ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಫೀಜ್ ಸಯೀದ್ ಶಾಲೆಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸ್ಥಳಾಂತರ

|
Google Oneindia Kannada News

ಇಸ್ಲಾಮಾಬಾದ್, ಜೂನ್ 18: ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್‌ನ ಜಮಾತ್ ಉದ್ ದವಾ (ಜೆಯುಡಿ) ಮತ್ತು ಫಾಲಾಹ್ ಇ ಇನ್ಸಾನೈತ್ ಫೌಂಡೇಷನ್ (ಎಫ್‌ಐಎಫ್) ಶಾಲೆಗಳಲ್ಲಿನ ವಿದ್ಯಾರ್ಥಿಗಳನ್ನು ಸರ್ಕಾರ ಸ್ವಾಮ್ಯದ ಶಾಲೆಗಳಿಗೆ ವರ್ಗಾಯಿಸಲು ಪಾಕಿಸ್ತಾನ ಸರ್ಕಾರ ಉದ್ದೇಶಿಸಿದೆ.

ಪಾಕ್ ಸೇನೆ, ಬೇಹುಗಾರಿಕೆ ಸಂಸ್ಥೆ ಐಎಸ್ ಐ ಟೀಕಾಕಾರನ ಹತ್ಯೆಪಾಕ್ ಸೇನೆ, ಬೇಹುಗಾರಿಕೆ ಸಂಸ್ಥೆ ಐಎಸ್ ಐ ಟೀಕಾಕಾರನ ಹತ್ಯೆ

ಈ ಸಂಸ್ಥೆಗಳಿಗೆ ಸರ್ಕಾರವು 180 ಕೋಟಿ ರೂ ಅನುದಾನ ಹಂಚಿಕೆ ಮಾಡಿರುವುದಕ್ಕೆ ಹಣಕಾಸು ಕಾವಲುನಾಯಿ ಆರ್ಥಿಕ ಕಾರ್ಯ ಕ್ರಿಯಾ ದಳ (ಎಫ್‌ಎಟಿಎಫ್) ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ.

ಕೊನೆಗೂ ಪ್ರಧಾನಿ ಮೋದಿ-ಇಮ್ರಾನ್ ಖಾನ್ ಉಭಯಕುಶಲೋಪರಿ ವಿನಿಮಯಕೊನೆಗೂ ಪ್ರಧಾನಿ ಮೋದಿ-ಇಮ್ರಾನ್ ಖಾನ್ ಉಭಯಕುಶಲೋಪರಿ ವಿನಿಮಯ

ಮಾರ್ಚ್‌ ತಿಂಗಳಿನಲ್ಲಿ ಜೆಯುಡಿ ಮತ್ತು ಎಫ್‌ಐಎಫ್ ಸಂಸ್ಥೆಗಳ ಅನೇಕ ಶಾಲೆಗಳನ್ನು ತನ್ನ ವಶಕ್ಕೆ ತೆಗೆದುಕೊಂಡರೂ ಅವುಗಳನ್ನು ನಡೆಸುತ್ತಿರುವುದಕ್ಕೆ ಎಫ್‌ಎಟಿಎಫ್ ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿ ಈ ಶಾಲೆ ಹಾಗೂ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳನ್ನು ಸರ್ಕಾರಿ ಸ್ವಾಮ್ಯದ ಶಾಲೆಗಳಿಗೆ ಸ್ಥಳಾಂತರಿಸಲು ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ.

Pakistan plans to shift hafiz saeed jud school students government institutions

ಸರ್ಕಾರ ಸಂಸ್ಥೆಗಳನ್ನು ತನ್ನ ಅಧೀನಕ್ಕೆ ತೆಗೆದುಕೊಂಡಿದ್ದರೂ ಜೆಯುಡಿ ಹಾಗೂ ಎಫ್ಐಎಫ್‌ನ ಕಾರ್ಯಕರ್ತರು ತಮ್ಮ ಶಿಕ್ಷಣ ಸಂಸ್ಥೆಗಳೊಂದಿಗೆ ಹೇಗೋ ನಂಟು ಉಳಿಸಿಕೊಂಡಿದ್ದಾರೆ. ಇದರಿಂದ ಸರ್ಕಾರವು ಈ ಸಂಸ್ಥೆಗಳಿಂದ ಕಾರ್ಯಕರ್ತರ ಒಡನಾಟವನ್ನು ತಪ್ಪಿಸಲು ವಿಫಲವಾಗುತ್ತಿದೆ ಎಂದು ಎಫ್‌ಎಟಿಎಫ್‌ಗೆ ಅನಿಸಿದೆ. ಹೀಗಾಗಿ ಇಷ್ಟು ಭಾರಿ ಮೊತ್ತದ ಹಣವನ್ನು ಸಂಸ್ಥೆಗಳಿಗೆ ಹಂಚಿಕೆ ಮಾಡಿರುವುದಕ್ಕೆ ಅದು ಆಕ್ಷೇಪ ವ್ಯಕ್ತಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Pakistan is thinking to shift the students of Mumbai attack mastermind Hafiz Saeed's Jud and FIF to the government run schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X