ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಿಶ್ವಾಸ ಮಂಡನೆಯ ಸುಳಿಯಲ್ಲಿ ಪಾಕ್‌ ಪ್ರಧಾನಿ: ರಾಜಕೀಯ ಉಳಿವಿಗಾಗಿ ಒದ್ದಾಟ

|
Google Oneindia Kannada News

ಇಸ್ಲಾಮಾಬಾದ್‌, ಮಾರ್ಚ್ 25: ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ 2018ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಕಠಿಣ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಎಲ್ಲ ಪ್ರತಿಪಕ್ಷಗಳೂ ಭಿನ್ನಮತ ಮರೆತು ಒಂದಾಗಿ ಇಮ್ರಾನ್‌ ಖಾನ್‌ ವಿರುದ್ಧ ಅವಿಶ್ವಾಸ ಮತ ಮಂಡನೆಗೆ ಮುಂದಾಗಿದೆ. ಸದ್ಯ ಅವಿಶ್ವಾಸ ನಿರ್ಣಯದ ಕುರಿತು ನಡೆದ ಸಂಸತ್‌ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಆಗದೆಯೇ ಅಧಿವೇಶನ ಮುಂದೂಡಿಕೆ ಆಗಿದೆ. ಮಾರ್ಚ್ 28 ರಂದು ಅಧಿವೇಶನ ನಡೆಯಲಿದ್ದು, ಇಮ್ರಾನ್‌ ಖಾನ್‌ ತನ್ನ ರಾಜಕೀಯ ಉಳಿವಿಗಾಗಿ ಒದ್ದಾಡುವಂತಾಗಿದೆ.

ಇಂದು ಪಾಕಿಸ್ತಾನ ಸಂಸತ್‌ ಅಧಿವೇಶನ ನಡೆದಿದ್ದು, ಈ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಆಗಿಲ್ಲ. ಬದಲಾಗಿ ಅಧಿವೇಶನ ಮುಂದೂಡಿಕೆ ಮಾಡಲಾಗಿದೆ. ಈ ನಡುವೆ ಪಕ್ಷದ ಮುಖ್ಯಸ್ಥರು ನೀಡಿದ ನಿರ್ದೇಶನವನ್ನು ಉಲ್ಲಂಘಿಸಿ ತಮ್ಮ ಮತ ಚಲಾಯಿಸದಂತೆ ಸದಸ್ಯರನ್ನು ನಿರ್ಬಂಧಿಸುವ ಅಧಿಕಾರ ಸಂಸತ್‌ ಸ್ಪೀಕರ್‌ಗೆ ಇದೆ ಎಂದು ಇಮ್ರಾನ್‌ ಸಹಾಯಕ ತಿಳಿಸಿದ್ದಾರೆ.

ಪಾಕ್‌ನಲ್ಲಿ ವಿಪಕ್ಷಗಳ ಯಾರ್ಕರ್: ಪತನದತ್ತ ಇಮ್ರಾನ್ ಖಾನ್ ಸರಕಾರ?ಪಾಕ್‌ನಲ್ಲಿ ವಿಪಕ್ಷಗಳ ಯಾರ್ಕರ್: ಪತನದತ್ತ ಇಮ್ರಾನ್ ಖಾನ್ ಸರಕಾರ?

ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸುಮಾರು 100 ಶಾಸಕರು ಮಾರ್ಚ್ 8 ರಂದು ರಾಷ್ಟ್ರೀಯ ವಿಧಾನಸಭೆ ಸಚಿವಾಲಯದ ಮುಂದೆ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದರು. ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರಕ್ಕೆ ಖಾನ್ ನೇತೃತ್ವದ ಪಿಟಿಐ ಸರ್ಕಾರ ಕಾರಣವಾಗಿದೆ ಎಂದು ಆರೋಪಿಸಿದರು.

Pakistan PM Imran Khans plea to disqualify rebels hits a legal wall

ಇಮ್ರಾನ್‌ ಖಾನ್‌ನ ಪಿಟಿಐ ಪಕ್ಷದ 23 ಸಂಸದರೂ ಕೂಡಾ ಇಮ್ರಾನ್‌ ಖಾನ್‌ ಜೊತೆಯಾಗಿದ್ದಾರೆ. ಸರ್ಕಾರ ರಚನೆ ಮಾಡಬೇಕಾದರೆ, 172 ಸಂಸದರ ಬಲ ಅಗತ್ಯವಾಗಿದೆ. ಬಂಡಾಯದ ಕಾರಣ ಕೇವಲ 155 ಸಂಸದರ ಬೆಂಬಲ ಹೊಂದಿ ಇಮ್ರಾನ್‌ ಖಾನ್‌ ಪರದಾಡುವಂತಾಗಿದೆ. ಮಾರ್ಚ್ 28ರಂದು ಅವರ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.

