ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಷ್ ಕೃತ್ಯದ ಹಿಂದೆ ಪಾಕ್ ಐಎಸ್ಐ ಕೈವಾಡದ ಶಂಕೆ : ಅಮೆರಿಕದ ತಜ್ಞರು

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 14 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಜೈಷ್-ಎ-ಮೊಹಮ್ಮದ್ ಭಾಗಿಯಾಗಿರುವುದರ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ)ನ ಪಾತ್ರವಿರುವ ಬಗ್ಗೆ ಪ್ರಶ್ನಿಸುವಂತಾಗಿದೆ ಎಂದು ಅಮೆರಿಕದ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸುಧಾರಿತ ಸ್ಫೋಟಕ ತುಂಬಿದ ಸ್ಕಾರ್ಪಿಯೋವನ್ನು ಯೋಧರಿದ್ದ ವಾಹನಕ್ಕೆ ಗುದ್ದಿ 44 ಭಾರತೀಯ ಸಿಆರ್‌ಪಿಎಫ್ ಯೋಧರನ್ನು, ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರ ಆದಿಲ್ ಹತ್ಯೆಗೈದಿದ್ದಕ್ಕೆ ವಿಶ್ವದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಎಲ್ಲ ರಾಷ್ಟ್ರಗಳ ನಾಯಕರು ಹೆಚ್ಚುತ್ತಿರುವ ಭಯೋತ್ಪಾದನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಪುಲ್ವಾಮಾ ಉಗ್ರರ ದಾಳಿಗೂ ತನಗೂ ನಂಟಿಲ್ಲ ಎಂದ ಪಾಕಿಸ್ತಾನಪುಲ್ವಾಮಾ ಉಗ್ರರ ದಾಳಿಗೂ ತನಗೂ ನಂಟಿಲ್ಲ ಎಂದ ಪಾಕಿಸ್ತಾನ

ಜೈಷ್-ಎ-ಮೊಹಮ್ಮದ್ ನಂಥ ಭಯೋತ್ಪಾದಕ ಸಂಘಟನೆ ಮತ್ತು ಅದರಂಥ ನೂರಾರು ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಜರುಗಿಸುವಂತೆ ಪಾಕಿಸ್ತಾನದ ಮನವೊಲಿಸಲು ಅಮೆರಿಕ ವಿಫಲವಾಗಿದೆ. ಈ ಕೃತ್ಯವೆಸಗಿದ ಸಂಘಟನೆಗೆ ಪಾಕಿಸ್ತಾನದ ಐಎಸ್ಐ ಬೆಂಬಲ ನೀಡುತ್ತಿರುವುದು ಸಾಬೀತಾಗಿದೆ ಎಂದು ಅಮೆರಿಕದ ಸಿಐಎನ ಮಾಜಿ ವಿಶ್ಲೇಷಕ ಬ್ರೂಸ್ ರೀಡೆಲ್ ಅವರು ಪಿಟಿಐಗೆ ತಿಳಿಸಿದ್ದಾರೆ.

Pakistan ISI involvement behind Pulwama terror attack : US experts

ಈ ಭಯೋತ್ಪಾದಕ ದಾಳಿಯ ಹೆಜ್ಜೆಯ ಜಾಡು ಪಾಕಿಸ್ತಾನದಲ್ಲಿಯೇ ಸಿಗುತ್ತಿದೆ. ಈ ಸಂಘಟನೆಗಳು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮೊದಲ ಭಾರೀ ಸವಾಲನ್ನು ಒಡ್ಡಿವೆ. ಮುಂದೆ ಇಂಥ ಹಲವಾರು ಸವಾಲುಗಳನ್ನು ಇಮ್ರಾನ್ ಖಾನ್ ಎದುರಿಸಬೇಕಾಗುತ್ತದೆ ಎಂದು ರೀಡೆಲ್ ಅವರು ಎಚ್ಚರಿಗೆ ನೀಡಿದ್ದಾರೆ.

ಪಾಕಿಸ್ತಾನವನ್ನು ಜಾಗತಿಕವಾಗಿ ಒಂಟಿಯಾಗಿಸುತ್ತೇವೆ: ಅರುಣ್ ಜೇಟ್ಲಿ ಪಾಕಿಸ್ತಾನವನ್ನು ಜಾಗತಿಕವಾಗಿ ಒಂಟಿಯಾಗಿಸುತ್ತೇವೆ: ಅರುಣ್ ಜೇಟ್ಲಿ

ಪಾಕಿಸ್ತಾನ ಬೆಂಬಲಿತ ಉಗ್ರರ ಸಂಘಟನೆಗಳು ಕಾಶ್ಮೀರದಲ್ಲಿ ಈಗಲೂ ಹೇಗೆ ಚಟುವಟಿಕೆಯಿಂದಿವೆ ಎಂಬುದನ್ನು ಗುರುವಾರ ನಡೆದ ಉಗ್ರ ದಾಳಿ ನೆನಪಿಸುತ್ತದೆ. ದಾಳಿ ನಡೆದ ತಕ್ಷಣವೇ ಕೃತ್ಯದ ಹೊಣೆಯನ್ನು ಹೊರುವುದಾಗಿ ಪ್ರಕಟಿಸಿರುವ ಜೈಷ್-ಎ-ಮೊಹಮ್ಮದ್ ಸಂಘಟನೆ, ಮುಂದೆಯೂ ಇಂಥ ಕೃತ್ಯವೆಸಗುವ ಮತ್ತು ಭಾರತ - ಪಾಕ್ ನಡುವಣ ಸಂಬಂಧ ಹದಗೆಡಿಸುವ ಎಚ್ಚರಿಕೆ ನೀಡಿದೆ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸರಕಾರದಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿಯಲ್ಲಿ ಅಧಿಕಾರಿಯಾಗಿದ್ದ ಅನಿಶ್ ಗೋಯೆಲ್ ಎಂಬುವವರು ನುಡಿದಿದ್ದಾರೆ.

ರಣಹೇಡಿ ಉಗ್ರದಾಳಿ: ಭಾರತದ ಬೆಂಬಲಕ್ಕೆ ನಿಂತ ವಿಶ್ವರಣಹೇಡಿ ಉಗ್ರದಾಳಿ: ಭಾರತದ ಬೆಂಬಲಕ್ಕೆ ನಿಂತ ವಿಶ್ವ

ಈ ದಾಳಿಯ ಹಿನ್ನೆಲೆಯಲ್ಲಿ, ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯ ಎಸಗುತ್ತಿರುವ ಎಲ್ಲ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾದ ಒತ್ತಡ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿದೆ. ಮೋದಿಯವರು ಸುಮ್ಮನೆ ಇರುವುದು ಸಾಧ್ಯವೇ ಇಲ್ಲ. ಪ್ರತಿದಾಳಿ ನಡೆದರೆ ಪಾಕಿಸ್ತಾನ ಅದನ್ನು ಅರಗಿಸಿಕೊಳ್ಳುವುದು ಕೂಡ ಸಾಧ್ಯವಾಗುವುದಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
Involvement of Pakistan's Inter-Services Intelligence (ISI) involvement behind Pulwama terror attack : US experts say. They think that ISI is directly supporting Jaish-e-Mohammed, which has claimed responsibility of the attack. They say US has completely failed to convince Pakistan to taka action against terror groups in Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X