ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ: ಕಪ್ಪುಪಟ್ಟಿಗೆ ಸೇರುವ ಸಾಧ್ಯತೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 7: ಆರ್ಥಿಕತೆ ದುಸ್ಥಿತಿಗೆ ತಲುಪಿದ್ದರೂ ಕಾಶ್ಮೀರ ವಿಚಾರದಲ್ಲಿ ಭಾರತದೊಂದಿಗೆ ಮತ್ತೆ ವಿವಾದ ಕೆದಕುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಹಿನ್ನಡೆಯುಂಟಾಗಿದೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಇನ್ನೊಂದು ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ.

ಅಂತಾರಾಷ್ಟ್ರೀಯ ಹಣ ವರ್ಗಾವಣೆಯ ಕಾವಲುನಾಯಿಯಂತೆ ಕೆಲಸ ಮಾಡುತ್ತಿರುವ ಹಣಕಾಸು ಕಾರ್ಯ ಯೋಜನೆ ಪಡೆ (ಎಫ್‌ಎಟಿಎಫ್), ಪಾಕಿಸ್ತಾನವು ಭಯೋತ್ಪಾದನೆಯನ್ನು ನಿಯಂತ್ರಿಸಲು ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದೆ.

ಮುಂಬೈ ದಾಳಿಯ ಪ್ರಮುಖ ಸಂಚುಕೋರ ಹಫೀಜ್ ಸಯೀದ್ ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಘೋಷಿಸಿರುವ ಭಯೋತ್ಪಾದಕರು ಹಾಗೂ ಜೈಶ್ ಎ ಮೊಹಮ್ಮದ್ ಮತ್ತು ಲಷ್ಕರ್ ಎ ತಯಬಾದಂತಹ ಸಂಘಟನೆಗಳ ವಿರುದ್ಧದ ನಿರ್ಣಯವನ್ನು ಸಂಪೂರ್ಣವಾಗಿ ಜಾರಿ ಮಾಡುವಲ್ಲಿ ವಿಫಲವಾಗಿದೆ ಎಂದು ಎಫ್‌ಎಟಿಎಫ್ ಅಸಮಾಧಾನ ವ್ಯಕ್ತಪಡಿಸಿದೆ. ಅತ್ತ ಪಾಕಿಸ್ತಾನ 40 ಮಾನದಂಡಗಳ ಪೈಕಿ 36ರಲ್ಲಿ ಭಾಗಶಃ ಈಡೇರಿಸಿರುವುದರಿಂದ 'ಬೂದು' ಪಟ್ಟಿಯಿಂದ ವಿನಾಯಿತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದೆ.

 ಪಾಕಿಸ್ತಾನಕ್ಕೆ ರಕ್ಷಣಾ ಸಚಿವರ ಎಚ್ಚರಿಕೆ ಪಾಕಿಸ್ತಾನಕ್ಕೆ ರಕ್ಷಣಾ ಸಚಿವರ ಎಚ್ಚರಿಕೆ

ಎಲ್‌ಇಟಿ, ಜೆಯುಡಿ, ಎಫ್‌ಐಐ, ಎಇಎಂಗಳಿಗೆ ಸೇರಿದ 700ಕ್ಕೂ ಅಧಿಕ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಪಾಕಿಸ್ತಾನದ ಸರ್ಕಾರ ಹೇಳಿಕೊಂಡಿದೆ. ಆದರೆ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳುವುದಷ್ಟೇ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ಸೂಚಿಸುವುದಿಲ್ಲ ಎಂದು ಭಾರತ ಹಾಗೂ ಇತರೆ ದೇಶಗಳು ಹೇಳಿವೆ.

