ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಟಿಕ್‌ಟಾಕ್’ ಬ್ಯಾನ್ ವಾಪಸ್, ಕೋರ್ಟ್ ಆದೇಶದ ಮಹಿಮೆ..!

|
Google Oneindia Kannada News

ಜಗತ್ತಲ್ಲಿ ಟಿಕ್‌ಟಾಕ್ ಮೇಲೆ ಪ್ರಯೋಗವಾದಷ್ಟು ಬ್ಯಾನ್ ಬ್ರಹ್ಮಾಸ್ತ್ರ ಬೇರೆ ಯಾವುದೇ ಅಪ್ಲಿಕೇಶನ್‌ ಮೇಲೂ ಪ್ರಯೋಗವಾಗಿಲ್ಲ. ಹೀಗೆ ಪಾಕಿಸ್ತಾನದಲ್ಲೂ ಕೆಲವು ತಿಂಗಳ ಹಿಂದೆ ಟಿಕ್‌ಟಾಕ್ ಬ್ಯಾನ್ ಮಾಡಲಾಗಿತ್ತು. ತನ್ನ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಪಾಕ್ 'ಟಿಕ್‌ಟಾಕ್' ಬ್ಯಾನ್ ಮಾಡಿತ್ತು. ಆದರೆ ಈ ಕುರಿತು ವಿಚಾರಣೆ ನಡೆಸಿದ ಪಾಕ್ ಹೈಕೋರ್ಟ್ 'ಟಿಕ್‌ಟಾಕ್' ಮೇಲಿನ ಬ್ಯಾನ್ ವಾಪಸ್ ಪಡೆಯಬಹುದು ಎಂದು ಆದೇಶ ನೀಡಿದೆ.

ಪಾಕ್‌ನ ಯುವ ಸಮುದಾಯ ದಾರಿ ತಪ್ಪಲು ಟಿಕ್‌ಟಾಕ್‌ ಪ್ರೇರೇಪಣೆ ನೀಡುತ್ತಿದೆ ಎಂದು ಆರೋಪಿಸಲಾಗಿತ್ತು. ಇದೇ ಕಾರಣಕ್ಕೆ ಟಿಕ್‌ಟಾಕ್ ಮೇಲೆ ಬ್ಯಾನ್ ಹೇರಲಾಗಿತ್ತು. ಆದರೆ ಟಿಕ್‌ಟಾಕ್ ಮತ್ತು ಪಾಕ್ ಸರ್ಕಾರದ ನಡುವೆ ಅಶ್ಲೀಲ ಕಂಟೆಂಟ್‌ ನಿಯಂತ್ರಿಸುವ ಬಗ್ಗೆ ಮಾತುಕತೆ ನಡೆದಿದ್ದು, ಬ್ಯಾನ್‌ ವಾಪಸ್ ಪಡೆಯಲು ಆದೇಶ ನೀಡಲಾಗಿದೆ.

ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರದ ಜೊತೆಗೆ ಸಂವಹನಕ್ಕಾಗಿ ಅಗತ್ಯ ಕ್ರಮಗಳನ್ನ ಟಿಕ್‌ಟಾಕ್ ತೆಗೆದುಕೊಂಡಿದೆ. ಸ್ಥಳೀಯ ಸಂಸ್ಕೃತಿಗೆ ಧಕ್ಕೆ ಬಾರದಂತೆ ಪಾಕಿಸ್ತಾನದಲ್ಲಿ ಟಿಕ್‌ಟಾಕ್ ರೀ ಎಂಟ್ರಿ ಪಡೆಯಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪಾಕ್‌ನಲ್ಲಿ ಟಿಕ್‌ಟಾಕ್ ಪುನಃ ಲಭ್ಯವಾಗಲಿದೆ.

39 ಮಿಲಿಯನ್ ಡೌನ್‌ಲೋಡ್..!

39 ಮಿಲಿಯನ್ ಡೌನ್‌ಲೋಡ್..!

