ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ, ತೆಪ್ಪಗಾದ ಧರ್ಮಾಂಧರು

|
Google Oneindia Kannada News

ಅಂತೂ ಇಂತೂ ಪಾಕಿಸ್ತಾನಕ್ಕೆ ಬುದ್ಧಿ ಬಂತು ಅನ್ನುವಂತಾಗಿದೆ. ಏಕೆಂದರೆ ಇಷ್ಟು ದಿನ ಹಿಂದೂ ವಿರೋಧಿ ವರ್ತನೆ ತೋರುತ್ತಿದ್ದ ಪಾಪಿ ಪಾಕ್ ನಾಯಕರು, ಇದೀಗ ಫುಲ್ ಚೇಂಜ್ ಆಗಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ಹಿಂದು ದೇವಾಲಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಅದೇ ನಾಯಕರು, ದೇಗುಲ ನಿರ್ಮಾಣಕ್ಕೆ ಅಸ್ತು ಎಂದಿದ್ದಾರೆ.

ಆದರೆ ಈ ಹಿಂದೆ ಪರಿಸ್ಥಿತಿ ವ್ಯತಿರಿಕ್ತವಾಗಿತ್ತು. ಇಸ್ಲಾಂ ಸಮುದಾಯಗಳ ಒತ್ತಡದಿಂದಾಗಿ ದೇವಸ್ಥಾನ ನಿರ್ಮಾಣಕ್ಕೆ ಪಾಕಿಸ್ತಾನ ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೆ ಈಗ ದಿಢೀರ್ ಜ್ಞಾನೋದಯ ಆದವರಂತೆ ಪಾಕ್ ಇಸ್ಲಾಮಾಬಾದ್‌ನಲ್ಲಿ ದೇಗುಲ ನಿರ್ಮಾಣಕ್ಕೆ ಒಪ್ಪಿದೆ.

ಧರ್ಮನಿಂದನೆ: ಪಾಕಿಸ್ತಾನ ಕೋರ್ಟ್‌ನಲ್ಲಿ ಗುಂಡಿಕ್ಕಿ ಆರೋಪಿ ಹತ್ಯೆಧರ್ಮನಿಂದನೆ: ಪಾಕಿಸ್ತಾನ ಕೋರ್ಟ್‌ನಲ್ಲಿ ಗುಂಡಿಕ್ಕಿ ಆರೋಪಿ ಹತ್ಯೆ

ಪ್ರಸ್ತಾವನೆ ಸಲ್ಲಿಸಿ 6 ತಿಂಗಳ ಬಳಿಕ ದೇವಸ್ಥಾನ ನಿರ್ಮಿಸಲು ಪಾಕಿಸ್ತಾನ ಸರ್ಕಾರ ಒಪ್ಪಿಗೆ ಸೂಚಿಸಿದೆ. ಹಾಗೇ ಇಸ್ಲಾಮಾಬಾದ್‌ 'ಹೆಚ್ -9 / 2' ಸೆಕ್ಟರ್‌ನಲ್ಲಿ ಹಿಂದೂ ಸಮುದಾಯದ ಶವಾಗಾರದ ಸುತ್ತಲೂ ಗೋಡೆ ನಿರ್ಮಾಣಕ್ಕೂ ತೆಪ್ಪಗೆ ಒಪ್ಪಿಗೆ ನೀಡಿದೆ. ಲಾಹೋರ್‌ನ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ) ಈ ಅಧಿಸೂಚನೆಯನ್ನ ಹೊರಡಿಸಿದೆ. ಪಾಕಿಸ್ತಾನ ಸರ್ಕಾರದ ಈ ನಿರ್ಧಾರ ಪಾಕ್‌ನಲ್ಲಿ ವಾಸವಾಗಿರುವ ಕೋಟ್ಯಂತರ ಹಿಂದೂಗಳಿಗೆ ಸಖತ್ ಖುಷಿ ಕೊಟ್ಟಿದೆ.

ಪಾಕ್‌ನಲ್ಲಿ ಹಿಂದೂಗಳೇ ಟಾರ್ಗೆಟ್..!

ಪಾಕ್‌ನಲ್ಲಿ ಹಿಂದೂಗಳೇ ಟಾರ್ಗೆಟ್..!