ಪಾಕಿಸ್ತಾನ ಸಂಪೂರ್ಣ ವಿಫಲ

ಪಾಕಿಸ್ತಾನ ಸಂಪೂರ್ಣ ವಿಫಲ

228 ಪುಟಗಳ ವರದಿ ಬಿಡುಗಡೆ ಮಾಡಿರುವ ಎಫ್ಎಟಿಎಫ್‌ನ ಪ್ರಾದೇಶಿಕ ಅಂಗ ಏಷ್ಯಾ ಪೆಸಿಫಿಕ್ ಗ್ರೂಪ್ (ಎಪಿಜಿ), ದೇಶದೊಳಗೆ ಇದ್ದು ಮತ್ತು ದೇಶದ ಮೂಲಕ ಚಟುವಟಿಕೆ ನಡೆಸುತ್ತಿರುವ ಭಯೋತ್ಪಾದನಾ ಗುಂಪುಗಳಿಗೆ ಸಂಬಂಧಿಸಿದಂತೆ ಹಣಕಾಸು ವರ್ಗಾವಣೆ, ಭಯೋತ್ಪಾದನಾ ನಿಧಿ ಮುಂತಾದವುಗಳನ್ನು ಗುರುತಿಸುವ ಮತ್ತು ಮೌಲ್ಯಮಾಪನ ಮಾಡುವ ವಿಚಾರದಲ್ಲಿನ 40 ಮಾನದಂಡಗಳಲ್ಲಿ ನಾಲ್ಕು ಮಾನದಂಡಗಳನ್ನು ಮುಟ್ಟುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಹೇಳಿದೆ.

ಜಮ್ಮು- ಕಾಶ್ಮೀರ ವಿಚಾರದಲ್ಲಿ ಪಾಕ್ ಬೆಂಬಲಿಸಿದ 58 ದೇಶ ಯಾವುದು? ಸಿಟ್ಟಿಗೆ ಇಷ್ಟು ಸಾಕುಜಮ್ಮು- ಕಾಶ್ಮೀರ ವಿಚಾರದಲ್ಲಿ ಪಾಕ್ ಬೆಂಬಲಿಸಿದ 58 ದೇಶ ಯಾವುದು? ಸಿಟ್ಟಿಗೆ ಇಷ್ಟು ಸಾಕು

ಮುಂದಿನ ವಾರದೊಳಗೆ ನಿರ್ಧಾರ

ಮುಂದಿನ ವಾರದೊಳಗೆ ನಿರ್ಧಾರ

ಎಫ್ಎಟಿಎಫ್ ಶನಿವಾರ ಈ ವರದಿಯನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 13ರಿಂದ 18ರವರೆಗೆ ನಡೆಯಲಿರುವ ಸಭೆಯಲ್ಲಿ ಪಾಕಿಸ್ತಾನವನ್ನು 'ಗ್ರೇ' ಪಟ್ಟಿಯಲ್ಲಿ ಮುಂದುವರಿಸಬೇಕೇ ಅಥವಾ ಕಪ್ಪು ಪಟ್ಟಿಗೆ ಸೇರಿಸಬೇಕೇ, ಇಲ್ಲವೇ ಅದಕ್ಕೆ ಇನ್ನಷ್ಟು ವಿನಾಯಿತಿ ನೀಡಬೇಕೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಮೂರು ದೇಶಗಳಿಂದಾಗಿ ಪಾಕ್ ಬಚಾವ್

