ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

97 ಮಂದಿ ಸಾವಿಗೆ ಕಾರಣವಾಗಿದ್ದ ಪಾಕಿಸ್ತಾನ ವಿಮಾನ ಪತನದ ಕಾರಣ ಬಹಿರಂಗ

|
Google Oneindia Kannada News

ಇಸ್ಲಾಮಾಬಾದ್, ಜೂನ್ 24: ಒಂದು ತಿಂಗಳ ಹಿಂದೆ ನಡೆದ ಪಾಕಿಸ್ತಾನ ವಿಮಾನ ಪತನಕ್ಕೆ ಕಾರಣ ಬಹಿರಂಗಗೊಂಡಿದೆ.

ವಿಮಾನ ಅಪಘಾತದಲ್ಲಿ 97 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು. ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷವಿರಲಿಲ್ಲ, ಮನುಷ್ಯರಿಂದಲೇ ಆಗಿರುವ ತಪ್ಪು ಎಂಬುದು ದೃಢಪಟ್ಟಿದೆ.

ಪಾಕಿಸ್ತಾನ ವಿಮಾನ ದುರಂತದಲ್ಲಿ 97 ಜನರು ಸಾವುಪಾಕಿಸ್ತಾನ ವಿಮಾನ ದುರಂತದಲ್ಲಿ 97 ಜನರು ಸಾವು

ಪೈಲಟ್ ಹಾಗೂ ಏರ್ ಟ್ರಾಫಿಕ್ ಕಂಟ್ರೋಲರ್ ಮಾಡಿರುವ ತಪ್ಪಿನಿಂದ 97 ಮಂದಿ ಪ್ರಾಣತೆರಬೇಕಾಯಿತು.ಪಾಕಿಸ್ತಾನ ಏರ್‌ಲೈನ್ಸ್‌(ಪಿಐಎ) ಮೇ 22 ರಂದು ಕರಾಚಿ ಏರ್‌ ಪೋರ್ಟ್‌ ಬಳಿ ಅಪಘಾತಕ್ಕೀಡಾಗಿತ್ತು. ಇಬ್ಬರನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಯಾಣಿಕರು ಮೃತಪಟ್ಟಿದ್ದರು.

Pakistan Plane Crash Due To Human Error, Pilots Were Discussing COVID-19

ಪೈಲಟ್ ಹಾಗೂ ಕಂಟ್ರೋಲರ್ ನಿಯಮವನ್ನು ಸರಿಯಾಗಿ ಪಾಲಿಸಿರಲಿಲ್ಲ. ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಕೊರೊನಾವೈರಸ್ ವಿಷಯವಾಗಿ ಚರ್ಚೆ ಮಾಡುತ್ತಿದ್ದರು ಎನ್ನಲಾಗಿದೆ.

ವಿಮಾನ ಲ್ಯಾಂಡಿಂಗ್ ಕುರಿತು ನೀಡುವ ಸೂಚನೆಗಳನ್ನು ಪಾಲಿಸದೇ ಕೊರೊನಾ ವೈರಸ್ ವಿಚಾರವನ್ನು ಮಾತನಾಡಿದ್ದಕ್ಕಾಗಿ ಈ ಅವಘಡ ಸಂಭವಿಸಿದೆ. ಪಾಕಿಸ್ತಾನ ತನಿಖಾ ತಂಡವು ವಾಯ್ಸ್ ರೆಕಾರ್ಡ್‌ನ್ನು ಬಿಡುಗಡೆ ಮಾಡಿದೆ. ಕಳೆದ ಎಂಟು ವರ್ಷಗಳಿಂದ ಮೊದಲ ಬಾರಿ ಇಂತಹ ಅಪಘಾತ ಸಂಭವಿಸಿದೆ ಎಂದು ಸಚಿವ ಗುಲಾಬ್ ಸರ್ವರ್ ಖಾನ್ ಹೇಳಿದ್ದಾರೆ.

English summary
A plane crash which killed 97 people in Pakistan last month was because of human error by the pilot and air traffic control, according to an initial report into the disaster released Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X