ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಅಣು ಬಾಂಬ್ ಪಿತಾಮಹ ಡಾ. ಖಾನ್ ಇನ್ನಿಲ್ಲ

|
Google Oneindia Kannada News

ಇಸ್ಲಾಮಾಬಾದ್, ಅಕ್ಟೋಬರ್ 10: ಪಾಕಿಸ್ತಾನದ ಅಣು ಬಾಂಬ್ ಪಿತಾಮಹ ಎಂದೇ ಖ್ಯಾತರಾಗಿದ್ದ ವಿಜ್ಞಾನಿ ಅಬ್ದುಲ್ ಖಾದರ್ ಖಾನ್ ನಿಧನರಾಗಿದ್ದಾರೆ ಎಂದು ಜಿಯೋ ಟಿವಿ ವರದಿ ಮಾಡಿದೆ.

ಮುಸ್ಲಿಂ ರಾಷ್ಟ್ರಗಳು ಮೊದಲ ಬಾರಿಗೆ ಅಣು ಬಾಂಬ್ ಹೊಂದುವ ಸಾಧ್ಯತೆಯನ್ನು ನಿಜವಾಗಿಸಿದ್ದು ಡಾ. ಎಕ್ಯೂ ಖಾನ್ ಎನ್ನಬಹುದು. ಶನಿವಾರ ರಾತ್ರಿ ಖಾನ್ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ಅವರನ್ನು ಕೆಆರ್ ಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು,ಶ್ವಾಸಕೋಶದಲ್ಲಿ ಸಮಸ್ಯೆ ಉಂಟಾಗಿ, ರಕ್ತಸ್ರಾವವಾಗುತ್ತಿತ್ತು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ. ಇಸ್ಲಾಮಾಬಾದ್ ಫೈಸಲ್ ಮಸೀದಿಯಲ್ಲಿ ಸರ್ಕಾರಿ ಗೌರವದೊಂದಿಗೆ ಅಂತಿಮ ವಿಧಿವಿಧಾನಗಳು ನೆರವೇರಲಿದೆ.

ಲಾಡೆನ್ ಗೆ ಅಣ್ವಸ್ತ್ರ ಮಾರಲು ಮುಂದಾಗಿದ್ದ ಖಾನ್?
ಒಸಾಮಾ ಬಿನ್ ಲಾಡೆನ್ ಅಣ್ವಸ್ತ್ರ ಖರೀದಿಸಲು ಆಸಕ್ತಿ ಹೊಂದಿದ್ದ. ಆದರೆ ನಂತರ ಆತ ಇದ್ದಕ್ಕಿದ್ದಂತೆಯೇ ಸಂಗಡಿರೊಂದಿಗೆ ಅಫ್ಘಾನಿಸ್ತಾನದ ವಾಯುವ್ಯ ಪ್ರಾಂತ್ಯದ ತಪ್ಪಲಿಗೆ ತೆರಳಿದ್ದರಿಂದ ವ್ಯವಹಾರ ಕುದುರಲಿಲ್ಲ, ನಂತರ ಖಾನ್ ಅವರು ಆತನನ್ನು ಭೇಟಿ ಮಾಡಲಿಲ್ಲ ಎಂದು ಖಾನ್ ಅವರ ಕುರಿತ ಆತ್ಮಚರಿತ್ರೆ 'ದಿ ಮ್ಯಾನ್ ಫ್ರಮ್ ಪಾಕಿಸ್ತಾನ'ದಲ್ಲಿ ಬರೆಯಲಾಗಿದೆ. ಈ ಪುಸ್ತಕ ಬರೆದಿರುವ ಡಗ್ಲಾಸ್ ಫ್ರಾಂಜ್ ಹಾಗೂ ಕ್ಯಾಥರೀನ್ ಕೂಲಿನ್ಸ್ ಪ್ರಕಾರ, ಎ ಕ್ಯೂ ಖಾನ್ ಅವರ ಸಹ ಉದ್ಯೋಗಿಗಳಾದ ಚೌಧರಿ ಅಬ್ಧುಲ್ ಮಜೀದ್ ಹಾಗೂ ಸುಲ್ತಾನ್ ಬಶೀರುದ್ದೀನ್ ಇಬ್ಬರು 2001 ರ ಅಗಸ್ಟ್ ಮಧ್ಯಭಾಗದಲ್ಲಿ ಕಂದಹಾರ್‌ನಲ್ಲಿ ಬಿನ್ ಲಾಡೆನ್ ಜತೆ ಮೂರು ದಿನ ಕಳೆದಿದ್ದರು.

Pakistan Nuclear scientist Dr Abdul Qadeer Khan passes away

ಭಾರತದ ಭೋಪಾಲ್ ನಲ್ಲಿ 1936ರ ಏಪ್ರಿಲ್ 1ರಂದು ಜನಿಸಿದ ಡಾ. ಅಬ್ದುಲ್ ಖಾದರ್ ಖಾನ್ ಅವರು ಪಾಕಿಸ್ತಾನ ಅಣು ವಿಜ್ಞಾನಿಯಾಗಿ ಬೆಳೆದರು. 1947ರಲ್ಲಿ ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಕುಟುಂಬದ ಪೈಕಿ ಖಾನ್ ಅವರ ಕುಟುಂಬವೂ ಸೇರಿತ್ತು. 1967ರಲ್ಲಿ ನೆದರ್ಲೆಂಡ್ ದೇಶದಲ್ಲಿ ಪದವಿ ಪಡೆದ ಖಾನ್ ನಂತರ ಮೆಟಲರ್ಜಿಯಲ್ಲಿ ಪದವಿಯನ್ನು ಬೆಲ್ಜಿಯಂನಲ್ಲಿ ಪಡೆದುಕೊಂಡರು.

ಪಾಕಿಸ್ತಾನದ ಉನ್ನತ ನಾಗರಿಕ ಪ್ರಶಸ್ತಿ ಗಳಿಸಿದ ಮೊದಲ ವಿಜ್ಞಾನಿ ಎನಿಸಿಕೊಂಡರು. ರಾಷ್ಟ್ರಪತಿಗಳಿಂದ ನಿಶಾನ್ ಎ ಇಮ್ತಿಯಾಜ್ ಪುರಸ್ಕಾರ ಎರಡು ಬಾರಿ ಪಡೆದುಕೊಂಡರು. ಹಿಲಾಲ್ ಎ ಇಮ್ತಿಯಾಜ್ ಒಮ್ಮೆ ಗಳಿಸಿದರು. ಭಾರತದ ಅಣು ವಿಜ್ಞಾನಿ ಡಾ. ಅಬ್ದುಲ್ ಕಲಾಂ ಓರ್ವ ಸಾಧಾರಣ ವಿಜ್ಞಾನಿ ಎಂದು ಹೇಳಿಕೆ ನೀಡಿ ವಿವಾದಕ್ಕೆ ನಾಂದಿ ಹಾಡಿದ್ದರು.

English summary
Pakistan's renowned nuclear scientist Dr Abdul Qadeer Khan, 85, passed away Sunday after his health deteriorated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X