• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತ್ಯಾಚಾರಕ್ಕೆ ಮಹಿಳೆಯರ ಉಡುಪು ಕಾರಣ: ಇಮ್ರಾನ್ ಖಾನ್ ವಿವಾದ

|

ಇಸ್ಲಾಮಾಬಾದ್, ಏಪ್ರಿಲ್ 8: ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರ ಪ್ರಕರಣಗಳಿಗೆ ಮಹಿಳೆಯರ ಉಡುಪು ಕಾರಣ ಎನ್ನುವ ಮೂಲಕ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿವಾದ ಸೃಷ್ಟಿಸಿದ್ದಾರೆ.

ತಮ್ಮ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಹಿಂಸಾಚಾರದ ಕುರಿತು ಯಾವ ಕ್ರಮ ತೆಗೆದುಕೊಳ್ಳುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ್ದ ಇಮ್ರಾನ್ ಖಾನ್, ಇದರಲ್ಲಿ ಕೆಲವು ಸಮಸ್ಯೆಗಳಿವೆ. ಇವುಗಳನ್ನು ಕಾನೂನು ಮಾತ್ರವೇ ಪರಿಹರಿಸಲಾರದು ಎಂದಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ಯಾವುದೇ ವ್ಯಾಪಾರ ಸಾಧ್ಯವಿಲ್ಲ: ಇಮ್ರಾನ್ ಖಾನ್ಸದ್ಯದ ಪರಿಸ್ಥಿತಿಯಲ್ಲಿ ಭಾರತದೊಂದಿಗೆ ಯಾವುದೇ ವ್ಯಾಪಾರ ಸಾಧ್ಯವಿಲ್ಲ: ಇಮ್ರಾನ್ ಖಾನ್

ಇಸ್ಲಾಂನಲ್ಲಿನ ಪರ್ದಾ ಪರಿಕಲ್ಪನೆಯು ಆಕರ್ಷಣೆಯನ್ನು ನಿಯಂತ್ರಿಸುವಂತೆ ಮಾಡುತ್ತದೆ. ತಮ್ಮ ಬಯಕೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಗದ ಅನೇಕ ಜನರಿದ್ದಾರೆ. ಅದು ತಾನಾಗಿಯೇ ಒಂದು ಮಾರ್ಗದಲ್ಲಿ ಅಥವಾ ಇನ್ನೊಂದು ರೀತಿ ತಣಿಯಬೇಕು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಇಮ್ರಾನ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರ ಮಾಜಿ ಪತ್ನಿ ಜೆಮಿಮಾ ಗೋಲ್ಡ್‌ಸ್ಮಿತ್ ಟ್ವಿಟ್ಟರ್‌ನಲ್ಲಿ ಕುರಾನ್‌ನ ನುಡಿಯೊಂದನ್ನು ಉಲ್ಲೇಖಿಸಿದ್ದಾರೆ. 'ಪುರುಷರು ತಮ್ಮ ಕಣ್ಣುಗಳನ್ನು ನಿರ್ಬಂಧಿಸಲು ಮತ್ತು ತಮ್ಮ ಖಾಸಗಿ ಅಂಗಗಳನ್ನು ಕಾಪಾಡಲು ಹೇಳಿ. ಜವಾಬ್ದಾರಿ ಇರುವುದು ಪುರುಷರ ಮೇಲೆ' ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ತಾವು 70ರ ದಶಕದಲ್ಲಿ ಕ್ರಿಕೆಟ್ ಆಡಲು ಬ್ರಿಟನ್‌ಗೆ ತೆರಳಿದ್ದ ಸಂದರ್ಭವನ್ನು ನೆನಪಿಸಿಕೊಂಡಿರುವ ಇಮ್ರಾನ್ ಖಾನ್, ಆ ಸಮಯದಲ್ಲಿ ಲೈಂಗಿಕತೆ, ಡ್ರಗ್ಸ್ ಮತ್ತು ಮೋಜು ಮಸ್ತಿ ಸಂಸ್ಕೃತಿ ತೀವ್ರವಾಗಿತ್ತು. ಪಾಕಿಸ್ತಾನದಲ್ಲಿ ಲೈಂಗಿಕ ಹಿಂಸಾಚಾರಗಳು ಹೆಚ್ಚಲು ದೂಷಿಸಬೇಕಿರುವುದು ಅಶ್ಲೀಲತೆಯನ್ನು ಎಂದಿದ್ದಾರೆ.

English summary
Pakistan Prime Minister Imran Khan sparked a controversy after he made a statement linking how women dresses to rise in case of rape and sexual violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X