ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಕುಮ್ಮಕ್ಕು ನೀಡುತ್ತಿದೆಯಾ ಚೀನಾ?

|
Google Oneindia Kannada News

ನವದೆಹಲಿ, ಅಕ್ಟೋಬರ್.09: ಶತ್ರುವಿನ ಶತ್ರು ಮಿತ್ರ ಎಂಬ ಬ್ರಿಟಿಷ್ ನೀತಿಯನ್ನು ಇದೀಗ ಚೀನಾ ಅನುಸರಿಸುತ್ತಿದೆಯೇ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ. ಭಾರತ-ಚೀನಾ ನಡುವಿನ ಗಡಿ ಸಂಘರ್ಷದ ನಡುವೆ ಭಾರತದ ವಿರುದ್ಧ ಪಾಕಿಸ್ತಾನವನ್ನು ಎತ್ತಿ ಕಟ್ಟುವುದಕ್ಕೆ ಚೀನಾ ಸಂಚು ರೂಪಿಸುತ್ತಿದೆ.

ಪೂರ್ವ ಲಡಾಖ್ ಭಾಗದ ಪ್ಯಾಂಗಾಂಗ್ ತ್ಸೋ ದಕ್ಷಿಣ ಪ್ರದೇಶಗಳಲ್ಲಿ ಚೀನಾ ಸೇನೆಯು ಈಗಾಗಲೇ ಸೇನಾ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಇನ್ನೊಂದು ದಿಕ್ಕಿನಲ್ಲಿ ಪಾಕಿಸ್ತಾನವು ಸುಧಾರಿತ ಸೇನಾ ಮೂಲಸೌಕರ್ಯಗಳನ್ನು ವೃದ್ಧಿಸಲು ಚೀನಾದ ನೆರವು ಪಡೆದುಕೊಳ್ಳುತ್ತಿದೆ ಎನ್ನಲಾಗುತ್ತಿದ್ದರೂ, ಈ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ.

Fact Check: ಭಾರತೀಯ ಯುದ್ಧ ವಿಮಾನ ಹೊಡೆದುರುಳಿಸಿತಾ ಚೀನಾ?Fact Check: ಭಾರತೀಯ ಯುದ್ಧ ವಿಮಾನ ಹೊಡೆದುರುಳಿಸಿತಾ ಚೀನಾ?

ಪಾಕಿಸ್ತಾನ ಆಕ್ರಮಿಕ ಕಾಶ್ಮೀರದಲ್ಲಿ ಸೇನಾ ಮೂಲಸೌಕರ್ಯಗಳನ್ನು ವೃದ್ಧಿಸಿಕೊಳ್ಳಲು ಮತ್ತು ಸುಧಾರಿತ ಶಸ್ತ್ರಾಸ್ತ್ರಗಳನ್ನು ಹೊಂದುವುದಕ್ಕೆ ಚೀನಾದಿಂದ ಕುಮ್ಮಕ್ಕು ಸಿಗುತ್ತಿದೆ ಎಂಬ ಅನುಮಾನವಂತೂ ದಟ್ಟವಾಗಿದೆ. ಮೂಲಗಳ ಪ್ರಕಾರ, ಉಭಯ ಸೇನಾ ಪಡೆಗಳು ಉತ್ತಮ ಏಕೀಕರಣಕ್ಕೆ ಪ್ರಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಭಾರತೀಯ ಸೇನೆ ಕೂಡಾ ಎರಡೂ ದಿಕ್ಕಿನ ಗಡಿಯಲ್ಲಿ ಹದ್ದಿನ ಕಣ್ಣಿಟ್ಟಿದೆ.

