ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೇಲಿನ ಸಿಟ್ಟಿಗೆ ಪಾಕ್‌ನಲ್ಲಿ ಬಾಲಿವುಡ್ ಸಿಡಿಗಳು ಪುಡಿಪುಡಿ

|
Google Oneindia Kannada News

ಇಸ್ಲಾಮಾಬಾದ್, ಆಗಸ್ಟ್ 16: ಪಾಕಿಸ್ತಾನದಲ್ಲಿ ಭಾರತದ ಹೆಸರೇ ಇರಬಾರದು ಎಂಬಂತೆ ರೊಚ್ಚಿಗೆದ್ದು ಎಲ್ಲವನ್ನೂ ನಾಶಗೊಳಿಸುವ ಕ್ರಮಕ್ಕೆ ಮುಂದಾಗಿರುವ ಅಲ್ಲಿನ ಸರ್ಕಾರ, ಈಗ ಭಾರತೀಯ ಸಿನಿಮಾಗಳ ಮೇಲೆಯೂ ಕಣ್ಣುಹಾಕಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವುದರಿಂದ ಪಾಕಿಸ್ತಾನ ತೀವ್ರ ಹತಾಶೆಗೆ ಒಳಗಾಗಿದೆ. ಆರಂಭದಲ್ಲಿ ಭಾರತದೊಂದಿಗಿನ ಆರ್ಥಿಕ ವ್ಯವಾಹರಗಳನ್ನು ರದ್ದುಗೊಳಿಸಿದ್ದ ಪಾಕಿಸ್ತಾನ, ಬಳಿಕ ಬಸ್ ಮತ್ತು ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಿತ್ತು. ತನ್ನ ನಡೆಯಿಂದ ಭಾರತಕ್ಕೆ ಆರ್ಥಿಕ ಹಿನ್ನಡೆ ಉಂಟಾಗಲಿದೆ ಎಂದೇ ಪಾಕಿಸ್ತಾನ ಭಾವಿಸಿದೆ.

ಎರಡು ದೇಶಗಳ ನಡುವಿನ ಸಂಬಂಧ ಹಳಸಿದಾಗ ರಾಜಕೀಯ ಮತ್ತು ಆರ್ಥಿಕ ನಿರ್ಬಂಧಗಳು, ನಿಯಂತ್ರಣದಂತಹ ಕ್ರಮಗಳನ್ನು ತೆಗೆದುಕೊಳ್ಳುವುದು ಸಹಜ. ಪಾಕಿಸ್ತಾನದ ನಡೆಗೆ ಪ್ರತಿಯಾಗಿ ಭಾರತ ಕೂಡ ಅದೇ ರೀತಿಯ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ಪಾಕಿಸ್ತಾನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಾಂಸ್ಕೃತಿಕವಾಗಿಯೂ ಪ್ರಹಾರ ನಡೆಸಲು ಮುಂದಾಗಿದೆ.

ಸಿನಿಮಾ ಸಿಡಿಗಳ ನಾಶ

ಸಿನಿಮಾ ಸಿಡಿಗಳ ನಾಶ

ಭಾರತದ ವಿರುದ್ಧ ಸಿಟ್ಟು ತೀರಿಸಿಕೊಳ್ಳಲು ಯಾವ ಯಾವ ಮಾರ್ಗಗಳು ಸಿಗುತ್ತದೆಯೋ ಎಲ್ಲವನ್ನೂ ಬಳಸಿಕೊಳ್ಳಲು ಪಾಕಿಸ್ತಾನ ನಿರ್ಧರಿಸಿದಂತಿದೆ. ಅಲ್ಲಿನ ಗಲ್ಲಿಗಳಲ್ಲಿ, ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ಭಾರತೀಯ ಸಿನಿಮಾಗಳ ಸಿಡಿಗಳನ್ನು ವಶಪಡಿಸಿಕೊಂಡು ಪುಡಿಮಾಡುವ ಕಾರ್ಯವನ್ನು ಪಾಕಿಸ್ತಾನ ಆರಂಭಿಸಿದೆ. ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಈಗಾಗಲೇ ಈ ಕೆಲಸ ನಡೆಯುತ್ತಿದೆ. ಪ್ರಾಂತೀಯ ಸರ್ಕಾರಗಳ ಸಹಕಾರದೊಂದಿಗೆ ದೇಶದ ಇತರೆ ಭಾಗಗಳಲ್ಲಿಯೂ ಸಿಡಿಗಳನ್ನು ಮುಟ್ಟುಗೋಲು ಹಾಕಿಕೊಂಡು ನಾಶಪಡಿಸುವುದನ್ನು ಆರಂಭಿಸಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ವಿಶೇಷ ಮಾಹಿತಿ ಸಹಾಯಕಿ ಆಶಿಕಿ ಆವಾನ್ ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಸಂಚರಿಸುವ ಮತ್ತೊಂದು ರೈಲು ರದ್ದುಗೊಳಿಸಿದ ಭಾರತ ಪಾಕಿಸ್ತಾನಕ್ಕೆ ಸಂಚರಿಸುವ ಮತ್ತೊಂದು ರೈಲು ರದ್ದುಗೊಳಿಸಿದ ಭಾರತ

