ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ಗೂ ಕೊರೊನಾ ಆತಂಕ

|
Google Oneindia Kannada News

ಇಸ್ಲಾಮಾಬಾದ್​, ಏಪ್ರಿಲ್ 21: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೂ ಕೊರೊನಾ ಆತಂಕ ಎದುರಾಗಿದೆ.

ಇಡೀ ಜಗತ್ತಿನ ನಿದ್ದೆಗೆಡಿಸಿರುವ ಕೊರೊನಾ ವೈರಸ್‌ ಈಗ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರಲ್ಲಿ ಆತಂಕ ಸೃಷ್ಟಿಸಿದ್ದು, ಕೊರೊನಾ ಸೋಂಕು ತಗುಲುವ ಭೀತಿಯಲ್ಲಿದ್ದಾರೆ.

ಸಂಕಷ್ಟದಲ್ಲೂ ಮಾಡಬಾರದ ಕೆಲಸ ಮಾಡುತ್ತಿರುವ ಪಾಕಿಸ್ತಾನ ಸಂಕಷ್ಟದಲ್ಲೂ ಮಾಡಬಾರದ ಕೆಲಸ ಮಾಡುತ್ತಿರುವ ಪಾಕಿಸ್ತಾನ

ಹೌದು, ಪಾಕಿಸ್ತಾನದ ಪ್ರಮುಖ ಸಮಾಜ ಸೇವಕ ಅವರ ಪುತ್ರರೊಬ್ಬರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಈ ವ್ಯಕ್ತಿ ಕೆಲವೇ ದಿನಗಳ ಹಿಂದೆ ಇಮ್ರಾನ್‌ ಖಾನ್‌ ಅವರನ್ನು ಭೇಟಿಯಾಗಿದ್ದರಿಂದ ಈಗ ಪಾಕ್‌ ಪ್ರಧಾನಿಗೂ ಕೊರೊನಾ ಭೀತಿ ಶುರುವಾಗಿದೆ.

ಇದಿ ಫೌಂಡೇಶನ್​ನ ಮುಖ್ಯಸ್ಥ ಫೈಸಲ್​ ಇದಿ ಕೆಲದಿನಗಳ ಹಿಂದಷ್ಟೆ ಇಮ್ರಾನ್​ ಖಾನ್​ರನ್ನು ಭೇಟಿಯಾಗಿದ್ದರು. ಕೊರೊನಾ ಸೋಂಕಿನ ನಿರ್ಮೂಲನೆಗೆ ಒಂದು ಕೋಟಿ ರೂಪಾಯಿಗಳನ್ನು ನೀಡಿದ್ದರು. ಈ ವೇಳೆ ಇಮ್ರಾನ್​ ಖಾನ್​ರ ಕೈ ಕುಲುಕಿ ಅವರ ಕಚೇರಿಯಲ್ಲಿ ನಡೆದ ಮಾತುಕತೆ ವೇಳೆ ಸುಮಾರು ಅರ್ಧಗಂಟೆ ಕುಳಿತಿದ್ದರು. ಸದ್ಯ ಇದಿ ಅವರಿಗೆ ನಿನ್ನೆ ನಡೆಸಿದ ಕೊರೊನಾ ಸೋಂಕಿನ ತಪಾಸಣೆಯಲ್ಲಿ ವರದಿ ಪಾಸಿಟಿವ್ ಬಂದಿದೆ.

Pakistan Philanthropist’s Son Tests Positive For COVID-19

ಹೀಗಾಗಿ ಪ್ರಧಾನಿ ಕಾರ್ಯಾಲಯದ ಸಿಬ್ಬಂದಿಯು ಸೇರಿದಂತೆ ಪ್ರಧಾನಿ ಇಮ್ರಾನ್​ ಖಾನ್​ರ ಕೊರೊನಾ ಸೋಂಕು ತಪಾಸಣೆಗೆ ನಿರ್ಧರಿಸಲಾಗಿದೆ ಎಂದು ಅಲ್ಲಿನ ಕೆಲನ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಸದ್ಯ ಕೊರೊನಾ ತಪಾಸಣೆಯನ್ನು ಮಾಡಿಸಿಕೊಳ್ಳುವುದಾ? ಅಥವಾ ಬಿಡುವುದಾ? ಅನ್ನೋದನ್ನ ಇಮ್ರಾನ್​ ಖಾನ್​ ಅವರೇ ನಿರ್ಧರಿಸಲಿದ್ದಾರೆ ಅಂತಾ ಅವರ ಆಪ್ತ ಡಾ. ಫೈಸಲ್ ಸುಲ್ತಾನ್​ ಹೇಳಿದ್ದಾರೆ.

ಆದರೆ, ಇದುವರೆಗೂ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಕೊರೊನಾ ಟೆಸ್ಟ್‌ಗೆ ಒಳಗಾಗುತ್ತಾರೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸ್ಯಾಂಪಲ್‌ ನೀಡುವುದಕ್ಕಿಂತ ನಾಲ್ಕು ದಿನದ ಮುನ್ನ ಕೊರೊನಾ ಲಕ್ಷಣಗಳು ಫೈಸಲ್‌ ಅವರಲ್ಲಿ ಕಂಡಿವೆ.

ಅದಾದ ನಂತರ ಕೊರೊನಾ ಪಾಸಿಟಿವ್‌ ಇರುವುದು ದೃಢವಾಗಿದೆ ಎಂದು ಅವರ ಮಗ ಸಾಧ್‌ ಹೇಳಿದ್ದಾರೆ. ಸದ್ಯಕ್ಕೆ ಫೈಸಲ್‌ ಇಸ್ಲಮಾಬಾದ್‌ನಲ್ಲಿದ್ದು ಉತ್ತಮವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

English summary
The son of a well-known Pakistani philanthropist, who met Prime Minister Imran Khan last week, has been tested positive for COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X