ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲ ಇಲ್ಲ ಎಂದು ಕೊನೆಗೂ ಉಗ್ರರ ಹಾಜರಿ ಒಪ್ಪಿಕೊಂಡ ಪಾಕಿಸ್ತಾನ

|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್ 29: ಇಷ್ಟು ದಿನದಿಂದ ತನ್ನ ನೆಲದಲ್ಲಿ ಉಗ್ರರು ಮತ್ತು ಜಿಹಾದಿಗಳ ಅಸ್ತಿತ್ವವೇ ಇಲ್ಲ ಎನ್ನುತ್ತಿದ್ದ ಪಾಕಿಸ್ತಾನ, ಕೊನೆಗೂ ಉಗ್ರರು ತನ್ನ ಗಡಿಯೊಳಗೆ ನೆಲೆಸಿರುವುದನ್ನು ಒಪ್ಪಿಕೊಂಡಿದೆ.

ಭಯೋತ್ಪಾದನೆಯನ್ನು ಹತ್ತಿಕ್ಕಲು ತಾನು ಸಾಕಷ್ಟು ಕೆಲಸ ಮಾಡಬೇಕಿದೆ ಎಂದು ಪಾಕಿಸ್ತಾನದ ಸೇನೆ ಹೇಳಿದೆ.

ಪಾಕಿಸ್ತಾನದ ಅಂತ್ಯಕ್ಕೆ ನಾಂದಿ ಆಗಲಿದೆಯೇ ವಿಕಾರಿನಾಮ ಸಂವತ್ಸರ?ಪಾಕಿಸ್ತಾನದ ಅಂತ್ಯಕ್ಕೆ ನಾಂದಿ ಆಗಲಿದೆಯೇ ವಿಕಾರಿನಾಮ ಸಂವತ್ಸರ?

'ನಾವು ಹಿಂಸಾಚಾರ ನಡೆಸುವ ಭಯೋತ್ಪಾದನಾ ಸಂಘಟನೆಗಳನ್ನು ಮತ್ತು ಜಿಹಾದಿ ಗುಂಪುಗಳನ್ನು ನಿಷೇಧಿಸಿದ್ದೇವೆ. ಅವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ' ಎಂದು ಮೇಜರ್ ಜನರಲ್ ಆಸಿಫ್ ಗಫೂರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Pakistan major general Asif Ghafoor admitted the presence of terrorists and jihadists in country

ದೇಶ ಭಯೋತ್ಪಾದನೆಯಿಂದ ತುಂಬಾ ಸಂಕಷ್ಟಗಳನ್ನು ಅನುಭವಿಸಿದೆ. ಅದನ್ನು ಹತ್ತಿಕ್ಕಲು ಸಾಕಷ್ಟು ಶ್ರಮವಹಿಸಬೇಕಿದೆ. ಭಯೋತ್ಪಾದನೆಯಿಂದಾಗಿ ಲಕ್ಷಾಂತರ ಮಂದಿಯನ್ನು ಕಳೆದುಕೊಂಡಿದ್ದೇವೆ. ಅದರ ವಿರುದ್ದದ ಹೋರಾಟದಲ್ಲಿ ಇನ್ನೂ ಮಾಡುವುದು ಬಹಳಷ್ಟಿದೆ ಎಂದರು.

ಭಾರತದಲ್ಲಿ ಜೈಷ್ ಉಗ್ರರಿಂದ ದೊಡ್ಡ ದಾಳಿಗೆ ಸಂಚು: ಗುಪ್ತಚರ ಮಾಹಿತಿ ಭಾರತದಲ್ಲಿ ಜೈಷ್ ಉಗ್ರರಿಂದ ದೊಡ್ಡ ದಾಳಿಗೆ ಸಂಚು: ಗುಪ್ತಚರ ಮಾಹಿತಿ

ಹಿಂದಿನ ಸರ್ಕಾರಗಳು ಭಯೋತ್ಪಾದನೆಯನ್ನು ನಾಶಪಡಿಸಲು ವಿಫಲವಾಗಿದ್ದವು ಎಂಬುದನ್ನು ಒಪ್ಪಿಕೊಂಡ ಅವರು, ಅದರಿಂದಾಗಿ ಲಕ್ಷಾಂತರ ಡಾಲರ್ ಹಣ ಕಳೆದುಕೊಂಡಿದೆ ಎಂದು ಹೇಳಿದರು.

ಉಗ್ರರ ಪತ್ತೆಗೆ ಅಗತ್ಯಬಿದ್ದರೆ ಪಾಕಿಸ್ತಾನದ ನೆರವು ಕೇಳುತ್ತೇವೆ: ಶ್ರೀಲಂಕಾ ಪ್ರಧಾನಿ ಉಗ್ರರ ಪತ್ತೆಗೆ ಅಗತ್ಯಬಿದ್ದರೆ ಪಾಕಿಸ್ತಾನದ ನೆರವು ಕೇಳುತ್ತೇವೆ: ಶ್ರೀಲಂಕಾ ಪ್ರಧಾನಿ

ಪಾಕಿಸ್ತಾನದ ಭದ್ರತಾ ಸಂಸ್ಥೆಗಳ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಚಳವಳಿ ನಡೆಸಲು ಪಷ್ಟುನ್ ತಹಫುಜ್ ಮೂವ್‌ಮೆಂಟ್ (ಪಿಟಿಎಂ) ಸಂಘಟನೆಗೆ ಭಾರತದ ಗುಪ್ತಚರ ಸಂಸ್ಥೆ ರಾ ಹಣಕಾಸಿನ ನೆರವು ಒದಗಿಸುತ್ತಿದೆ ಎಂದು ಗಫೂರ್ ಆರೋಪಿಸಿದರು.

English summary
Pakistan Director General of Inter-Services Public Relations Major general Asif Ghafoor admitted the presence of Terrorists and Jihadi elements in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X