ಭಾರತೀಯ ಸಿನಿಮಾಗಳಿಗೆ ಬೇಡಿಕೆ

ಭಾರತೀಯ ಸಿನಿಮಾಗಳಿಗೆ ಬೇಡಿಕೆ

ಪಾಕಿಸ್ತಾನದಲ್ಲಿ ಅದರದ್ದೇ ಆದ ಸಿನಿಮಾ ರಂಗ ಇದ್ದರೂ ಅಲ್ಲಿನ ಸಿನಿಮಾ ಉದ್ಯಮ ಲಾಭದಲ್ಲೇನೂ ನಡೆಯುತ್ತಿಲ್ಲ. ಅಲ್ಲಿ ತಯಾರಾಗುವ ಸಿನಿಮಾಗಳ ಪ್ರಮಾಣ ಕೂಡ ಕಡಿಮೆಯೇ. ಮನರಂಜನೆಯ ಮೂಲಗಳಲ್ಲಿ ಒಂದಾಗಿರುವ ಸಿನಿಮಾಗಳಿಗೆ ಅಲ್ಲಿ ಬೇಡಿಕೆ ಇದ್ದರೂ, ಅಲ್ಲಿ ನಿರ್ಮಾಣವಾಗುವ ಸಿನಿಮಾಗಳು ಜನರ ಬಯಕೆ ಪೂರೈಸುತ್ತಿಲ್ಲ. ಹೀಗಾಗಿ ಅಲ್ಲಿನ ಜನರು ಬಾಲಿವುಡ್ ಸಿನಿಮಾಗಳಿಗೆ ಮುಗಿಬೀಳುತ್ತಾರೆ. ಭಾರತೀಯ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆಯಾದಾಗಲೂ ಕೋಟ್ಯಂತರ ರೂಪಾಯಿ ಸಂಗ್ರಹಿಸುತ್ತವೆ. ಇಲ್ಲಿನ ಸಿನಿಮಾಗಳಿಗೆ ಅಲ್ಲಿ ಭಾರಿ ಬೇಡಿಕೆ ಇದೆ. ಹಾಡಿನ ಮತ್ತು ಸಿನಿಮಾ ಸಿಡಿಗಳು ಪಾಕಿಸ್ತಾನದ ಗಲ್ಲಿಗಳಲ್ಲಿ ಭರ್ಜರಿ ಮಾರಾಟವಾಗುತ್ತವೆ.

ಭಾರತೀಯ ಜಾಹೀರಾತುಗಳಿಗೆ ನಿಷೇಧ

ಭಾರತೀಯ ಜಾಹೀರಾತುಗಳಿಗೆ ನಿಷೇಧ

ಭಾರತದ ಕಲಾವಿದರು ನಟಿಸಿರುವ ಜಾಹೀರಾತುಗಳನ್ನು ಪ್ರಸಾರ ಮಾಡುವುದಕ್ಕೆ ಕೂಡ ಪಾಕಿಸ್ತಾನ ನಿಷೇಧ ಹೇರಿದೆ. ಎಲ್ಲ ಟೆಲಿವಿಷನ್ ಮತ್ತು ಆಕಾಶವಾಣಿ ಸಂಸ್ಥೆಗಳಿಗೆ ಪತ್ರ ಬರೆದಿರುವ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (ಪೆಮ್ರಾ), ಭಾರತದಲ್ಲಿ ನಿರ್ಮಾಣವಾದ, ಭಾರತೀಯ ಕಲಾವಿದರು ನಟಿಸಿರುವ ಮತ್ತು ಭಾರತೀಯ ಉತ್ಪನ್ನಗಳ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ನಿಷೇಧಿಸಿ ಸೂಚನೆ ಹೊರಡಿಸಿದೆ. ಅಲ್ಲದೆ, 2018ರಲ್ಲಿ ಸುಪ್ರೀಂಕೋರ್ಟ್‌ನ ಆದೇಶದಂತೆ ಭಾರತೀಯ ಚಾನೆಲ್‌ಗಳನ್ನು ಮತ್ತು ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ನೀಡಿದ್ದ ಅನುಮತಿಯನ್ನು ಸಹ ಹಿಂದಕ್ಕೆ ಪಡೆದಿದೆ.

ಇದ್ದಕ್ಕಿದ್ದಂತೆ ಪಾಕಿಸ್ತಾನದ ಕೋಪ ಪ್ರಿಯಾಂಕಾ ಚೋಪ್ರಾ ಮೇಲೆ ತಿರುಗಿದ್ದೇಕೆ?ಇದ್ದಕ್ಕಿದ್ದಂತೆ ಪಾಕಿಸ್ತಾನದ ಕೋಪ ಪ್ರಿಯಾಂಕಾ ಚೋಪ್ರಾ ಮೇಲೆ ತಿರುಗಿದ್ದೇಕೆ?

