಲಿ ಹೆಚ್ಚು ಆರೋಪಗಳು ಹರಿದಾಡಿದ್ದಾಗಿ ಹೇಳಿರುವ ಇಮ್ರಾನ್ ಖಾನ್, ಇವುಗಳಿಗೆ ಇಸ್ಲಾಮೋಫೋಬಿಯಾ ಕಾರಣ ಎಂದು ದೂರಿದ್ದಾರೆ.

English summary
Pakistan Prime Minister Imran Khan writes letter to Facebook CEO seeking ban on Islamophopic content on platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X