ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಮ್ರಾನ್ ಖಾನ್ ಆಸ್ತಿ 10.8 ಕೋಟಿ; 4 ಮೇಕೆ, 150 ಎಕರೆ ಕೃಷಿ ಭೂಮಿ

By ಆನಿಲ್ ಆಚಾರ್
|
Google Oneindia Kannada News

ಇಸ್ಲಾಮಾಬಾದ್, ಜುಲೈ 3: ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಬಳಿ 10.8 ಕೋಟಿ ಮೌಲ್ಯದ ಆಸ್ತಿ, ಭೂಮಿ, ನಾಲ್ಕು ಮೇಕೆ ಇದೆ. ಆದರೆ ಸ್ವಂತ ಕಾರು ಹೊಂದಿಲ್ಲ. ಅಂದಹಾಗೆ ಈ ಮಾಹಿತಿಯನ್ನು ಚುನಾವಣೆ ಆಯೋಗ ಬಿಡುಗಡೆ ಮಾಡಿದೆ. ಪ್ರಮುಖ ರಾಜಕಾರಣಿಗಳ ಆಸ್ತಿ ವಿವರವನ್ನು ಪಾಕಿಸ್ತಾನ ಚುನಾವಣೆ ಆಯೋಗ ಮಂಗಳವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಪ್ರಧಾನಿ ಇಮ್ರಾನ್ ಆಸ್ತಿ ಮಾಹಿತಿಯೂ ಇದೆ.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅತ್ಯಂತ ಸಿರಿವಂತ ರಾಜಕಾರಣಿ. ಅವರ ನಿವ್ವಳ ಆಸ್ತಿ ಮೌಲ್ಯ 150 ಕೋಟಿ ರುಪಾಯಿ. ಇನ್ನು ಅವರ ಹೆಸರಲ್ಲಿ ದುಬೈನಲ್ಲಿ ಎರಡು ವಿಲ್ಲಾ ಕೂಡ ಇದೆ.

ತೆರಿಗೆ ಸಂಗ್ರಹ: ಮೋದಿ ದಾರಿ ಅನುಕರಿಸಿದ ಇಮ್ರಾನ್ ಖಾನ್ತೆರಿಗೆ ಸಂಗ್ರಹ: ಮೋದಿ ದಾರಿ ಅನುಕರಿಸಿದ ಇಮ್ರಾನ್ ಖಾನ್

ಇನ್ನು ಪ್ರಧಾನಿ ಇಮ್ರಾನ್ ಖಾನ್ ತಮ್ಮ ವಿಲಾಸಿ ಬನಿಲ್ ಗಾಲ ಮನೆಯನ್ನು ಉಡುಗೊರೆ ಎಂದು ತೋರಿಸಿದ್ದು, ಅದರ ಮೌಲ್ಯವನ್ನು ದಾಖಲಿಸಿಲ್ಲ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಅಧ್ಯಕ್ಷರೂ ಆದ ಇಮ್ರಾನ್ ಖಾನ್, ನಾಲ್ಕು ವಿದೇಶಿ ಕರೆನ್ಸಿ ಬ್ಯಾಂಕ್ ಖಾತೆಯಲ್ಲಿ ಹೂಡಿಕೆ ಮಾಡಿರುವುದಾಗಿ ತಿಳಿಸಿದ್ದಾರೆ.

Pakistan PM Imran Khan asset 10.8 crore; 4 goat, 150 acre agriculture land

ಆದರೆ, ಇಮ್ರಾನ್ ಖಾನ್ ಬಳಿ ವೈಯಕ್ತಿಕವಾದ ಕಾರು ಇಲ್ಲ. ಆದರೆ ಎರಡು ಕೋಟಿಗೂ ಹೆಚ್ಚು ನಗದು ಇದೆ. ಎರಡು ರಾಷ್ಟ್ರೀಯ ಬ್ಯಾಂಕ್ ನಲ್ಲಿ ತೊಂಬತ್ತಾರು ಲಕ್ಷ ಇದೆ. ತನ್ನ ಪತ್ನಿ ಬುಶ್ರಾ ಬೀಬೀ ಹೆಸರಲ್ಲಿ ಇರುವ ಆಸ್ತಿಯ ವಿವರವನ್ನು ನೀಡಿದ್ದಾರೆ. ಅವರಿಗೆ ಬನಿ ಗಾಲದಲ್ಲಿ ಮನೆ ಇದ್ದು, ಓಕಾರ ಹಾಗೂ ಪಾಕ್ ಪಟ್ಟಣ್ ನಲ್ಲಿ ಭೂಮಿ ಇದೆ.

ಇತರ ಆಸ್ತಿಗಳ ಪಟ್ಟಿಯಲ್ಲಿ ತಲಾ ಐವತ್ತು ಸಾವಿರ ಮೌಲ್ಯದ ನಾಲ್ಕು ಮೇಕೆ ಹಾಗೂ ನೂರೈವತ್ತು ಎಕರೆ ಕೃಷಿ ಭೂಮಿ ಇಮ್ರಾನ್ ಖಾನ್ ಬಳಿ ಇದೆ. ಇನ್ನು ಮಾಜಿ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಬಳಿ ಅರವತ್ತಾರು ಕೋಟಿಯ ಆಸ್ತಿ ಇದ್ದು, ಒಂದು ಕೋಟಿ ಮೌಲ್ಯದ ಪ್ರಾಣಿಗಳು, ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ಶಸ್ತ್ರಾಸ್ತ್ರ ಇದೆ.

English summary
Pakistan Election Commission announced asset details of prominent politicians of Pakistan, including PM Imran Khan on Tuesday. Here is the asset details of Pakistan politicians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X