ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಲಸಿಕೆ ಪಡೆದ ಎರಡೇ ದಿನಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ಕೋವಿಡ್

|
Google Oneindia Kannada News

ಇಸ್ಲಾಮಾಬಾದ್, ಮಾರ್ಚ್ 20: ಚೀನಾ ನಿರ್ಮಿತ ಕೋವಿಡ್-19 ಲಸಿಕೆ ತೆಗೆದುಕೊಂಡ ಎರಡು ದಿನಗಳ ಬಳಿಕ ಪಾಕಿಸ್ತಾನ ಪ್ರಧಾನ ಇಮ್ರಾನ್ ಖಾನ್ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರುವುದು ಪತ್ತೆಯಾಗಿದೆ. ರಾಷ್ಟ್ರೀಯ ಆರೋಗ್ಯ ಸೇವೆಗಳು, ನಿಯಂತ್ರಣ ಮತ್ತು ಸಮನ್ವಯದ ಪ್ರಧಾನ ಮಂತ್ರಿಗಳ ವಿಶೇಷ ಸಹಾಯಕ ಫೈಸಲ್ ಸುಲ್ತಾನ್ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

ಚೀನಾ ಲಸಿಕೆ ಸಿನೊಫಾರ್ಮ್‌ನ ಮೊದಲ ಡೋಸ್ ಅನ್ನು ಮಾರ್ಚ್ 18ರಂದು ಇಮ್ರಾನ್ ಖಾನ್ ಪಡೆದುಕೊಂಡಿದ್ದರು. ಅವರೀಗ ಜನಸಂಪರ್ಕದಿಂದ ಪ್ರತ್ಯೇಕವಾಗಿ ಮನೆಯಲ್ಲಿದ್ದು, ವೈದ್ಯರ ನಿಗಾದಲ್ಲಿದ್ದಾರೆ.

ಪಾಕಿಸ್ತಾನದೊಂದಿಗೆ ಶಾಂತಿ ಕಾಯ್ದುಕೊಂಡರೆ ಭಾರತಕ್ಕೆ ಲಾಭ: ಇಮ್ರಾನ್ ಖಾನ್ ಪಾಕಿಸ್ತಾನದೊಂದಿಗೆ ಶಾಂತಿ ಕಾಯ್ದುಕೊಂಡರೆ ಭಾರತಕ್ಕೆ ಲಾಭ: ಇಮ್ರಾನ್ ಖಾನ್

'ಇಮ್ರಾನ್ ಖಾನ್ ಅವರು ಕೋವಿಡ್-19 ಪಾಸಿಟಿವ್‌ಗೆ ಒಳಗಾಗಿದ್ದಾರೆ. ಅವರು ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ' ಎಂದು ಫೈಸಲ್ ಸುಲ್ತಾನ್ ಟ್ವೀಟ್ ಮಾಡಿದ್ದಾರೆ.

 Pakistan PM Imran Khan Tests Positive For Covid-19 Two Days After Getting Chinese Vaccines

'ಪ್ರಧಾನಿ ಇಮ್ರಾನ್ ಖಾನ್ ಅವರು ಇಂದು ಲಸಿಕೆ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾಂಕ್ರಾಮಿಕದ ಮೂರನೇ ಅಲೆಯ ಅಪಾಯದ ದೃಷ್ಟಿಯಿಂದ ಎಸ್‌ಒಪಿಗಳ ಸಂಪೂರ್ಣ ಜಾರಿಯನ್ನು ಖಾತರಿಪಡಿಸಿಕೊಳ್ಳುವಂತೆ ಅವರು ದೇಶಕ್ಕೆ ಮನವಿ ಮಾಡಿದ್ದಾರೆ' ಎಂದು ಪ್ರಧಾನಿ ಕಚೇರಿ ಮಾರ್ಚ್ 18ರಂದು ಟ್ವೀಟ್ ಮಾಡಿತ್ತು.

ಮರುದಿನ ಅವರು, ಮಾಲಕಂಡ್ ವಿಶ್ವವಿದ್ಯಾಲಯದಲ್ಲಿ ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಖೈಬರ್-ಪಖ್ತುಂಖ್ವಾಕ್ಕೆ ಭೇಟಿ ನೀಡಿದ್ದರು. ನಂತರ ಸ್ವಾಟ್ ಎಕ್ಸ್‌ಪ್ರೆಸ್‌ವೇ ಸುರಂಗದ ಉದ್ಘಾಟನೆಗೂ ತೆರಳಿದ್ದರು.

English summary
Pakistan Prime Minister Imran Khan tested positive for Covid-19 two days after getting Chinese vaccines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X