ಪಾಕಿಸ್ತಾನ ಎಂದ ಕೂಡಲೇ ಕೇವಲ ಇಸ್ಲಾಂ ಧರ್ಮಿಯರ ವಾಸಸ್ಥಾನ ಎಂಬ ಮನೋಭಾವನೆ ಇದೆ. ಆದರೆ ಇಂದಿಗೂ ಪಾಕಿಸ್ತಾನದಲ್ಲಿ ಸುಮಾರು 1 ಕೋಟಿ ಹಿಂದೂಗಳು ವಾಸವಾಗಿದ್ದಾರೆ. ಇದರ ಹೊರತು ಲಕ್ಷಾಂತರ ಸಿಖ್ ಸಮುದಾಯದ ಜನರು ಕೂಡ ಪಾಕಿಸ್ತಾನದಲ್ಲಿ ಬದುಕುತ್ತಿದ್ದಾರೆ. ಆದರೆ ಪಾಕ್‌ನ ಕೆಲ ಧರ್ಮಾಂಧರು ಇವರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ದೇಗುಲ ನಿರ್ಮಾಣಕ್ಕೆ ಇದೇ ರೀತಿ ಅಡ್ಡಿ ಮಾಡಿದ್ದರು ಧರ್ಮಾಂಧರು. ಆದರೆ ಈಗ ಸರ್ಕಾರ ದೇಗುಲ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆ.

ದೇವಾಲಯ ಬೇಡವೆಂದು ವಾರ್ನಿಂಗ್..!

ದೇವಾಲಯ ಬೇಡವೆಂದು ವಾರ್ನಿಂಗ್..!

ಅಷ್ಟಕ್ಕೂ ಈ ಹಿಂದೆ ದೇಗುಲ ನಿರ್ಮಾಣ ಕಾರ್ಯಕ್ಕೆ ಹಿಂದೂ ಸಮುದಾದವರು ಮುಂದಾದ ಸಂದರ್ಭದಲ್ಲಿ ಕೆಲವರು ಪಾಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಹಿಂದೂ ದೇವಸ್ಥಾನ ನಿರ್ಮಿಸಲು ಅನುಮತಿ ನೀಡಬಾರದು ಅಂತಾ ವಾರ್ನಿಂಗ್ ಕೊಟ್ಟಿದ್ದರು. ಇದರಿಂದ ಇಮ್ರಾನ್ ಖಾನ್ ಸರ್ಕಾರ ಕೂಡ ಹೆದರಿ ತಣ್ಣಗಾಗಿತ್ತು. ಇದೇ ಕಾರಣಕ್ಕೆ ಪಾಕಿಸ್ತಾನ ರಾಜಧಾನಿಯಲ್ಲಿ ಹಿಂದೂ ದೇವಾಲಯ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತು ಬಿಟ್ಟಿತ್ತು. ಆದರೆ ಹಠ ಬಿಡದ ಹಿಂದೂ ಸಮುದಾಯ ಅಂತಿಮವಾಗಿ ಪಾಕ್ ಸರ್ಕಾರವನ್ನು ಒಪ್ಪುವಂತೆ ಮಾಡಿದೆ.

ಪಾಕಿಸ್ತಾನದಲ್ಲಿ ಹಿಂದೂ ದೇಗುಲ ನಿರ್ಮಾಣಕ್ಕೆ ಅಡ್ಡಿ ಆತಂಕ ದೂರಪಾಕಿಸ್ತಾನದಲ್ಲಿ ಹಿಂದೂ ದೇಗುಲ ನಿರ್ಮಾಣಕ್ಕೆ ಅಡ್ಡಿ ಆತಂಕ ದೂರ

ಕೈಕಾಲು ಹಿಡಿದ ಪಾಕಿಸ್ತಾನ ಸಚಿವ..!

ಕೈಕಾಲು ಹಿಡಿದ ಪಾಕಿಸ್ತಾನ ಸಚಿವ..!

