ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಿಂದ ಹೊರ ಹೋಗದಂತೆ ಈ ಪಕ್ಷ ಉಪಾಧ್ಯಕ್ಷೆಗೆ ನಿರ್ಬಂಧ

|
Google Oneindia Kannada News

ಇಸ್ಲಾಮಾಬಾದ್, ಡಿಸೆಂಬರ್ 23: ಆರ್ಥಿಕ ಅಪರಾಧ ಪ್ರಕರಣದಲ್ಲಿ ಆರೋಪ ಹೊತ್ತುಕೊಂಡಿರುವ ಮರ್ಯಂ ನವಾಜ್ ಅವರಿಗೆ ದೇಶದಿಂದ ಹೊರ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ.

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಂ (46 ವರ್ಷ) ಅವರನ್ನು 'no fly list'ಗೆ ಆಗಸ್ಟ್ 2018ರಲ್ಲೇ ಸೇರಿಸಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

ಭ್ರಷ್ಟಾಚಾರದ ಅರೋಪ, ಪಾಕ್ ಮಾಜಿ ಪ್ರಧಾನಿ ನವಾಜ್ ಗೆ ಶಿಕ್ಷೆಭ್ರಷ್ಟಾಚಾರದ ಅರೋಪ, ಪಾಕ್ ಮಾಜಿ ಪ್ರಧಾನಿ ನವಾಜ್ ಗೆ ಶಿಕ್ಷೆ

ಪ್ರಧಾನಿಯ ಕಾನೂನು ವ್ಯವಹಾರಗಳ ಸಲಹೆಗಾರ ಬಾಬರ್ ಅವಾನ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ನೋ ಫ್ಲೈ ಲಿಸ್ಟ್ ನಿಂದ ಹೊರ ಬರಲು ಸಲ್ಲಿಸಿರುವ ಅರ್ಜಿಯನ್ನು ಸರ್ಕಾರ ಪುರಸ್ಕರಿಸದಿರಲು ನಿಯಮಗಳನ್ನುರೂಪಿಸಲಾಗಿದೆ ಎಂದಿದ್ದಾರೆ.

Pakistan govt denies permission to Maryam Nawaz to travel abroad

ಪಿಎಂಎಲ್ -ಎನ್ ವರಿಷ್ಠ ನವಾಜ್ ಷರೀಫ್ ಅವರು ನವೆಂಬರ್ 19ರಂದು ಏರ್ ಆಂಬ್ಯುಲೆನ್ ಮೂಲಕ ಲಂಡನ್ನಿಗೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳಿದ್ದಾರೆ. ಭ್ರಷ್ಟಚಾರ ಪ್ರಕರಣದಲ್ಲಿ ಸಿಲುಕಿರುವ ನವಾಜ್ ಅವರಿಗೆ 7 ವರ್ಷಗಳ ಶಿಕ್ಷೆ ವಿಧಿಸಲಾಗಿದೆ.

ಆಡಳಿತ ದುರುಪಯೋಗ, ಆರ್ಥಿಕ ಅಪರಾಧಿಗಳು ವಿದೇಶಕ್ಕೆ ಪ್ರಯಾಣಿಸುವುದನ್ನು ತಡೆಯುವ ಅಧಿಕಾರ ಪಾಕಿಸ್ತಾನ ಸರ್ಕಾರಕ್ಕಿದೆ. ಹೀಗಾಗಿ, ಮರ್ಯಂಗೆ ವಿದೇಶಕ್ಕೆ ತೆರಳದಂತೆ ನಿರ್ಬಂಧ ವಿಧಿಸಲಾಗಿದೆ.

ನವಾಜ್ ಷರೀಫ್ ಗೆ 10 ವರ್ಷ, ಮರ್ಯಮ್ ಗೆ 7 ವರ್ಷ ಜೈಲುನವಾಜ್ ಷರೀಫ್ ಗೆ 10 ವರ್ಷ, ಮರ್ಯಮ್ ಗೆ 7 ವರ್ಷ ಜೈಲು

ಮುಸ್ಲಿಂ ಲೀಗ್ ನವಾಜ್ ಪಕ್ಷ ಕಾರ್ಯದರ್ಶಿ ಮರಿಯಂ ಔರಂಗಜೇಬ್ ಈ ಬಗ್ಗೆ ಪ್ರತಿಕ್ರಿಯಿಸಿ, ಪಾಕಿಸ್ತಾನ್ ತೆಹರಿಕ್ ಇ ಇನ್ಸಾಫ್ ನಿಂದ ಇದನ್ನು ನಿರೀಕ್ಷಿಸಿದ್ದೆವು. ಪಿಎಂಎಲ್ ಎನ್ ಮುಖಂಡರನ್ನು ಅಪರಾಧಿಯಂತೆ ಬಿಂಬಿಸುವುದೇ ಇರುವ ಕೆಲಸ ಎಂದಿದ್ದಾರೆ.

English summary
The Pakistan government has denied permission to PML-N vice president Maryam Nawaz to travel abroad, saying those involved in any economic crime and institutional fraud could not be allowed to leave the country, according to a media report on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X