ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್, ರಾಜಕೀಯ, ವಿವಾಹ ವಿಚ್ಛೇದನ : ವಿಕ್ಷಿಪ್ತವ್ಯಕ್ತಿ ಇಮ್ರಾನ್ ಖಾನ್

By Gururaj
|
Google Oneindia Kannada News

ಲಾಹೋರ್, ಜುಲೈ 26 : ಕ್ರಿಕೆಟ್, ರಾಜಕಾರಣ, ವೈಯಕ್ತಿಕ ಜೀವನದ ಸುದ್ದಿಗಳ ಕಾರಣಗಳಿಂದಾಗಿಯೇ ಎಲ್ಲರಿಗೂ ಚಿರಪರಿಚಿತ ಇಮ್ರಾನ್ ಖಾನ್. ಪಾಕಿಸ್ತಾನದಲ್ಲಿ ಚುನಾವಣೆ ಮುಗಿದಿದ್ದು, ಇಮ್ರಾನ್ ಖಾನ್ ದೇಶದ ಪ್ರಧಾನಿ ಪಟ್ಟವೇರಲು ಸಿದ್ಧತೆ ನಡೆಸಿದ್ದಾರೆ.

ಪಾಕಿಸ್ತಾನದ 342 ಸದಸ್ಯ ಬಲದ ಸಂಸತ್ತಿನ್ 272 ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು. ಮತ ಎಣಿಕೆ ಇನ್ನೂ ಪ್ರಗತಿಯಲ್ಲಿದ್ದು, ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್-ತೆಹ್ರಿಕ್-ಇ-ಇನ್ಸಾಫ್ (ಪಿಟಿಐ) ಪಕ್ಷ 100ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಇಮ್ರಾನ್ ಖಾನ್ ಪಾಕ್ ಪ್ರಧಾನಿ? ಜನ್ಮ ಜಾಲಾಡಿದ ಮಾಜಿ ಪತ್ನಿ! ಇಮ್ರಾನ್ ಖಾನ್ ಪಾಕ್ ಪ್ರಧಾನಿ? ಜನ್ಮ ಜಾಲಾಡಿದ ಮಾಜಿ ಪತ್ನಿ!

ಪಾಕಿಸ್ತಾನ ಕ್ರಿಕೆಟ್ ತಂಡದ ಅತ್ಯುತ್ತಮ ಆಲ್‌ ರೌಂಡರ್ ಆಗಿದ್ದ ಇಮ್ರಾನ್‌ ಖಾನ್, ನಿವೃತ್ತಿ ಬಳಿಕ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು. ಈ ಬಾರಿಯ ಚುನಾವಣೆಯಲ್ಲಿ ಪಿಟಿಐ ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಲಿದೆ ಎಂದು ಹಲವು ವಿಶ್ಲೇಷಣೆಗಳು ಹೇಳಿದ್ದವು.

ಪಾಕಿಸ್ತಾನದ ಪ್ರಧಾನಿ ಹುದ್ದೆಯಲ್ಲಿರುವ ನಾಯಕರ ಪರಿಚಯಪಾಕಿಸ್ತಾನದ ಪ್ರಧಾನಿ ಹುದ್ದೆಯಲ್ಲಿರುವ ನಾಯಕರ ಪರಿಚಯ

65 ವರ್ಷದ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಪಟ್ಟಕ್ಕೇರಲು ಸಿದ್ಧರಾಗುತ್ತಿದ್ದಾರೆ. 1996ರಲ್ಲಿ ಪಾಕಿಸ್ತಾನ್-ತೆಹ್ರಿಕ್-ಇ-ಇನ್ಸಾಫ್ ಪಕ್ಷವನ್ನು ಸ್ಥಾಪನೆ ಮಾಡುವ ಮೂಲಕ ಅವರು ರಾಜಕಾರಣ ಆರಂಭಿಸಿದರು..ಇಮ್ರಾನ್ ಖಾನ್ ಪರಿಚಯ ಇಲ್ಲಿದೆ ನೋಡಿ....

ಶ್ರೀಮಂತ ಕುಟುಂಬದಲ್ಲಿ ಜನಿಸಿದ ಇಮ್ರಾನ್ ಖಾನ್

ಶ್ರೀಮಂತ ಕುಟುಂಬದಲ್ಲಿ ಜನಿಸಿದ ಇಮ್ರಾನ್ ಖಾನ್

ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ರಾಜಕಾರಣ ಆರಂಭಿಸಿದ ಇಮ್ರಾನ್ ಖಾನ್, ಕಷ್ಟು ಪಟ್ಟು ರಾಜಕೀಯದಲ್ಲಿ ಮೇಲೆ ಬಂದಿದ್ದಾರೆ. ಈಗ ದೇಶದ ಪ್ರಧಾನಿಯಾಗುವ ಸಿದ್ಧತೆಯಲ್ಲಿದ್ದಾರೆ. ಇಮ್ರಾನ್ ಖಾನ್ ಮೂಲತಃ ಲಾಹೋರ್‌ನವರು.