ಹೊಸ ಕ್ಷಿಪಣಿ ವ್ಯವಸ್ಥೆಗೆ ಚೀನಾ ನೆರವು

ಹೊಸ ಕ್ಷಿಪಣಿ ವ್ಯವಸ್ಥೆಗೆ ಚೀನಾ ನೆರವು

ಕಳೆದ ತಿಂಗಳು ಭಾರತದ ಗುಪ್ತಚರ ಇಲಾಖೆಯ ಸಂಶೋಧನಾ ಮತ್ತು ವಿಶ್ಲೇಷಣಾ ತಂಡವು ಈ ಬಗ್ಗೆ ಮಾಹಿತಿ ನೀಡಿತ್ತು. ಪಾಕಿಸ್ತಾನದ ಗಡಿಯಲ್ಲಿ ಹೊಸ ಕ್ಷಿಪಣಿ ವ್ಯವಸ್ಥೆ ಸ್ಥಾಪಿಸುವುದಕ್ಕೆ ಚೀನಾ ಸಹಾಯ ಮಾಡುತ್ತಿದೆ ಎಂಬುದನ್ನು ಖಚಿತಪಡಿಸಿವೆ. ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಿರುವ ಲಸಡಾನ್ನಾ ಢೋಕ್ ನಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ ಮತ್ತು ಪಾಕಿಸ್ತಾನ ಸೇನಾ ಯೋಧರು ಜಂಟಿಯಾಗಿ ಮೇಲ್ಮೈ ವಾಯು ಕ್ಷಿಪಣಿ ಕೇಂದ್ರ ಸ್ಥಾಪನೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದೆ.

ಪಾಕಿಸ್ತಾನದಲ್ಲಿ ಕ್ಷಿಪಣಿ ವ್ಯವಸ್ಥೆ ಸ್ಥಾಪಿಸುವ ಕಾರ್ಯ

ಪಾಕಿಸ್ತಾನದಲ್ಲಿ ಕ್ಷಿಪಣಿ ವ್ಯವಸ್ಥೆ ಸ್ಥಾಪಿಸುವ ಕಾರ್ಯ

ಪಾಕಿಸ್ತಾನದ ಗಡಿಯಲ್ಲಿ ವಾಯು ಕ್ಷಿಪಣಿ ವ್ಯವಸ್ಥೆ ಸ್ಥಾಪಿಸುವುದಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಕಾಮಗಾರಿಯಲ್ಲಿ 130ಕ್ಕೂ ಹೆಚ್ಚು ಪಾಕಿಸ್ತಾನದ ಸೇನಾ ಯೋಧರು, 25 ರಿಂದ 30 ಮಂದಿ ಪಾಕಿಸ್ತಾನದ ನಾಗರಿಕರು ಕೆಲಸ ಮಾಡುತ್ತಿದ್ದಾರೆ. ವ್ಯವಸ್ಥೆಯ ನಿಯಂತ್ರಣ ಕೊಠಡಿಯು ಬಾಗ್ ಜಿಲ್ಲೆಯ ಪಾಕಿಸ್ತಾನಿ ಸೈನ್ಯದ ಬ್ರಿಗೇಡ್ ಕೇಂದ್ರ ಕಚೇರಿಯಲ್ಲಿವೆ ಎಂದು ಗುಪ್ತಚರ ವರದಿ ಮೂಲಗಳಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ ಮೂವರು ಪೀಪಲ್ಸ್ ಲಿಬರೇಷನ್ ಆರ್ಮಿಯ ಅಧಿಕಾರಿಗಳು ಕೇಂದ್ರ ಕಚೇರಿಯಲ್ಲಿದ್ದುಕೊಂಡೇ ಕಾರ್ಯಾಚರಣೆ ನಿಗಾ ವಹಿಸುತ್ತಿದ್ದಾರೆ. ಜೇಲಂ ಜಿಲ್ಲೆಯ ಚಿನಾರಿ, ಪಾಕಿಸ್ತಾನದ ಹಟ್ಟಿಯಾನ್ ಬಾಲಾ ಜಿಲ್ಲೆಯ ಚಕೋತಿಯಲ್ಲೂ ಇದೇ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಗುಪ್ತಚರ ಇಲಾಖೆ ವರದಿಯಲ್ಲಿ ತಿಳಿಸಿದೆ.

