ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಪ್ರಧಾನಿ ನವಾಜ್ ಷರೀಫ್ 'ಪಲಾಯನ': ಪಾಕಿಸ್ತಾನ ಘೋಷಣೆ

|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 27: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ 'ನಾಪತ್ತೆ'ಯಾಗಿದ್ದಾರೆ. ಹಾಗೆಂದು ಪಾಕಿಸ್ತಾನ ಸರ್ಕಾರ ಘೋಷಿಸಿದೆ.

ಲಂಡನ್‌ನಲ್ಲಿರುವ ತಮ್ಮ ವೈದ್ಯರಿಂದ ವೈದ್ಯಕೀಯ ವರದಿಯನ್ನು ಸಲ್ಲಿಸುವಲ್ಲಿ ವಿಫಲರಾಗಿರುವ ನವಾಜ್ ಷರೀಫ್ ಅವರು ಜಾಮೀನು ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರು 'ಪಲಾಯನಗಾರ' ಎಂದು ಸರ್ಕಾರ ಪ್ರಕಟಿಸಿದೆ.

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಹತ್ಯೆಗೆ ನಡೀತಿತ್ತಾ ಸಂಚು?ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಹತ್ಯೆಗೆ ನಡೀತಿತ್ತಾ ಸಂಚು?

ಅನಾರೋಗ್ಯದಿಂದ ಬಳಲುತ್ತಿರುವ ನವಾಜ್ ಷರೀಫ್ (70) ಅವರು ಚಿಕಿತ್ಸೆ ಪಡೆಯುವ ಸಲುವಾಗಿ ವೈದ್ಯಕೀಯ ನೆಲೆಯ ಆಧಾರದಲ್ಲಿ ಲಾಹೋರ್ ಹೈಕೋರ್ಟ್ ಅವರಿಗೆ ಕಳೆದ ವರ್ಷದ ನವೆಂಬರ್‌ನಲ್ಲಿ ನಾಲ್ಕು ವಾರಗಳ ಅವಕಾಶ ಮಂಜೂರು ಮಾಡಿತ್ತು.

Pakistan Government Declares Nawaz Sharif Absconder Violating Bail Terms

ಷರೀಫ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಅವರು ಸಂಕೀರ್ಣವಾದ ಬಹು ರಕ್ತನಾಳ ಪರಿಧಮನಿ ಕಾಯಿಲೆಯಿಂದ ಬಳಲುತ್ತಿದ್ದು, ತೀವ್ರ ರಕ್ತ ಕೊರತೆ ಎದುರಿಸುತ್ತಿದ್ದಾರೆ. ಅವರ ಹೃದಯದ ಸ್ನಾಯು ಶಸ್ತ್ರಚಿಕಿತ್ಸೆ ಸಹ ಬಾಕಿ ಉಳಿದಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಸ್ಥಿತಿ ಗಂಭೀರಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಸ್ಥಿತಿ ಗಂಭೀರ

ನವಾಜ್ ಷರೀಫ್ ಅವರಿಗೆ ನೀಡಲಾಗಿರುವ ಜಾಮೀನನ್ನು ವಿಸ್ತರಿಸದೆ ಇರಲು ನಿರ್ಧರಿಸಿರುವ ಪಾಕಿಸ್ತಾನ ಸರ್ಕಾರ, ಜಾಮೀನು ನೀಡಲು ಅಗತ್ಯವಾದ ತಮ್ಮ ವೈದ್ಯಕೀಯ ವರದಿಗಳನ್ನು ಇಸ್ಲಾಮಾಬಾದ್ ಹೈಕೋರ್ಟ್ ಆದೇಶದಂತೆ ರಚಿಸಲಾಗಿರುವ ಮಂಡಳಿ ಎದುರು ಹಾಜರುಪಡಿಸಲು ಸಾಧ್ಯವಾಗದೆ ಷರತ್ತುಗಳನ್ನು ಉಲ್ಲಂಘಿಸಿರುವುದರಿಂದ ಅವರನ್ನು ಪಲಾಯನಗಾರ ಎಂದು ಘೋಷಿಸಿದೆ.

ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ಫೆಡರಲ್ ಕ್ಯಾಬಿನೆಟ್‌ನಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

English summary
Pakistan government on tuesday declared former PM Nawaz Sharif an 'absconder' for violating bail requirements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X