ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಮಾನಿಕ ದಾಳಿ ಭೀತಿ, ಪಾಕಿಸ್ತಾನದ ವಿ. ನಿಲ್ದಾಣಗಳು ಬಂದ್

|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 27: ಪುಲ್ವಾಮಾ ಮೇಲಿನ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತದ ಸಂಭಾವ್ಯ ವೈಮಾನಿಕ ದಾಳಿಯ ಭೀತಿಯಿಂದ ಪಾಕಿಸ್ತಾನ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಪ್ರಮುಖ ನಗರಗಳಾದ ಲಾಹೋರ್, ಮುಲ್ತಾನ್, ಫೈಸಲಾಬಾದ್, ಸಿಯೋಲ್ ಕೋಟ್ ಹಾಗೂ ಇಸ್ಲಾಮಾಬಾದ್ ವಿಮಾನ ನಿಲ್ದಾಣಗಳಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಹೈಜಾಕ್ ಸಾಧ್ಯತೆ, ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತ ಹೈಜಾಕ್ ಸಾಧ್ಯತೆ, ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತ

ಜಿಯೋ ನ್ಯೂಸ್ ಪ್ರಕಾರ, ಲಾಹೋರ್ ವಿಮಾನ ನಿಲ್ದಾಣ ಸಂಪೂರ್ಣ ಬಂದ್ ಆಗಿದೆ. ಮುಂದಿನ ಆದೇಶದ ತನಕ ಸಂಚಾರ ಸ್ಥಗಿತಗೊಳಿಸಲಾಗಿದೆ. ಚೀನಾದ ಗುವಾಂಗ್ ಜೋ ನಿಂದ ಬರುತ್ತಿದ್ದ ವಿಮಾನವನ್ನು ವಾಪಸ್ ಕಳಿಸಿರುವ ಸುದ್ದಿ ಬಂದಿದೆ. ಪೇಶಾವಾರ್ ನ ಬಚಾ ಖಾನ್ ವಿಮಾನನಿಲ್ದಾಣದಲ್ಲಿ ನಾಗರಿಕ ವಿಮಾನವೊಂದನ್ನು ಟೇಕಾಫ್ ಸಂದರ್ಭದಲ್ಲಿ ನಿಲ್ಲಿಸಲಾಗಿದೆ ಎಂದು ವರದಿ ಬಂದಿದೆ.

Pakistan immediately stops flight operations

ಉಗ್ರನೆಲೆ ಧ್ವಂಸ: ಪಾಕಿಸ್ತಾನದ F-16 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತಉಗ್ರನೆಲೆ ಧ್ವಂಸ: ಪಾಕಿಸ್ತಾನದ F-16 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ

ಇದೆ ವೇಳೆ ಭಾರತದಲ್ಲಿ ಜಮ್ಮು ಕಾಶ್ಮೀರದ ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಶ್ರೀನಗರ, ಲೇಹ್, ಪಠಾಣ್‌ಕೋಟ್‌, ಡೆಹ್ರಾಡೂನ್ ವಿಮಾನ ನಿಲ್ದಾಣಗಳಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬ ಆತ್ಮಾಹುತಿ ದಾಳಿಕೋರ ಕಾರ್ ಬಾಂಬ್ ಸ್ಫೋಟಿಸಿ 44 ಯೋಧರ ಬಲಿದಾನಕ್ಕೆ ಕಾರಣವಾಗಿದ್ದ. ಅದರ ಪ್ರತೀಕಾರ ಎಂಬಂತೆ ಭಾರತ ಈಗ ಉಗ್ರನೆಲೆ ಮೇಲೆ ದಾಳಿ ನಡೆಸಿತ್ತು.

English summary
Pakistan immediately stops its domestic and international flight operations from Lahore, Multan, Faisalabad, Sialkot and Islamabad airports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X