• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಾಸಮತ ಗೆದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

|

ಇಸ್ಲಾಮಾಬಾದ್, ಮಾರ್ಚ್ 6: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಶನಿವಾರದಂದು ಸಂಸತ್ತಿನಲ್ಲಿ ವಿಶ್ವಾಸಮತ ಯಾಚಿಸಿ, ಬಹುಮತ ಗಳಿಸಿದ್ದಾರೆ.

ಪಾಕಿಸ್ತಾನದ ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ ಅವರು ಚುನಾವಣೆಯಲ್ಲಿ ಸೋಲು ಕಂಡ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರು ಬಹುಮತ ಸಾಬೀತು ಪಡಿಸುವಂತ್ ವಿರೋದ ಪಕ್ಷದವರು ಆಗ್ರಹಿಸಿದ್ದರು.

ಸಂಸತ್ತಿನಲ್ಲಿ 342 ಸದಸ್ಯ ಬಲದ ಪೈಕಿ 178 ಸದಸ್ಯರ ಬೆಂಬಲ ಪಡೆದುಕೊಂಡ ಇಮ್ರಾನ್ ಖಾನ್ ಬಹುಮತ ಸಾಬೀತಪಡಿಸಿದ್ದಾರೆ. ಈ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತ ಗಳಿಸಲು 172 ಮತಗಳ ಅಗತ್ಯವಿತ್ತು. ಎರಡು ವರ್ಷದ ಕೆಳಗೆ 176 ಸದಸ್ಯರ ಬೆಂಬಲ ಹೊಂದಿದ್ದ ಇಮ್ರಾನ್ ಅವರು ಈಗ 178 ಸದಸ್ಯರ ಬಲ ಹೊಂದಿದ್ದಾರೆ ಎಂದು ಸ್ಪೀಕರ್ ಅಸರ್ ಖೈಸರ್ ಪ್ರಕಟಿಸಿದರು.

ವಿಶ್ವಾಸಮತ ಪ್ರಕ್ರಿಯೆಯನ್ನು ಬಹಿಷ್ಕರಿಸಿ ಪಾಕಿಸ್ತಾನ್ ಡೆಮಾಕ್ರಾಟಿಕ್ ಮೂವ್ಮೆಂಟ್ ಹಾಗೂ ಮೈತ್ರಿಕೂಟದ 11 ಪಕ್ಷಗಳು ಸದನದಿಂದ ಹೊರ ನಡೆದ ಘಟನೆ ಸಂಭವಿಸಿತು. ಫೈಸಲ್ ವೊದಾ ರಾಜೀನಾಮೆಯಿಂದ ಆಡಳಿತ ಪಕ್ಷದ ಸದಸ್ಯ ಬಲ 181ರಿಂದ 180ಕ್ಕೆ ಇಳಿಕೆಯಾಗಿತ್ತು. ವಿಪಕ್ಷ ಮೈತ್ರಿಕೂಟ 160 ಸದಸ್ಯ ಬಲ ಹೊಂದಿದ್ದು, ಒಂದು ಸ್ಥಾನ ಖಾಲಿಯಿದೆ.

ಪಾಕಿಸ್ತಾನದ ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ ಅವರು ಚುನಾವಣೆಯಲ್ಲಿ ಸೋಲು ಕಂಡ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರು ಬಹುಮತ ಸಾಬೀತು ಪಡಿಸುವಂತ್ ವಿರೋದ ಪಕ್ಷದವರು ಆಗ್ರಹಿಸಿದ್ದರು.

ಪಾಕಿಸ್ತಾನ್ ಡೆಮಾಕ್ರಾಟಿಕ್ ಮೂವ್ಮೆಂಟ್ ಅಭ್ಯರ್ಥಿ ಯೂಸೂಫ್ ರಾಜಾ ಗಿಲಾನಿ ವಿರುದ್ಧ ಶೇಖ್ ಅವರು ಸೋಲು ಕಂಡಿದ್ದರು. ಇದಾದ ಬಳಿಕ ಇಮ್ರಾನ್ ಅವರು ವಿಶ್ವಾಸಮತ ಯಾಚನೆ ಬಗ್ಗೆ ಆಡಳಿತ ಪಕ್ಷದ ಉಪಾಧ್ಯಕ್ಷ ಖುರೇಶಿ ಅವರು ಪ್ರಕಟಣೆ ಹೊರಡಿಸಿದ್ದರು.

ಬೆನಜೀರ್ ಭುಟ್ಟೋ, ನವಾಜ್ ಷರೀಫ್, ಜಫರುಲ್ಲಾ ಜಮಾಲಿ, ಚೌಧರಿ ಶುಜಾತ್, ಶೌಕತ್ಅಜೀಜ್ ಹಾಗೂ ಯೂಸುಫ್ ರಾಜಾ ಗಿಲಾನಿ ಅವರು ಈ ಹಿಂದೆ ವಿಶ್ವಾಸಮತ ಯಾಚನೆ ಮಾಡಿದ್ದರು.

English summary
Pakistan Prime Minister Imran Khan secures majority votes to win the vote of confidence from the National Assembly: Pakistan media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X