ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಪಾಲಿಗೆ ಉಗ್ರ ಬುರ್ಹಾನ್ ವಾನಿ ಹೀರೋನಂತೆ! ಅಂಚೆ ಚೀಟಿಯಲ್ಲೂ ಅವನೇ!

|
Google Oneindia Kannada News

ಇಸ್ಲಾಮಾಬಾದ್, ಸೆಪ್ಟೆಂಬರ್ 21: ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಬುರ್ಹಾನ್ ವಾನಿಯನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯುವ ಮೂಲಕ ಪಾಕಿಸ್ತಾನ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ.

ಅಷ್ಟೇ ಅಲ್ಲ, ಬುರ್ಹಾನ್ ವಾನಿ ಸ್ಮರಣಾರ್ಥ ಅಂಚೆ ಚೀಟಿಯನ್ನು ಪಾಕಿಸ್ಥಾನ ಅಂಚೆ ಇಲಾಖೆ ಬಿಡುಗಡೆ ಮಾಡಿದ್ದು, ಈ ಅಂಚೆ ಚೀಟಿಗಳು ಬುರ್ಹಾನ್ ಭಾವಚಿತ್ರವನ್ನು ಹೊಂದಿವೆ!

ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ 800 ಕೋಟಿ ರು ಸುಪಾರಿ! ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ 800 ಕೋಟಿ ರು ಸುಪಾರಿ!

'ಬುರ್ಹಾನ್ ವಾನಿ ಭಾರತೀಯ ಸೇನೆಯ ದೌರ್ಜನ್ಯಕ್ಕೆ ಬಲಿಯಾದ ಸಂತ್ರಪ್ತ. ಮತ್ತು ಆತ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುತಾತ್ಮ' ಎಂದು ಪಾಕಿಸ್ತಾನದಲ್ಲಿರುವ ವಾನಿ ಬೆಂಬಲಿಗರು ಹೇಳಿದ್ದಾರೆ.

Pakistan glorifies Burhan Wani and issued a ommemorative postage stamp

2016 ರ ನುಲೈನಲ್ಲಿ ಭಾರತೀಯ ಸೇನೆಯ ಗುಂಡಿನ ದಾಳಿಗೆ ಬಲಿಯಾದ ಬುರ್ಹಾನ್ ವಾನಿ ಹಿಜ್ಬುಲ್ ಮುಜಾಹಿದ್ದಿನ್ ಭಯೋತ್ಪಾದಕನಾಗಿಯೂ, ಪ್ರತ್ಯೇಕತಾವಾದಿಯಾಗಿಯೂ ಗುರುತಿಸಿಕೊಂಡಿದ್ದ. ಜಮ್ಮ-ಕಾಶ್ಮೀರದಲ್ಲಿ ಈತನಿಗೆ ಸಾಕಷ್ಟು ಅನುಯಾಯಿಗಳಿದ್ದರು. ಅದಕ್ಕೆಂದೇ ಬುರ್ಹಾನ್ ವಾನಿಯನ್ನು ಸೇನೆ ಬಲಿಪಡೆಯುತ್ತಿದ್ದಂತೆಯೇ ಕಾಶ್ಮೀರದಲ್ಲಿ ಗಲಭೆ ಎದ್ದಿತ್ತು. ಈ ಗಲಭೆ ಸುಮಾರು ತಿಂಗಳುಗಳ ಕಾಲ ಮುಂದುವರಿದಿತ್ತು.

ಉಗ್ರ ಬುರ್ಹಾನ್ ವಾನಿಯನ್ನು ಸಾಯಿಸಲು ಬಿಡುತ್ತಿರಲಿಲ್ಲ: ಕಾಂಗ್ರೆಸ್ ನಾಯಕಉಗ್ರ ಬುರ್ಹಾನ್ ವಾನಿಯನ್ನು ಸಾಯಿಸಲು ಬಿಡುತ್ತಿರಲಿಲ್ಲ: ಕಾಂಗ್ರೆಸ್ ನಾಯಕ

ಕಾಶ್ಮೀರದಲ್ಲಿ ಹಲವು ಗಲಭೆಗಳಿಗೆ ಕಾರನೀಕರ್ತನಾದ ವಾನಿಯನ್ನು ಪಾಕಿಸ್ತಾನ ಈ ಪರಿ ಮೆರೆಸುತ್ತಿರುವುದು ಭಾರತೀಯರಲ್ಲಿ ಆಕ್ರೋಶ ಮೂಡಿಸಿದೆ.

English summary
Pakistan has glorified Hizbul Mujahideen terrorist Burhan Wani by declaring him a freedom fighter and it also issued commemorative postage stamp of Wani!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X