ಪಾಕಿಸ್ತಾನದಲ್ಲಿ ಟಿಕ್‌ಟಾಕ್ ಅದೆಷ್ಟು ಫೇಮಸ್ ಎಂದರೆ, ಈಗಾಗಲೇ 39 ಮಿಲಿಯನ್ ಡೌನ್‌ಲೋಡ್‌ಗಳನ್ನ ಕಂಡಿದೆ. ಅದರಲ್ಲೂ ಪಾಕಿಸ್ತಾನದ ಗ್ರಾಮೀಣ ಭಾಗದಲ್ಲಿ 'ಟಿಕ್‌ಟಾಕ್' ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಆದರೆ ದಿಢೀರ್ ಬ್ಯಾನ್ ಮಾಡಿದ್ದರಿಂದ ಟಿಕ್‌ಟಾಕ್ ಬಳಕೆದಾರರು ಬೇಸರಗೊಂಡಿದ್ದರು. ಹಾಗೇ ಟಿಕ್‌ಟಾಕ್ ಸಂಸ್ಥೆ ಕೂಡ ಭಾರಿ ನಷ್ಟ ಅನುಭವಿಸಿತ್ತು. ಈಗಾಗಲೇ ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಟಿಕ್‌ಟಾಕ್ ಬ್ಯಾನ್ ಆಗಿದೆ. ಪಾಕಿಸ್ತಾನದಲ್ಲೂ ಇಂತಹದ್ದೇ ಕ್ರಮ ಜರುಗಿದ್ದು ಟಿಕ್‌ಟಾಕ್‌ಗೆ ಶಾಕ್ ನೀಡಿತ್ತು. ಆದರೆ ಈಗ ಬ್ಯಾನ್ ವಾಪಸ್ ಪಡೆಯಲು ಆದೇಶ ನೀಡಿರುವುದು ಟಿಕ್‌ಟಾಕ್‌ಗೆ ನೆಮ್ಮದಿ ತಂದಿದೆ.

ದೋಸ್ತಿಗಳ ನಡುವೆ ಬೆಂಕಿ..!

ದೋಸ್ತಿಗಳ ನಡುವೆ ಬೆಂಕಿ..!

ಪಾಕಿಸ್ತಾನ ಹಾಗೂ ಚೀನಾ ನಡುವಿನ ಸಂಬಂಧ ಇಡೀ ಜಗತ್ತಿಗೇ ಗೊತ್ತು. ಅದರಲ್ಲೂ ಸಿಕ್ಕಾಪಟ್ಟೆ ಲಾಸ್ ಆದ ಸಮಯದಲ್ಲಿ ಪಾಕ್ ನೆರವಿಗೆ ಬಂದಿದ್ದು ಇದೇ ಚೀನಾ. ಆದರೆ ಚೀನಾ ಮೂಲದ ಟಿಕ್‌ಟಾಕ್ ಬ್ಯಾನ್ ಬಳಿಕ ಪಾಕಿಸ್ತಾನ ಹಾಗೂ ಚೀನಾ ಸಂಬಂಧದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಪಾಕ್ ಸರ್ಕಾರಕ್ಕೂ ಇದು ತಲೆನೋವನ್ನ ತಂದಿತ್ತು. ಹೀಗಾಗಿ ಟಿಕ್‌ಟಾಕ್ ಮೇಲಿನ ಬ್ಯಾನ್ ವಾಪಸ್ ತೆಗೆಸಲು ಪಾಕ್ ಸರ್ಕಾರ ಕಾನೂನು ಹೋರಾಟ ಮುಂದುವರಿಸಿತ್ತು. ಇಮ್ರಾನ್ ಸರ್ಕಾರ ಹೈಕೋರ್ಟ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಬಳಿಕ ಬ್ಯಾನ್ ವಾಪಸ್ ಪಡೆಯೋದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಸೋಷಿಯಲ್ ಮೀಡಿಯಾ ಮೇಲೆ ಕಣ್ಣು