ಯಾವ ಯಾವ ಜಾಹೀರಾತಿಗೆ ನಿಷೇಧ?

ಯಾವ ಯಾವ ಜಾಹೀರಾತಿಗೆ ನಿಷೇಧ?

ಡೆಟಾಲ್ ಸೋಪ್, ಸರ್ಫ್ ಎಕ್ಸಲ್ ಪೌಡರ್, ಪ್ಯಾಂಟೀನ್ ಶಾಂಪೂ, ಹೆಡ್ & ಶೋಲ್ಡರ್ ಶಾಂಪೂ, ಲೈಫ್ ಬಾಯ್ ಶಾಂಪೂ, ಫಾಗ್ ಬಾಡಿ ಸ್ಪ್ರೇ, ಸನ್‌ಸಿಲ್ಕ್ ಶಾಂಪೂ, ನೋರ್ ನೂಡಲ್ಸ್, ಸುಫಿ, ಫೇರ್ ಆಂಡ್ ಲವ್ಲಿ ಫೇಸ್ ವಾಶ್ ಮತ್ತು ಸೇಫ್ ಗಾರ್ಡ್ ಸೋಪ್ ಉತ್ಪನ್ನಗಳ ಜಾಹೀರಾತುಗಳ ಪ್ರಸಾರವನ್ನು ನಿಷೇಧಿಸಲಾಗಿದೆ. ಈ ಉತ್ಪನ್ನಗಳ ಜಾಹೀರಾತು ಪ್ರಸಾರ ಮಾಡಬೇಕಾದರೆ, ಅವುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಭಾರತೀಯ ಕಲಾವಿದರ ಸ್ಥಾನದಲ್ಲಿ ಪಾಕಿಸ್ತಾನಿ ಕಲಾವಿದರನ್ನು ಬಳಸಿಕೊಂಡು ಜಾಹೀರಾತು ಬಿತ್ತರಿಸುವಂತೆ ಸೂಚಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ಸಹ ನೀಡಲಾಗಿದೆ.

ಚಿನ್ನ ಬಿಡಿ, ಸಿಡಿ ಮೇಲೆ ಹೂಡಿಕೆ ಮಾಡಿ

ಚಿನ್ನ ಬಿಡಿ, ಸಿಡಿ ಮೇಲೆ ಹೂಡಿಕೆ ಮಾಡಿ

ಪಾಕಿಸ್ತಾನವು ಭಾರತೀಯ ಸಿಡಿಗಳನ್ನು ನಾಶಪಡಿಸುವ ನಿರ್ಧಾರ ತೆಗೆದುಕೊಂಡಿರುವುದನ್ನು ಹಿರಿಯ ಗಾಯಕಿ ಆಶಾ ಭೋಸ್ಲೆ ಲೇವಡಿ ಮಾಡಿದ್ದಾರೆ. ಚಿನ್ನವನ್ನು ಮರೆತುಬಿಡಿ, ಭಾರತೀಯ ಸಿನಿಮಾಗಳ ಸಿಡಿಗಳ ಮೇಲೆ ಹೂಡಿಕೆ ಮಾಡಿದೆ. ಶೀಘ್ರದಲ್ಲಿಯೇ ಅದಕ್ಕೆ ಭಾರಿ ಬೇಡಿಕೆ ಬರಲಿದೆ ಎಂದು ಆಶಾ ಹೇಳಿದ್ದಾರೆ. ಪಾಕಿಸ್ತಾನವು ಭಾರತೀಯ ಸಿನಿಮಾಗಳ ಸಿಡಿಗಳನ್ನು ನಾಶಪಡಿಸುತ್ತಿರುವುದರಿಂದ ಅದಕ್ಕೆ ಕಳ್ಳಮಾರ್ಗದಲ್ಲಿ ದೊಡ್ಡ ಬೇಡಿಕೆ ಉಂಟಾಗಲಿದೆ ಎಂಬುದನ್ನು ಆಶಾ ಪರೋಕ್ಷವಾಗಿ ಹೇಳಿದ್ದಾರೆ.

ಕಾಲಡಿಯಲ್ಲೇ ಕಸ; ಆದರೂ ಕಾಶ್ಮೀರದ ಚಿಂತೆ: ಇಮ್ರಾನ್‌ ಖಾನ್ ಇಬ್ಬಂದಿತನಕಾಲಡಿಯಲ್ಲೇ ಕಸ; ಆದರೂ ಕಾಶ್ಮೀರದ ಚಿಂತೆ: ಇಮ್ರಾನ್‌ ಖಾನ್ ಇಬ್ಬಂದಿತನ

English summary
Pakistan on Friday launched crackdown on sale of Indian movie CDs and banned airing of advertisements for India made products.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X