ಅಷ್ಟಕ್ಕೂ ಇಮ್ರಾನ್ ಖಾನ್ ಸರ್ಕಾರ ಸುಖಾಸುಮ್ಮನೆ ಹಿಂದೂ ದೇಗುಲ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿಲ್ಲ. ಇದರ ಹಿಂದೆ ದೊಡ್ಡ ಲೆಕ್ಕಾಚಾರ ಇದೆ. ಹಿಂದೂ ಸಮುದಾಯದ ಮತ ಗಿಟ್ಟಿಸುವ ತಂತ್ರ ಅಡಗಿದೆ. ಇದೇ ಕಾರಣಕ್ಕೆ ಖುದ್ದು ಪಾಕಿಸ್ತಾನ ಸರ್ಕಾರದ ಧಾರ್ಮಿಕ ವ್ಯವಹಾರಗಳ ಸಚಿವ ಪಿರ್ ನೂರ್ಲ್ ಹಕ್ ಖಾದ್ರಿ, ಇಸ್ಲಾಮಿಕ್‌ ತತ್ವಗಳ ಸಮಿತಿ ಎದುರು ದೇಗುಲ ನಿರ್ಮಾಣದ ವಿಚಾರವನ್ನ ಮಂಡಿಸಿದ್ದರು. ಅಲ್ಲದೆ ದೇಗುಲ ನಿರ್ಮಾಣಕ್ಕೆ ಒಪ್ಪುವಂತೆ ಅಂಗಲಾಚಿದ್ದರು. ವಿಚಾರಣೆ ನಡೆಸಿದ ಸಮಿತಿ ದೇಗುಲ ನಿರ್ಮಾಣಕ್ಕೆ ಒಪ್ಪಿದೆ.

ಭಾರತವನ್ನು ಕಂಡರೆ ಭಯವಾಗುತ್ತಿದೆ, ನಮ್ಮನ್ನು ಕಾಪಾಡಿ ಎಂದ ಪಾಕಿಸ್ತಾನ..!ಭಾರತವನ್ನು ಕಂಡರೆ ಭಯವಾಗುತ್ತಿದೆ, ನಮ್ಮನ್ನು ಕಾಪಾಡಿ ಎಂದ ಪಾಕಿಸ್ತಾನ..!

ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಸಂಕಷ್ಟ

ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಸಂಕಷ್ಟ

ಪಾಕಿಸ್ತಾನದಲ್ಲಿ ಸುಮಾರು 1 ಕೋಟಿ ಹಿಂದೂಗಳು ನಿತ್ಯ ಭಯದಲ್ಲೇ ಬದುಕುವ ವಾತಾವರಣ ಇದೆ. ಅಲ್ಲಿನ ಕೆಲ ಧರ್ಮಾಂಧರ ಕಾಟಕ್ಕೆ ಹಿಂದೂ ಧರ್ಮಿಯರು ಬೆಚ್ಚಿಬಿದ್ದಿದ್ದಾರೆ. ಆದರೂ ಅವರೆಲ್ಲಾ ಭಾರತಕ್ಕೆ ದಿಢೀರ್ ವಲಸೆ ಬರುವುದಕ್ಕೂ ಸಾಧ್ಯವಾಗುತ್ತಿಲ್ಲ. ಏಕೆಂದರೆ ನೂರಾರು ವರ್ಷಗಳಿಂದ ಅದೇ ಪ್ರದೇಶದಲ್ಲಿ ಬದುಕಿರುವ ಹಿಂದೂಗಳು, ತಮ್ಮ ಮನೆ-ಆಸ್ತಿ ಬಿಟ್ಟು ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಪಾಕಿಸ್ತಾನದಲ್ಲೇ ಬದುಕು ಕಟ್ಟಿಕೊಳ್ಳಲು ಹಿಂದೂಗಳು ಅವಿರತ ಶ್ರಮ ವಹಿಸುತ್ತಿದ್ದರೂ ಧರ್ಮಾಂಧರು ಕಿರುಕುಳ ನೀಡುತ್ತಿದ್ದಾರೆ.

ಭಾರತದ ಪೌರತ್ವ ಭರವಸೆ ತ್ಯಜಿಸಿ ಹಿಂತಿರುಗಿದ ಪಾಕಿಸ್ತಾನಿ ನಿರಾಶ್ರಿತರುಭಾರತದ ಪೌರತ್ವ ಭರವಸೆ ತ್ಯಜಿಸಿ ಹಿಂತಿರುಗಿದ ಪಾಕಿಸ್ತಾನಿ ನಿರಾಶ್ರಿತರು

English summary
The Pakistan finally granted permission for construction of Hindu temple in Islamabad. Permission grants after 6 months of request by Hindu community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X