ಸೋಷಿಯಲ್ ಮೀಡಿಯಾ ಮೇಲೆ ಕಣ್ಣು

ಪಾಕ್ ಸರ್ಕಾರ ಎಷ್ಟು ಖತರ್ನಾಕ್ ಎಂದರೆ, ಅಲ್ಲಿ ಸೋಷಿಯಲ್ ಮೀಡಿಯಾದಲ್ಲೂ ಪೋಸ್ಟ್‌ ಹಾಕುವುದು ಕಷ್ಟ. ಹಾಗೇನಾದರೂ ಸರ್ಕಾರದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನ ಹಾಕಿದ್ದೇ ಆದರೆ, ಕೆಲವೇ ನಿಮಿಷದಲ್ಲಿ ಪೊಲೀಸ್ ವಾಹನ ಮನೆ ಮುಂದೆ ಬಂದು ನಿಲ್ಲುತ್ತೆ. ಗ್ರಹಚಾರ ಕೆಟ್ಟರೆ ಅಂತಹ ಪೋಸ್ಟ್ ಹಾಕಿದವರು ನಾಪತ್ತೆ ಆದರೂ ಆಗಬಹುದು. ಅಂತಹ ಭಯಾನಕ ಸ್ಥಿತಿ ಅಲ್ಲಿದೆ ಎಂದು ಇತ್ತೀಚಿನ ವರದಿಗಳು ತಿಳಿಸುತ್ತಿವೆ. ಹೀಗೆ ಸಹಜವಾಗಿ ಟಿಕ್‌ಟಾಕ್ ಮೇಲೆ ನಿಯಂತ್ರಣ ಸಾಧಿಸಲು ಪಾಕ್ ಸರ್ಕಾರ ಯತ್ನಿಸುತ್ತಿತ್ತು. ಅದು ಇದೀಗ ಪರೋಕ್ಷವಾಗಿ ನೆರವೇರಿದಂತೆ ಕಾಣುತ್ತಿದೆ.

ಇಂಟರ್‌ನೆಟ್ ಬಳಕೆ ಮೇಲೆ ಹಿಡಿತ

ಇಂಟರ್‌ನೆಟ್ ಬಳಕೆ ಮೇಲೆ ಹಿಡಿತ

ಪಾಕಿಸ್ತಾನದಲ್ಲಿ ಇಂಟರ್‌ನೆಟ್ ಬಳಸಬಹುದಾದರೂ ನೂರಾರು ನಿಯಮಗಳು ಅನ್ವಯಿಸುತ್ತವೆ. ಅಕಸ್ಮಾತ್ ಇದೇ ಇಂಟರ್‌ನೆಟ್ ಬಳಸಿ ಪಾಕ್ ಸರ್ಕಾರದ ವಿರುದ್ಧ ಮಾತನಾಡಿದರೆ ಆತ ಎಲ್ಲಿಹೋದ ಎಂಬ ಮಾಹಿತಿ ಕೂಡ ಸಿಗದು. ಈಗಾಗಲೇ ಸಾವಿರಾರು ಪಾಕ್ ಪತ್ರಕರ್ತರು ನಾಪತ್ತೆಯಾಗಿದ್ದಾರೆ. ಹಲವರನ್ನು ನೇರ ಜೈಲಿಗೆ ಹಾಕಿ ವಾರ್ನಿಂಗ್ ಕೊಡುತ್ತಿದೆ ಪಾಕ್ ಸರ್ಕಾರ. ಜನರು ಮುಕ್ತವಾಗಿ ಇಂಟರ್‌ನೆಟ್ ಬಳಸುವ ವ್ಯವಸ್ಥೆ ಪಾಕ್‌ ಆಡಳಿತದಲ್ಲಿ ಇಲ್ಲ. ಯಾರು ಏನೇ ಮಾಡಿದರೂ ಅದು ಪಾಕ್ ಸರ್ಕಾರದ ಪರವಾಗಿಯೇ ಇರಬೇಕು ಹಾಗೂ ಸರ್ಕಾರದ ವಿರುದ್ಧ ಮಾತನಾಡಬಾರದು. ಪಾಕ್‌ನ ನಡೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಬಂದಿದ್ದೂ ಉಂಟು.

English summary
Pakistan court ordered that telecommunications authority can lift the ban on TikTok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X