ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲ ಮಾಡುವುದರಲ್ಲಿ ದಾಖಲೆ ಬರೆದ ಇಮ್ರಾನ್ ಖಾನ್ ಸರ್ಕಾರ

|
Google Oneindia Kannada News

ಇಸ್ಲಾಮಾಬಾದ್, ಅಕ್ಟೋಬರ್ 9: ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನದ ಆಡಳಿತಾರೂಢ ಸರ್ಕಾರ ಅಧಿಕಾರಕ್ಕೆ ಏರಿದ ಒಂದೇ ವರ್ಷದಲ್ಲಿ ದಾಖಲೆ ಮಾಡಿದೆ. ಅದು ಒಂದು ವರ್ಷದಲ್ಲಿ ದಾಖಲೆ ಮೊತ್ತದ ಸಾಲ ಮಾಡಿದೆ. ಇಮ್ರಾನ್ ಖಾನ್ ಪ್ರಧಾನಿ ಗದ್ದುಗೆಗೆ ಏರಿದ ಒಂದೇ ವರ್ಷದಲ್ಲಿ 7,509 ಬಿಲಿಯನ್ ಪಾಕಿಸ್ತಾನಿ ರುಪಾಯಿಗಳು ಸಾಲ ಮಾಡಿದ್ದಾರೆ. ಅಂದರೆ 7.5 ಲಕ್ಷ ಕೋಟಿ ಪಾಕಿಸ್ತಾನಿ ರುಪಾಯಿ.

ಜಮ್ಮು- ಕಾಶ್ಮೀರ ವಿಚಾರದಲ್ಲಿ ಪಾಕ್ ಬೆಂಬಲಿಸಿದ 58 ದೇಶ ಯಾವುದು? ಸಿಟ್ಟಿಗೆ ಇಷ್ಟು ಸಾಕುಜಮ್ಮು- ಕಾಶ್ಮೀರ ವಿಚಾರದಲ್ಲಿ ಪಾಕ್ ಬೆಂಬಲಿಸಿದ 58 ದೇಶ ಯಾವುದು? ಸಿಟ್ಟಿಗೆ ಇಷ್ಟು ಸಾಕು

ಅಂದ ಹಾಗೆ ಪಾಕಿಸ್ತಾನದ ಸಾಲ ಪ್ರಮಾಣವೂ ಭಾರೀ ಏರಿಕೆ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಸಾಲದ ಬಗ್ಗೆ ಪಾಕಿಸ್ತಾನದ ಪ್ರಧಾನಿ ಕಾರ್ಯಾಲಯಕ್ಕೆ ಮಾಹಿತಿ ರವಾನೆ ಮಾಡಿದೆ. ಆಗಸ್ಟ್ 2018ರಿಂದ 2019ರ ಆಗಸ್ಟ್ ಮಧ್ಯೆ ಪಾಕಿಸ್ತಾನ ಸರ್ಕಾರವು 2,804 ಬಿಲಿಯನ್ ರುಪಾಯಿ ಅಂದರೆ 2.8 ಲಕ್ಷ ಕೋಟಿಯನ್ನು ವಿದೇಶ ಮೂಲದಿಂದ ಪಡೆದಿದ್ದು 4.7 ಲಕ್ಷ ಕೋಟಿಯನ್ನು ದೇಶಿ ಮೂಲದಿಂದ ಪಡೆಯಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Pakistan Government Record Borrowing In One Year

ಬ್ಯಾಂಕ್ ಮೂಲದ ಪ್ರಕಾರ, ಸಾರ್ವಜನಿಕ ಸಾಲ ಪ್ರಮಾಣದಲ್ಲಿ 1.43 ಪರ್ಸೆಂಟ್ ಏರಿಕೆ ಆಗಿದೆ. ಇದು ಆರ್ಥಿಕ ವರ್ಷದ ಮೊದಲ ಎರಡು ತಿಂಗಳಲ್ಲೇ ಆಗಿದೆ. ಪಾಕಿಸ್ತಾನ ಸರ್ಕಾರದ ಒಟ್ಟು ಸಾಲ ಪ್ರಮಾಣವು 32,240 ಬಿಲಿಯನ್, ಅಂದರೆ 32.40 ಲಕ್ಷ ಕೋಟಿ ಇದೆ. ಕಳೆದ ವರ್ಷ ಆ ಮೊತ್ತ 24,732 ಬಿಲಿಯನ್ (24.73 ಲಕ್ಷ ಕೋಟಿ) ಇತ್ತು.

'ಕೈಗೊಂಬೆ' ಇಮ್ರಾನ್ ಖಾನ್ ಗೆ ಪ್ರಧಾನಿ ಹುದ್ದೆ ಬಿಡಲು ಡೆಡ್ ಲೈನ್'ಕೈಗೊಂಬೆ' ಇಮ್ರಾನ್ ಖಾನ್ ಗೆ ಪ್ರಧಾನಿ ಹುದ್ದೆ ಬಿಡಲು ಡೆಡ್ ಲೈನ್

ಪಾಕಿಸ್ತಾನ ಸರ್ಕಾರವು ಈ ಆರ್ಥಿಕ ವರ್ಷದ ಮೊದಲ ತ್ರೈ ಮಾಸಿಕದಲ್ಲಿ 1 ಲಕ್ಷ ಕೋಟಿ ತೆರಿಗೆ ಸಂಗ್ರಹದ ಗುರಿ ಇರಿಸಿಕೊಂಡಿತ್ತು. ಆದರೆ ಸಂಗ್ರಹ ಆಗಿದ್ದು 960 ಬಿಲಿಯನ್.

English summary
Imran Khan led Pakistan government record borrowing in one year time, after he become PM. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X