ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು- ಕಾಶ್ಮೀರ ವಿಚಾರದಲ್ಲಿ ಪಾಕ್ ಬೆಂಬಲಿಸಿದ 58 ದೇಶ ಯಾವುದು? ಸಿಟ್ಟಿಗೆ ಇಷ್ಟು ಸಾಕು

|
Google Oneindia Kannada News

ಇಸ್ಲಾಮಾಬಾದ್, ಅಕ್ಟೋಬರ್ 4: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಮಾತನಾಡುತ್ತಾ ಇಮ್ರಾನ್ ಖಾನ್ ಹೇಳಿದರಲ್ಲಾ, ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ತೆಗೆದುಕೊಂಡಿರುವ ನಿಲುವಿನ ಜತೆಗೆ ಇರುವ ದೇಶಗಳು, ಆ 58 ದೇಶಗಳು ಯಾವುವು ಅಂತ ಕೇಳಿದ್ದಾರೆ ಅಲ್ಲಿನ ಮಾಧ್ಯಮ ಪ್ರತಿನಿಧಿಗಳು. ಪಾಕಿಸ್ತಾನದ ಮಾಧ್ಯಮದವರ ಆ ಪ್ರಶ್ನೆಗೆ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿಗೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ.

ಎಕ್ಸ್ ಪ್ರೆಸ್ ನ್ಯೂಸ್ ಎಂಬ ಪಾಕಿಸ್ತಾನದ ಟಿವಿ ಚಾನೆಲ್ ನ ಟಾಕ್ ಶೋನಲ್ಲಿ ಈ ಪ್ರಶ್ನೆ ಕೇಳಲಾಯಿತು. ಏಕೆಂದರೆ, ಕಾಶ್ಮೀರ ವಿಚಾರದಲ್ಲಿ ತಮ್ಮ ಬೆಂಬಲಕ್ಕೆ ಎಷ್ಟು ದೇಶಗಳಿವೆ ಎಂದು ಇಮ್ರಾನ್ ಖಾನ್ ಹೇಳಿಕೊಂಡು ಬಂದರೋ, ಅಷ್ಟೇ ಸಂಖ್ಯೆಯಲ್ಲಿ ಅಂದರೆ 58 ದೇಶಗಳ ಬೆಂಬಲ ನಮಗಿವೆ ಎಂದು ಖುರೇಷಿ ಸಮರ್ಥನೆ ಮಾಡಿಕೊಂಡು ಬಂದಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಬೆವರಿಳಿಸಿದ ಈ ಮಹಿಳಾ ಅಧಿಕಾರಿ ಬಗ್ಗೆ ಗೊತ್ತೇ?ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಬೆವರಿಳಿಸಿದ ಈ ಮಹಿಳಾ ಅಧಿಕಾರಿ ಬಗ್ಗೆ ಗೊತ್ತೇ?

ನಿರೂಪಕ ಜಾವಿದ್ ಚೌಧರಿ ಪ್ರಶ್ನೆಗೆ ಸಿಟ್ಟಿಗೆದ್ದ ಖುರೇಷಿ, ಯಾರ ಅಜೆಂಡಾಗಾಗಿ ನೀವು ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ಯಾವ ದೇಶಗಳು ಪಾಕಿಸ್ತಾನವನ್ನು ಬೆಂಬಲಿಸಿದವು, ಯಾವುದು ಬೆಂಬಲಿಸಲಿಲ್ಲ ಎಂದು ನೀವು ನನಗೆ ಹೇಳ್ತೀರಾ ಅಥವಾ ನೀವೇ ನಿರ್ಧರಿಸುತ್ತೀರಾ. ನಿಮಗೆ ಏನು ಅನಿಸುತ್ತದೋ ಅದನ್ನು ಬರೆಯುತ್ತೀರಾ ಎಂದಿದ್ದಾರೆ ಖುರೇಷಿ.

 Pakistan Minister Angry Answer To Jammu And Kashmir Question

ಇಮ್ರಾನ್ ಖಾನ್ ಹೇಳಿಕೆಯನ್ನು ಟ್ವಿಟ್ಟರ್ ಖಾತೆಯಲ್ಲಿ ಸಮರ್ಥನೆ ಮಾಡಿಕೊಂಡಿದ್ದನ್ನು ಪ್ರಶ್ನಿಸಿದಾಗ, ಇಲ್ಲ- ಇಲ್ಲ ನಾನು ಬರೆದಿದ್ದನ್ನು ತೋರಿಸಿ, ಪ್ರಧಾನಿ ಖಾನ್ ಬರೆದದ್ದಲ್ಲ. ನೀವು ನನ್ನ ಟ್ವೀಟ್ ಅಂದಿದ್ದೀರಿ. ಅದನ್ನು ನನಗೆ ತೋರಿಸಿ. ನನ್ನ ಟ್ವೀಟ್ ಬೇಕು ಎಂದಿದ್ದಾರೆ.

"ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಯುದ್ಧ ನಡೆದರೆ..."

ಆಗ ಟ್ವೀಟ್ ತೋರಿಸಲಾಗಿದೆ. ಆಗ ಖುರೇಷಿ, ಈ ಟ್ವೀಟ್ ನಲ್ಲಿ ಯಾವುದೇ ತಪ್ಪಿಲ್ಲ. ನಾನು ಹೇಳಿದ್ದಕ್ಕೆ ಬದ್ಧವಾಗಿದ್ದೇನೆ. ಇದರಲ್ಲಿ ಅಚ್ಚರಿ ಆಗುವುದಕ್ಕೆ ಏನಿದೆ. ಯಾರ ಅಜೆಂಡಾವನ್ನು ನೀವು ಅನುಸರಿಸುತ್ತಿದ್ದೀರಿ ಎಂದು ಖುರೇಷಿ ಕೇಳಿದ್ದಾರೆ.

English summary
Pakistan foreign affair minister Shah Mehmood Qureshi angry on question about Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X