• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಲ್ವಾಮಾ ಉಗ್ರರ ದಾಳಿ ನಡೆಸಿದ್ದು ನಾವೇ: ಬಹಿರಂಗವಾಗಿ ಒಪ್ಪಿಕೊಂಡ ಪಾಕ್

|

ಇಸ್ಲಾಮಾಬಾದ್, ಅಕ್ಟೋಬರ್ 29: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 2019ರಲ್ಲಿ ನಡೆದ ಉಗ್ರರ ದಾಳಿ ಕೃತ್ಯದಲ್ಲಿ ಪಾಕಿಸ್ತಾನದ ಮುಖವಾಡ ಕಳಚಿಬಿದ್ದಿದೆ. ಇಮ್ರಾನ್ ಖಾನ್ ಅವರ ಆದೇಶದಂತೆ ಈ ಭಯೋತ್ಪಾದನಾ ದಾಳಿ ನಡೆಸಲಾಗಿತ್ತು ಎಂಬುದನ್ನು ಅವರ ಸರ್ಕಾರದ ಸಚಿವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನ ರಾಷ್ಟ್ರೀಯ ಸಂಸತ್‌ನಲ್ಲಿ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಚೌಧರಿ ಫವಾದ್ ಹುಸೇನ್, ಪುಲ್ವಾಮಾ ದಾಳಿಯು ಇಮ್ರಾನ್ ಖಾನ್ ನಾಯಕತ್ವದ ಸರ್ಕಾರದ ಅತ್ಯಂತ ದೊಡ್ಡ ಸಾಧನೆಯಾಗಿದೆ ಎಂದು ಬಣ್ಣಿಸಿದ್ದಾರೆ.

ಅಭಿನಂದನ್ ಬಿಡುಗಡೆಯಾಗದಿದ್ದರೆ ಭಾರತ ದಾಳಿ ಮಾಡಲಿದೆ: ಗಡಗಡ ನಡುಗಿದ್ದ ಪಾಕ್ ಸೇನಾ ಮುಖ್ಯಸ್ಥಅಭಿನಂದನ್ ಬಿಡುಗಡೆಯಾಗದಿದ್ದರೆ ಭಾರತ ದಾಳಿ ಮಾಡಲಿದೆ: ಗಡಗಡ ನಡುಗಿದ್ದ ಪಾಕ್ ಸೇನಾ ಮುಖ್ಯಸ್ಥ

'ನಾವು ಭಾರತವನ್ನು ಅವರ ಭೂಮಿಯಲ್ಲಿಯೇ ಹೊಡೆದಿದ್ದೆವು. ಪುಲ್ವಾಮಾ ದಾಳಿಯು ಇಮ್ರಾನ್ ಖಾನ್ ನಾಯಕತ್ವದಲ್ಲಿನ ಜನರ ಯಶಸ್ಸು. ಆ ಯಶಸ್ಸಿನಲ್ಲಿ ನೀವು ಮತ್ತು ನಾವೆಲ್ಲರೂ ಭಾಗಿಯಾಗಿದ್ದೇವೆ' ಎಂದು ಫವಾದ್ ಹುಸೇನ್ ಸಂಸತ್‌ನಲ್ಲಿ ಹೇಳುತ್ತಿರುವ ವಿಡಿಯೋ ಬಹಿರಂಗವಾಗಿದೆ.

2014ರ ಸಂಸತ್ ದಾಳಿ ಪ್ರಕರಣ: ಇಮ್ರಾನ್‌ ಖಾನ್‌ ಖುಲಾಸೆ2014ರ ಸಂಸತ್ ದಾಳಿ ಪ್ರಕರಣ: ಇಮ್ರಾನ್‌ ಖಾನ್‌ ಖುಲಾಸೆ

ಪುಲ್ವಾಮಾ ದಾಳಿಯ ಬಳಿಕ ಭಾರತವು ಪಾಕಿಸ್ತಾನದ ಗಡಿಯೊಳಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಅದರ ಬೆನ್ನಲ್ಲೇ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಫೈಟರ್ ಜೆಟ್‌ಅನ್ನು ಹೊಡೆದುರುಳಿಸಿತ್ತು. ಆ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಅಭಿನಂದನ್, ಪಾಕಿಸ್ತಾನ ಸೈನಿಕರಿಗೆ ಸೆರೆ ಸಿಕ್ಕಿದ್ದರು. ಅಭಿನಂದನ್ ಅವರನ್ನು ಬಿಡುಗಡೆ ಮಾಡದೆ ಹೋದರೆ ಭಾರತ ದಾಳಿ ನಡೆಸಲಿದೆ ಎಂದು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿದಾಗ ಸೇನಾ ಮುಖ್ಯಸ್ಥ ಖಮರ್ ಬಾಜ್ವಾ ಅವರ ಕಾಲುಗಳು ನಡುಗುತ್ತಿದ್ದವು ಎಂದು ವಿರೋಧಪಕ್ಷದ ನಾಯಕ ಅಯಾಜ್ ಸಾದಿಕ್ ಸಂಸತ್‌ನಲ್ಲಿ ತಿಳಿಸಿದ್ದರು. ಅದರ ಬೆನ್ನಲ್ಲೇ ಈ ವಿಡಿಯೋ ವೈರಲ್ ಆಗಿದೆ.

English summary
Pakistan minister Chaudhry Fawad Hussain described the Pulwama terror attack on India as a great achievement under Imran Khan leadership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X