ಮೂರು ದೇಶಗಳಿಂದಾಗಿ ಪಾಕ್ ಬಚಾವ್

39 ಸದಸ್ಯ ರಾಷ್ಟ್ರಗಳಿರುವ ಎಫ್‌ಎಟಿಎಫ್‌ನಲ್ಲಿ ಒಂದು ದೇಶವು ಕಪ್ಪುಪಟ್ಟಿಗೆ ಸೇರಿಕೊಳ್ಳುವುದನ್ನು ತಪ್ಪಿಸಲು ಕನಿಷ್ಠ ಮೂರು ದೇಶಗಳ ಬೆಂಬಲ ಬೇಕು. ಚೀನಾ, ಟರ್ಕಿ ಮತ್ತು ಮಲೇಷ್ಯಾಗಳು ಪಾಕಿಸ್ತಾನಕ್ಕೆ ಪರವಾಗಿರುವುದರಿಂದ ಪಾಕಿಸ್ತಾನ ಈ ಬಾರಿ ಕೂಡ ಕಪ್ಪುಪಟ್ಟಿಗೆ ಸೇರಿಕೊಳ್ಳುವುದರಿಂದ ತಪ್ಪಿಸಿಕೊಳ್ಳಲಿದೆ. ಒಂದು ವೇಳೆ ಕಪ್ಪುಪಟ್ಟಿಗೆ ಸೇರ್ಪಡೆಯಾದರೆ ಆ ದೇಶಕ್ಕೆ ನೀಡಲಾಗುವ ಎಲ್ಲ ಅಂತಾರಾಷ್ಟ್ರೀಯ ಹಣಕಾಸಿನ ನೆರವುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ.

ಭಾರತದ ಪಾಲಾದ ನಿಜಾಮರ ಆಸ್ತಿ, ಉರಿದುಕೊಂಡು ಪಾಕಿಗಳೇನ್ಮಾಡ್ಬಹುದು?ಭಾರತದ ಪಾಲಾದ ನಿಜಾಮರ ಆಸ್ತಿ, ಉರಿದುಕೊಂಡು ಪಾಕಿಗಳೇನ್ಮಾಡ್ಬಹುದು?

ಪಾಕಿಸ್ತಾನದಿಂದ ಅಸಮರ್ಪಕ ಕ್ರಮ

ಪಾಕಿಸ್ತಾನದಿಂದ ಅಸಮರ್ಪಕ ಕ್ರಮ

ಮುಖ್ಯವಾಗಿ ಎಲ್‌ಇಟಿ/ ಜಮಾತ್ ಉದ್ ದವಾ ಮತ್ತು ಫಾಲಾಹ್- ಇ- ಇನ್ಸಾನಿಯತ್ ಸಂಘಟನೆಗಳೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಯುಎನ್‌ಎಸ್‌ಸಿಆರ್‌ 1267ರ ತೀರ್ಮಾನದಂತೆ ಪಾಕಿಸ್ತಾನವು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿಲ್ಲ. ಪಾಕಿಸ್ತಾನವು ಸಮರ್ಪಕ ರೀತಿಯಲ್ಲಿ ಭಯೋತ್ಪಾದನಾ ಗುಂಪುಗಳಿಗೆ ಸಂಬಂಧಿಸಿದಂತೆ ಹಣಕಾಸು ವರ್ಗಾವಣೆಗಳು, ನಿಧಿಗಳನ್ನು ನಿಯಂತ್ರಿಸುವ ತನ್ನ ಹೊಣೆಗಾರಿಕೆಯನ್ನು ಅರ್ಥಮಾಡಿಕೊಂಡು ನಿಭಾಯಿಸಬೇಕಿದೆ ಎಂದು ವರದಿ ಹೇಳಿದೆ.

ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ

ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ

ಜೂನ್‌ನಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದ ಎಫ್ಎಟಿಎಫ್ ಅಕ್ಟೋಬರ್ ಒಳಗೆ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವುದರ ವಿರುದ್ಧ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು, ಇಲ್ಲವೇ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ವಿಶ್ವಸಂಸ್ಥೆಯು ಪಟ್ಟಿಮಾಡಿರುವ, ತನ್ನ ನೆಲದಲ್ಲಿ ಚಟುವಟಿಕೆ ನಡೆಸುತ್ತಿರುವ ಉಗ್ರರು ಮತ್ತು ಸಂಘಟನೆಗಳ ವಿರುದ್ಧ ಕಾರ್ಯ ಯೋಜನೆ ಜಾರಿಗೊಳಿಸದೆ ಇದ್ದರೆ ಕಪ್ಪುಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.

English summary
FATF in its 228 page report says Pakistan has not taken sufficient measures against terror financing of UN designated terrorists and outfits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X