ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್ ಪಕ್ಕದಲ್ಲೇ ಜರ್ಮನಿ ಎಂದ ಇಮ್ರಾನ್ ಖಾನ್ ಮಾತಿಗೆ ಸಿಕ್ಕಾಪಟ್ಟೆ ಟ್ರೋಲ್

|
Google Oneindia Kannada News

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಸಕತ್ ಆಗಿ ಕಾಲೆಳೆಯಲಾಗುತ್ತಿದೆ. ಅವರ ಭೂಗೋಳ ಜ್ಞಾನವನ್ನು ಗೇಲಿ ಮಾಡಲಾಗುತ್ತಿದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಇರಾನ್ ಗೆ ಸೋಮವಾರ ಭೇಟಿ ನೀಡಿದ್ದ ಇಮ್ರಾನ್ ಖಾನ್, ಅಲ್ಲಿನ ಅಧ್ಯಕ್ಷ ಹಸನ್ ರೌಹಾನಿ ಅವರ ಜತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆ ವೇಳೆ, ಪೂರ್ವ ಏಷ್ಯಾದ ದ್ವೀಪ ರಾಷ್ಟ್ರ ಜಪಾನ್ ಯುರೋಪಿಯನ್ ರಾಷ್ಟ್ರ ಜರ್ಮನಿ ಜತೆಗೆ ಗಡಿಯನ್ನು ಹಂಚಿಕೊಳ್ಳುತ್ತದೆ ಎಂದಿದ್ದಾರೆ. ಎರಡು ದೇಶಗಳು ಸೇರಿ ಗಡಿ ಪ್ರದೇಶಗಳನ್ನು ಕಾರ್ಖಾನೆ ಸ್ಥಾಪಿಸಿದ ಉದಾಹರಣೆಗಳನ್ನು ನೀಡುವಾಗ ಅವರು, ಎರಡನೇ ಪ್ರಪಂಚ ಯುದ್ಧದ ನಂತರ ಜರ್ಮನಿ ಮತ್ತು ಜಪಾನ್ ಗಡಿಯಲ್ಲಿ ಅವರು ಜಂಟಿಯಾಗಿ ಕಾರ್ಖಾನೆ ಸ್ಥಾಪಿಸಿದ್ದರು ಎಂದಿದ್ದಾರೆ.

ಬಿಜೆಪಿ ಗೆದ್ದರೆ ಅನುಕೂಲ: ಅಚ್ಚರಿ ಮೂಡಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಬಿಜೆಪಿ ಗೆದ್ದರೆ ಅನುಕೂಲ: ಅಚ್ಚರಿ ಮೂಡಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ

ಇಮ್ರಾನ್ ಖಾನ್ ಹೇಳಬೇಕಿದ್ದದ್ದು ಯುರೋಪಿಯನ್ ದೇಶ ಫ್ರಾನ್ಸ್ ನ ಹೆಸರು. ಆದರೆ ಹೇಳಿದ್ದು ಜಪಾನ್ ಹೆಸರು. ಎರಡನೇ ವಿಶ್ವ ಯುದ್ಧದ ನಂತರ ಜರ್ಮನಿ ಹಾಗೂ ಫ್ರಾನ್ಸ್ ಆರ್ಥಿಕ ಹಾಗೂ ಸೇನಾ ಸಹಕಾರಕ್ಕೆ ಸಹಿ ಹಾಕಿದ್ದವು.

 Pakistan PM Imran Khan trolled while he talks about Japan-Germany border

ಕ್ರಿಕೆಟ್ ಆಡುವವರೆಲ್ಲ ಅದಕ್ಕೆ ಲಾಯಕ್. ಅದನ್ನು ಬಿಟ್ಟು ಪ್ರಧಾನಿ ಮಾಡಿದರೆ ಹೀಗೇ ಮುಜುಗರ ಆಗುತ್ತದೆ. ಜರ್ಮನಿ ಹಾಗೂ ಜಪಾನ್ ಗಡಿ ಹಂಚಿಕೊಳ್ಳುತ್ತವೆ ಎಂದು ನಮ್ಮ ಪ್ರಧಾನಿ ಆಲೋಚಿಸುತ್ತಾರೆ ಎಂದು ಬಿಲಾವಲ್ ಭುಟ್ಟೋ ಜರ್ದಾರಿ ಟ್ವೀಟ್ ಮಾಡಿದ್ದಾರೆ.

ಇದೇ ಮೊದಲಲ್ಲ ಹೀಗೆ ಇಮ್ರಾನ್ ಖಾನ್ ಭೂಗೋಳದ ವಿಷಯದಲ್ಲಿ ತಪ್ಪು ಮಾಡುತ್ತಿರುವುದು. ಕಳೆದ ವರ್ಷ ಡಿಸೆಂಬರ್ ನಲ್ಲಿ ಆಫ್ರಿಕಾವನ್ನು ಮುಂದುವರಿಯುತ್ತಿರುವ ರಾಷ್ಟ್ರ ಎಂದಿದ್ದರು.

ರಷ್ಯಾ ಅಮೆರಿಕಗೆ ನೀಡಿದಂತೆ ಮೋದಿಗೆ ಪಾಕ್ ಸಹಕಾರ ಎಂದ ಸಿದ್ದರಾಮಯ್ಯರಷ್ಯಾ ಅಮೆರಿಕಗೆ ನೀಡಿದಂತೆ ಮೋದಿಗೆ ಪಾಕ್ ಸಹಕಾರ ಎಂದ ಸಿದ್ದರಾಮಯ್ಯ

ನೆರೆ ರಾಷ್ಟ್ರವಾದ ಇರಾನ್ ಜತೆಗೆ ಪಾಕಿಸ್ತಾನದ ಸಂಬಂಧವು ಹದಗೆಟ್ಟಿದೆ. ಆ ದೇಶದೊಳಗೆ ಪಾಕ್ ಉಗ್ರರು ನುಸುಳಿ ತೊಂದರೆ ನೀಡುತ್ತಿದ್ದಾರೆ ಎಂದು ಇರಾನ್ ಆಕ್ಷೇಪಿಸಿದೆ. ನೀವು ಕ್ರಮ ತೆಗೆದುಕೊಳ್ಳಿ ಅಥವಾ ನಾವು ಪಾಠ ಕಲಿಸುತ್ತೇವೆ ಎಂದು ಇರಾನ್ ಎಚ್ಚರಿಕೆ ನೀಡಿದೆ.

English summary
Pakistan's Prime Minister Imran Khan misspoke on Monday while addressing a joint press conference with Iranian President Hassan Rouhani during a visit to Iran. In a video going viral online, he says that the East Asian island nation of Japan shares a border with the European country of Germany.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X