ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಎರಡನೇ ಅತೀ ಕಲುಷಿತ ದೇಶ ಯಾವುದು ಗೊತ್ತೇ?

|
Google Oneindia Kannada News

ಇಸ್ಲಾಮಾಬಾದ್, ಮಾರ್ಚ್ 17: ಐಕ್ಯೂಏರ್ ಜಾಗತಿಕ ವಾಯು ಗುಣಮಟ್ಟದ ವರದಿ ಪ್ರಕಟಗೊಂಡಿದ್ದು, ನೆರೆಯ ರಾಷ್ಟ್ರ ಪಾಕಿಸ್ತಾನ ಜಗತ್ತಿನ ಎರಡನೇ ಅತಿ ಹೆಚ್ಚು ಕಲುಷಿತ ದೇಶ ಎಂದು ತಿಳಿದು ಬಂದಿದೆ.

ಕಳೆದ ವರ್ಷ, ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಶಿಫಾರಸು ಮಾಡಿದ ವಾಯು ಗುಣಮಟ್ಟದ ಮಟ್ಟಕ್ಕಿಂತ ಪಾಕಿಸ್ತಾನದಲ್ಲಿ ಪಿಎಂ 2.5 ಸಾಂದ್ರತೆಯು ಐದು ಪಟ್ಟು ಹೆಚ್ಚಾಗಿದೆ ಎಂದು ಖಾಸಗಿ ವಾಹಿನಿ ಸಮಾ ಟಿವಿ ವರದಿ ಮಾಡಿದೆ.

ಕೊರೊನಾ ನಡುವೆ ದೇಶದ ವಾಯು ಗುಣಮಟ್ಟದಲ್ಲಿ ಭಾರೀ ಸುಧಾರಣೆಕೊರೊನಾ ನಡುವೆ ದೇಶದ ವಾಯು ಗುಣಮಟ್ಟದಲ್ಲಿ ಭಾರೀ ಸುಧಾರಣೆ

"ಪಾಕಿಸ್ತಾನದ ವಾತಾವರಣವು ಈ ಹಿಂದೆ ಸಹ ಬಹಳ ಕಳಪೆಯಾಗಿತ್ತು. ಪಾಕಿಸ್ತಾನದ ಅನೇಕ ದೊಡ್ಡ ನಗರಗಳು ಅಪಾರ ಪ್ರಮಾಣದ ಹೊಗೆ, ಧೂಳು ಮತ್ತು ಮಾರಣಾಂತಿಕ ಹೊಗೆ ಹೊರ ಹಾಕುತ್ತಿವೆ' ಎಂದು ವಿಶ್ವ ವಾಯು ಗುಣಮಟ್ಟ ವರದಿ-2020 ಹೇಳಿದೆ.

Pakistan Is The Worlds Second Most Polluted Country: IQAIR Report

ಪಾಕಿಸ್ತಾನ ದೇಶದ ಅತ್ಯಂತ ಸ್ವಚ್ಛವಾದ ನಗರ ಎಂದರೆ 110ರ ಎಕ್ಯೂಐ ಹೊಂದಿರುವ ಇಸ್ಲಾಮಾಬಾದ್ ಆಗಿದ್ದು, ಅತ್ಯಂತ ಕಲುಷಿತ ನಗರ ಲಾಹೋರ್ ಎಂದು ಬಿಂಬಿಸಲಾಗಿದೆ. ವಿಶ್ವದಲ್ಲಿಯೇ ಲಾಹೋರ್ 18ನೇ ಅತ್ಯಂತ ಕಲುಷಿತ ನಗರ ಎಂದೂ ಹೇಳಲಾಗಿದೆ.

ಪಾಕಿಸ್ತಾನದಲ್ಲಿ ಶೇ.20ಕ್ಕಿಂತ ಹೆಚ್ಚು ಸಾವುಗಳು ವಾಯುಮಾಲಿನ್ಯದ ಋಣಾತ್ಮಕ ಪರಿಣಾಮಗಳಿಗೆ ಸಂಬಂಧಿಸಿವೆ ಎಂದು ಐಕ್ಯೂಏರ್ ಹೇಳಿದೆ. ತಜ್ಞರು ಹೇಳುವಂತೆ ದೇಶದಲ್ಲಿನ ಗಾಳಿಯು ಆಸ್ತಮಾ ಇರುವವರಿಗೆ ಮಾರಕವಾಗಬಹುದು ಎನ್ನುತ್ತಾರೆ.

Pakistan Is The Worlds Second Most Polluted Country: IQAIR Report

ವಿಶ್ವ ವಾಯು ಗುಣಮಟ್ಟ ವರದಿ-2020 ವರದಿ ಪ್ರಕಾರ ಅತೀ ಹೆಚ್ಚು ಕಲುಷಿತ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಬಾಂಗ್ಲಾದೇಶ, ಮೂರನೇ ಸ್ಥಾನದಲ್ಲಿ ಭಾರತವಿದೆ.

English summary
Pakistan is the second most polluted country in the world, IQAIR Global Air Quality Report said that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X