ಚೀನಾದ ಬೀಜಿಂಗ್ ನಲ್ಲಿ ಪಾಕ್ ಹಿರಿಯ ಅಧಿಕಾರಿ ನೇಮಕ

ಚೀನಾದ ಬೀಜಿಂಗ್ ನಲ್ಲಿ ಪಾಕ್ ಹಿರಿಯ ಅಧಿಕಾರಿ ನೇಮಕ

ಕಳೆದ ಜೂನ್ ತಿಂಗಳಿನಲ್ಲೇ ಪೀಪಲ್ಸ್ ಲಿಬರೇಷನ್ ಆರ್ಮಿಯ ಕೇಂದ್ರ ಕಚೇರಿ ಬೀಜಿಂಗ್ ನಲ್ಲಿ ಪಾಕಿಸ್ತಾನವು ಹಿರಿಯ ಅಧಿಕಾರಿಯೊಬ್ಬರನ್ನು ನೇಮಕಗೊಳಿಸಿದೆ. ಎರಡು ಸೇನೆಗಳ ಉತ್ತಮ ಏಕೀಕರಣಕ್ಕಾಗಿ ಪಾಕಿಸ್ತಾನ ಈ ಕ್ರಮವನ್ನು ತೆಗೆದುಕೊಂಡಿದೆ ಎಂದು ಗುಪ್ತಚರ ಇಲಾಖೆಯು ತಿಳಿಸಿತ್ತು. ಇದಕ್ಕೂ ಮೊದಲು ಅಂದರೆ ಫೆಬ್ರವರಿ.5ರಂದು, ಭಾರತೀಯ ನೌಕಾಪಡೆಯು ಪಾಕಿಸ್ತಾನದ ಸಮುದ್ರದಲ್ಲಿ ಚೀನಾದ ಯುದ್ಧನೌಕೆ ಕಂಡು ಬಂದಿತ್ತು. ಪಾಕಿಸ್ತಾನದ ನೀರಿನೊಳಗೆ 11 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಯುದ್ಧ ನೌಕೆ ಜಿಯಾಂಗ್ವೆ-ಇಲ್ ಅನ್ನು ಪೋರ್ಬಂದರ್ ‌ನಿಂದ ಬಹಳ ದೂರದಲ್ಲಿ ಗುರುತಿಸಲಾಯಿತು.

ಚೀನಾ ನೌಕೆ ಪಡೆಯುವುದಕ್ಕಾಗಿ ಪಾಕಿಸ್ತಾನದ ಕಾತರ

ಚೀನಾ ನೌಕೆ ಪಡೆಯುವುದಕ್ಕಾಗಿ ಪಾಕಿಸ್ತಾನದ ಕಾತರ

ಕಳೆದ ಜನವರಿಯಲ್ಲಿ ಪಾಕಿಸ್ತಾನ ಮತ್ತು ಚೀನಾ ನೌಕಾಪಡೆಗಳು ದ್ವಿಪಕ್ಷೀಯ ಪ್ರಯೋಗಗಳನ್ನು ನಡೆಸಿದ್ದವು. ನೌಕಾ ಆಸ್ತಿ ಪಡೆಯಲು ಪಾಕಿಸ್ತಾನಕ್ಕೆ ಚೀನಾ ಸೇನೆಯು ನೆರವು ನೀಡುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೇ, ಈ ಸಮಯದಲ್ಲಿ ಪಾಕಿಸ್ತಾನವು ಎಂಟು ಯುವಾನ್ ವರ್ಗದ ಜಲಾಂತರ್ಗಾಮಿ ನೌಕೆಗಳನ್ನು ಮತ್ತು ನಾಲ್ಕು ಟೈಪ್ 054 ಎ ಫ್ರಿಗೇಟ್ ‌ಗಳನ್ನು ಸ್ವೀಕರಿಸಲು ಕಾಯುತ್ತಿದೆ ಎಂದು ಹೇಳಲಾಗುತ್ತಿದೆ.

"ಪಾಕಿಸ್ತಾನ- ಚೀನಾ ಬಾಂಧವ್ಯದ ಬಗ್ಗೆ ಗೊತ್ತಿದೆ"

"ಚೀನಾ ಮತ್ತು ಪಾಕಿಸ್ತಾನಗಳು ನಿಕಟ ವ್ಯವಹಾರವನ್ನು ಹೊಂದಿರುವುದು ಭಾರತಕ್ಕೂ ತಿಳಿದಿದೆ. ಪಾಕಿಸ್ತಾನವು ಇದೀಗ ತಮ್ಮ ರಕ್ಷಣಾ ಸಾಮಗ್ರಿಗಳಿಗಾಗಿ ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅವರು ಪರಸ್ಪರ ಒಟ್ಟಾಗಿ ಸಾಕಷ್ಟು ಸೇನಾ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈ ಚಟುವಟಿಕೆಯಲ್ಲಿ ಅವರ ದ್ವಿಪಕ್ಷೀಯ ಪ್ರಯೋಗಗಳಲ್ಲಿ ನಿಯಮಗಳು ಹೆಚ್ಚುತ್ತಿವೆ " ಎಂದು ಭಾರತೀಯ ವಾಯು ಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆಎಸ್ ಭಡೌರಿಯಾ ಅವರು ತಿಳಿಸಿದ್ದಾರೆ.

English summary
Pakistan Gets Help From China For Set Up Missile System In PoK: New Intel Says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X