* ಲಾಹೋರ್‌ನ ಶ್ರೀಮಂತ ಕುಟುಂಬದಲ್ಲಿ ಜನನ
* ಲಾಹೋರ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣ
* 1975ರಲ್ಲಿಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯಿಂದ ಪದವಿ
* ಫಿಲಾಸಫಿ, ರಾಜಕೀಯ ಮತ್ತು ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಪಾಕಿಸ್ತಾನ ಅತಂತ್ರ, ಇಮ್ರಾನ್ ಖಾನ್ ಮ್ಯಾನ್ ಆಫ್ ದ ಮ್ಯಾಚ್ ಪಾಕಿಸ್ತಾನ ಅತಂತ್ರ, ಇಮ್ರಾನ್ ಖಾನ್ ಮ್ಯಾನ್ ಆಫ್ ದ ಮ್ಯಾಚ್

ಪಾಕಿಸ್ತಾನದ ನಾಯಕ

ಪಾಕಿಸ್ತಾನದ ನಾಯಕ

ಇಮ್ರಾನ್ ಖಾನ್ ಪಾಕಿಸ್ತಾನ ತಂಡದ ಆಲ್‌ ರೌಂಡರ್. 80ರ ದಶಕದಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡದಲ್ಲಿದ್ದ ಇಮ್ರಾನ್‌ ಖಾನ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ.

ಕ್ರಿಕೆಟ್‌ ತಂಡದ ನಾಯಕನಾಗಿದ್ದಾಗಲೇ 1992ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಇಮ್ರಾನ್ ಖಾನ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು. ತಾಯಿ ಶೌಖರ್ ಖಾನಂ ಹೆಸರಿನಲ್ಲಿ ಪಾಕಿಸ್ತಾನದ ಮೊದಲ ಕ್ಯಾನ್ಸರ್ ಆಸ್ಪತ್ರೆ ಆರಂಭಿಸಿದರು.

ಲೈಂಗಿಕತೆ, ಮಾದಕದ್ರವ್ಯ, ಸಲಿಂಗಕಾಮ : ಬೆಚ್ಚಿಬೀಳಿಸುವ ಇಮ್ರಾನ್ ಖಾನ್ ಕಥೆ!ಲೈಂಗಿಕತೆ, ಮಾದಕದ್ರವ್ಯ, ಸಲಿಂಗಕಾಮ : ಬೆಚ್ಚಿಬೀಳಿಸುವ ಇಮ್ರಾನ್ ಖಾನ್ ಕಥೆ!

ರಾಜಕೀಯಕ್ಕೆ ಪಾದಾರ್ಪಣೆ

ರಾಜಕೀಯಕ್ಕೆ ಪಾದಾರ್ಪಣೆ

1996ರಲ್ಲಿ ಇಮ್ರಾನ್ ಖಾನ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಪಾಕಿಸ್ತಾನ್-ತೆಹ್ರಿಕ್-ಇ-ಇನ್ಸಾಫ್ (ಪಿಟಿಐ) ಎಂಬ ಪಕ್ಷವನ್ನು ಸ್ಥಾಪನೆ ಮಾಡಿದರು. 2002ರ ಚುನಾವಣೆಯಲ್ಲಿ ಮೊದಲ ಬಾರಿಗೆ ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಜಯಗಳಿಸಿದರು.

ಇಮ್ರಾನ್ ಖಾನ್ ಅವರ ರಾಜಕೀಯ ಪಕ್ಷಕ್ಕೆ ನಿರ್ಧಿಷ್ಟವಾದ ಸಿದ್ದಾಂತಗಳಿಲ್ಲ. ಅವರು ಸಹ ಮುಂಚೂಣಿಯಲ್ಲಿ ನಿಂತು ಹೋರಾಟಗಳನ್ನು ಮಾಡಿಲ್ಲ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಪಿಟಿಐ ಪಕ್ಷದ ಪರವಾದ ಅಲೆ ಎದ್ದಿತ್ತು. ಆದ್ದರಿಂದ, ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದಾರೆ.

ವಿವಾಹದಿಂದಾಗಿಯೇ ಸುದ್ದಿ

ವಿವಾಹದಿಂದಾಗಿಯೇ ಸುದ್ದಿ

ಇಮ್ರಾನ್ ಖಾನ್ ಕ್ರಿಕೆಟ್, ರಾಜಕೀಯ ಹೊರತು ಪಡಿಸಿ ವಿವಾಹದ ವಿಷಯಕ್ಕೆ ವಿಶ್ವದಾದ್ಯಂತ ಸುದ್ದಿಯಾಗಿದ್ದರು. 65 ವರ್ಷದ ಇಮ್ರಾನ್ ಖಾನ್ ಬುಶರಾ ಮನೇಕಾ ಅವರನ್ನು ವಿವಾಹವಾಗಿದ್ದಾರೆ ಇದು ಇಮ್ರಾನ್ ಖಾನ್ 3ನೇ ವಿವಾಹ.

* 1995ರಲ್ಲಿ ಇಮ್ರಾನ್ ಜೆಮಿಯಾ ಖಾನ್‌ರನ್ನು ವಿವಾಹವಾಗಿದ್ದರು. 2004ರಲ್ಲಿ ವಿಚ್ಚೇದನ ಪಡೆದುಕೊಂಡರು.

* 2015ರಲ್ಲಿ ಟಿವಿ ನಿರೂಪಕಿ ರೆಹಮ್ ಖಾನ್ ಜೊತೆ ವಿವಾಹವಾಗಿದ್ದರು. ಕೇವಲ 10 ತಿಂಗಳಿನಲ್ಲಿ ಈ ಮದುವೆ ಮುರಿದುಬಿದ್ದಿತ್ತು.

English summary
Former cricketer Imran Khan Pakistan Tehreek-e-Insaf (PTI) party lead in the Pakistan's elections 2018. Imran Khan may elect as Prime Minister of Pakistan. Who is Imran Khan, here is brief profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X