ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅವರಿಗೆ' ‌ನೊಬೆಲ್ ಕೊಡಿ ಎಂದು ಇಮ್ರಾನ್ ಹೇಳಿದ್ದು ಯಾರ ಬಗ್ಗೆ?

|
Google Oneindia Kannada News

"ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾನು ತಕ್ಕನಾದವನಲ್ಲ. ಆದರೆ ಕಾಶ್ಮೀರಿ ಜನರ ಆಶಯದ ಪರವಾಗಿ ಕಾಶ್ಮೀರ ಸಮಸ್ಯೆ ಬಗೆಹರಿಸುವ ಹಾಗೂ ಆ ಮೂಲಕ ಉಪಖಂಡದಲ್ಲಿ ಶಾಂತಿ ಹಾಗೂ ಮಾನವ ಅಭಿವೃದ್ಧಿಗೆ ದಾರಿ ಮಾಡಿಕೊಡುವ ವ್ಯಕ್ತಿ ಆ ಗೌರವಕ್ಕೆ ಅರ್ಹರು" ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ಭಾರತೀಯ ವಾಯು ಸೇನೆಯ ಪೈಲಟ್ ಅಭಿನಂದನ್ ರನ್ನು ಬೇಷರತ್ತಾಗಿ ಇಮ್ರಾನ್ ಖಾನ್ ಬಿಡುಗಡೆ ಮಾಡಿದ ನಂತರ ಆನ್ ಲೈನ್ ಅಭಿಯಾನ ಶುರು ಆಗಿದೆ. ಇಮ್ರಾನ್ ಖಾನ್ ಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಬೇಕು ಎಂಬ ಅನ್ ಲೈನ್ ಅರ್ಜಿಗೆ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಸಹಿ ಹಾಕಿದ್ದಾರೆ.

ಪಾಕ್ ಪ್ರಧಾನಿ ಪಠಿಸಿದ ಶಾಂತಿ ಮಂತ್ರ: ಯಾವ ಆಂಗಲ್ ನಿಂದ ನಗೋಣ!ಪಾಕ್ ಪ್ರಧಾನಿ ಪಠಿಸಿದ ಶಾಂತಿ ಮಂತ್ರ: ಯಾವ ಆಂಗಲ್ ನಿಂದ ನಗೋಣ!

ಶಾಂತಿಯ ದ್ಯೋತಕವಾಗಿ ನಾವು ಅಭಿನಂದನ್ ರನ್ನು ಬಿಡುಗಡೆ ಮಾಡುತ್ತೇವೆ ಎಂದು ಇಮ್ರಾನ್ ಖಾನ್ ಪಾಕಿಸ್ತಾನದ ಸಂಸತ್ ನಲ್ಲಿ ಘೋಷಣೆ ಮಾಡಿದಾಗ #NobelPeaceForImranKhan ಈ ಹ್ಯಾಶ್ ಟ್ಯಾಗ್ ಕಳೆದ ವಾರ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ಮುಂದಿನ ವರ್ಷ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಇಮ್ರಾನ್ ಖಾನ್ ರನ್ನು ಪರಿಗಣಿಸಲು ಮನವಿ ಮಾಡಲಾಗಿತ್ತು.

Pakistan PM Imran Khan suggested a candidate for the Peace Nobel

ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಶನಿವಾರದಂದು ಪಾಕ್ ಸಂಸತ್ ನಲ್ಲಿ ಈ ಬಗ್ಗೆ ನಿರ್ಣಯ ಕೂಡ ಮಂಡಿಸಿದ್ದಾರೆ. ಇಮ್ರಾನ್ ಖಾನ್ ಅವರು ಶಾಂತಿ ಕಾಯ್ದುಕೊಳ್ಳಲು ನೀಡಿದ ಕೊಡುಗೆ ಪರಿಗಣಿಸಿ ಪುರಸ್ಕಾರ ನೀಡಬೇಕು ಎಂದಿದ್ದಾರೆ.

ಟಿಪ್ಪು ಸುಲ್ತಾನ್ ನಿಮ್ಮ ಹೀರೋ ಅಲ್ಲವೇ ಇಮ್ರಾನ್, ಹಾಗಿದ್ರೆ ಉಗ್ರರನ್ನು ಚೆಂಡಾಡಿಟಿಪ್ಪು ಸುಲ್ತಾನ್ ನಿಮ್ಮ ಹೀರೋ ಅಲ್ಲವೇ ಇಮ್ರಾನ್, ಹಾಗಿದ್ರೆ ಉಗ್ರರನ್ನು ಚೆಂಡಾಡಿ

ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ವಿಶ್ವದಾದ್ಯಂತ ಜನರು ಹೆಸರುಗಳನ್ನು ಅನುಮೋದನೆ ಮಾಡುತ್ತಾರೆ. ಸಂಸದರ, ಸಚಿವರು, ಈಗಾಗಲೇ ನೊಬೆಲ್ ಪುರಸ್ಕಾರ ಪಡೆದವರು ಹಾಗೂ ಕೆಲವು ವಿಶ್ವವಿದ್ಯಾಲಯದ ಪೊಫೆಸರ್ ಗಳು ಸಹ ಹೆಸರಿನ ಅನುಮೋದನೆ ಮಾಡುತ್ತಾರೆ.

English summary
Pak PM Imran Khan on Monday said that he did not deserve the Nobel Peace Prize but suggested who could be conferred with the honour. “The person worthy of this would be the one who solves the Kashmir dispute according to the wishes of the Kashmiri people and paves the way for peace & human development in the subcontinent,’ Imran tweeted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X