ಏನೇ ಆದರೂ ರಾಜೀನಾಮೆ ಕೊಡಲ್ಲ ಎಂದ ಇಮ್ರಾನ್‌ ಖಾನ್‌

ಸದ್ಯ ಪಾಕಿಸ್ತಾನ ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹ ಮಾಡುತ್ತಿದೆ. ಆದರೆ ಇಮ್ರಾನ್‌ ಖಾನ್‌ ಮಾತ್ರ ಏನೇ ಆದರೂ ನಾನು ರಾಜೀನಾಮೆ ನೀಡಲಾರೆ ಎಂದು ಹೇಳಿದ್ದಾರೆ. "ನಾನು ಎಂದಿಗೂ ಹೋರಾಟ ಮಾಡದೆಯೇ ಶರಣಾಗುವುದಿಲ್ಲ.ಕೆಲವು ದ್ರೋಹಿಗಳು ಒತ್ತಡವನ್ನು ಹಾಕುತ್ತಾರೆ. ಅದನ್ನು ನಾನೇಕೆ ಸಹಿಸಿಕೊಳ್ಳಬೇಕು, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ," ಎಂದಿದ್ದಾರೆ.

ಪಾಕ್ ಪ್ರಧಾನಿ ಹುದ್ದೆಗೆ ಶೆಹಬಾಜ್ ಅಭ್ಯರ್ಥಿ: ಇಮ್ರಾನ್‌ ಆಟ ಅಂತ್ಯ ಎಂದ ವಿಪಕ್ಷ ನಾಯಕಿಪಾಕ್ ಪ್ರಧಾನಿ ಹುದ್ದೆಗೆ ಶೆಹಬಾಜ್ ಅಭ್ಯರ್ಥಿ: ಇಮ್ರಾನ್‌ ಆಟ ಅಂತ್ಯ ಎಂದ ವಿಪಕ್ಷ ನಾಯಕಿ

ಪಾಕಿಸ್ತಾನದ ಸಂಸತ್ತು ಗುರುವಾರ ರಾತ್ರಿ 15 ಅಂಶಗಳ ಅಜೆಂಡಾ ಬಿಡುಗಡೆ ಮಾಡಿದೆ. ಇದರಲ್ಲಿ ಅವಿಶ್ವಾಸ ನಿರ್ಣಯ ಗೊತ್ತುವಳಿಯೂ ಸೇರಿದೆ. ಸದ್ಯ ಸಂಸತ್‌ ಅಧಿವೇಶನ ಮುಂದೂಡಿಕೆ ಆದ ಹಿನ್ನೆಲೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಭವಿಷ್ಯ ಮಾರ್ಚ್ 28ರಂದು ನಿರ್ಧಾರ ಆಗುವ ಸಾಧ್ಯತೆ ಇದೆ.

ಏತಕ್ಕಾಗಿ ಇಮ್ರಾನ್‌ ಖಾನ್‌ ವಿರುದ್ಧ ಪ್ರತಿಪಕ್ಷಗಳ ಆಕ್ರೋಶ?

"ಇಮ್ರಾನ್‌ ಖಾನ್‌ ದೇಶದ ಪ್ರಧಾನ ಮಂತ್ರಿಯಾಗಿ ಆರ್ಥಿಕತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಹಣದುಬ್ಬರ ಪ್ರಮಾಣ ಎರಡಂಕಿಗೆ ಹೆಚ್ಚಾಗಿರುವ ಕಾರಣ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಜನಸಾಮಾನ್ಯರಲ್ಲಿ ಸರ್ಕಾರದ ಬಗ್ಗೆ ಅಸಮಾಧಾನ ಇದೆ. ರಾಜಕೀಯ ಭವಿಷ್ಯಕ್ಕೆ ಆತಂಕ ತಂದೊಡ್ಡಿದೆ," ಎಂದು ಆರೋಪ ಮಾಡಿದೆ. ವಿರೋಧ ಪಕ್ಷಗಳ ನಾಯಕರ ವಿರುದ್ಧ ಆಡಳಿತಾರೂಢ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ನಡೆದುಕೊಂಡ ರೀತಿಯ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿದೆ.

ಇಮ್ರಾನ್ ಖಾನ್ ಅವರ 20ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಸದಸ್ಯರು ಇತ್ತೀಚೆಗೆ ಪಕ್ಷಾಂತರ ಮಾಡಿದ್ದರು. ಪಾಕಿಸ್ತಾನದ ಸಂಸತ್ತು 342 ಸದಸ್ಯ ಬಲ ಹೊಂದಿದೆ. ಅಧಿಕಾರಕ್ಕೆ ಬರಲು 172 ಸದಸ್ಯ ಬಲ ಬೇಕು. ಇಮ್ರಾನ್​ ಖಾನ್​ರ ಪಿಟಿಐ ನೇತೃತ್ವದ ಮೈತ್ರಿಕೂಟವು 179 ಸದಸ್ಯಬಲ ಹೊಂದಿದೆ. ಪಿಟಿಐ ಪಕ್ಷದ 155 ಸಂಸದರು ಸಂಸತ್ತಿನಲ್ಲಿದ್ದಾರೆ.

English summary
Pakistan PM Imran Khan's plea to disqualify rebels hits a legal wall, PM Imran Khan fights for his political survival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X