ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್‌ಗೆ ಜನ್ಮ ಕೊಟ್ಟಿದ್ದೇ ಪಾಕಿಸ್ತಾನ..! ಮಾಜಿ ರಾಯಭಾರಿಯ ಹೊಸ ಬಾಂಬ್..!

|
Google Oneindia Kannada News

ಅಫ್ಘಾನಿಸ್ತಾನ ಅಕ್ಷರಶಃ ನರಕವಾಗಿದೆ ಈಗಾಗಲೇ ತಾಲಿಬಾನ್ ಪಡೆಗಳು ಇಡೀ ಅಫ್ಘಾನ್‌ನ ವಶಕ್ಕೆ ಪಡೆದಿವೆ. ತಾಲಿಬಾನ್ ತಮಗೆ ಪಾಕಿಸ್ತಾನ 2ನೇ ಮನೆ ಎನ್ನುತ್ತಿದೆ. ಈ ಹೊತ್ತಲ್ಲೇ ಪಾಕ್ ವಿರುದ್ಧ ಅಫ್ಘಾನಿಸ್ತಾನದ ಮಾಜಿ ರಾಯಭಾರಿ ಒಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.

ಅದೇನೆಂದರೆ 'ತಾಲಿಬಾನ್‌ಗೆ ಜನ್ಮ ನೀಡಿದ್ದೇ ಪಾಕಿಸ್ತಾನ, ಭಾರತವನ್ನು ಎದುರಿಸಲು ಪಾಕಿಸ್ತಾನ ತಾಲಿಬಾನ್‌ಗೆ ಜನ್ಮನೀಡಿತ್ತು' ಎಂದಿದ್ದಾರೆ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ನೀಡಿದ್ದ ಹೇಳಿಕೆಯನ್ನು ಮಾಜಿ ರಾಯಭಾರಿ ಉಲ್ಲೇಖಿಸಿರುವುದು ವಿಶೇಷ. 'ಮುಷರಫ್ ಪ್ರಕಾರ, ಭಾರತಕ್ಕೆ ಎದಿರೇಟು ನೀಡುವುದಕ್ಕೇ ಪಾಕಿಸ್ತಾನ ತಾಲಿಬಾನ್‌ಗೆ ಜನ್ಮನೀಡಿದೆ.

ತಾಲಿಬಾನ್ ಗುಲಾಮಗಿರಿಯ ಸಂಕೋಲೆಗಳನ್ನ ಒಡೆದಿದೆ ಎಂದು ಹಾಲಿ ಅಧ್ಯಕ್ಷ ಇಮ್ರಾನ್ ಖಾನ್ ನಂಬಿದ್ದಾರೆ.' ಎಂದು ಅಫ್ಘಾನ್‌ ಮಾಜಿ ವಿದೇಶಾಂಗ ಸಚಿವ ಮತ್ತು ಆಸ್ಟ್ರೇಲಿಯಾದ ಮಾಜಿ ಅಫ್ಘಾನ್ ರಾಯಭಾರಿ ಮಹಮ್ಮದ್ ಸಾಯ್ಕಲ್ ಟ್ವೀಟ್ ಮಾಡಿದ್ದಾರೆ. 'ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಮತ್ತು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ತಾಲಿಬಾನ್ ಜತೆ ಕೈಜೋಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲೂ ಲಾಬಿ ನಡೆಸುತ್ತಿದ್ದಾರೆ' ಎಂದು ಮಹಮ್ಮದ್ ಸಾಯ್ಕಲ್ ಹೊಸ ಬಾಂಬ್ ಸಿಡಿಸಿದ್ದಾರೆ.

 ಅಫ್ಘಾನಿಸ್ತಾನ ಉಗ್ರರ ನೆಲೆ..?

ಅಫ್ಘಾನಿಸ್ತಾನ ಉಗ್ರರ ನೆಲೆ..?

ಇದೇ ವೇಳೆ ಮತ್ತೊಂದು ಆತಂಕ ಹೊರಹಾಕಿರುವ ಸಾಯ್ಕಲ್, ಐಎಸ್‌ಐಎಲ್‌-ಕೆ ಹಾಗೂ 'ಅಲ್ ಖೈದಾ' ನಡುವೆ ಒಪ್ಪಂದ ನಡೆದಿರುವುದನ್ನು ವಿಶ್ವಸಂಸ್ಥೆ ವರದಿಯಿಂದ ಬಹಿರಂಗವಾಗಿದೆ. ಐಎಸ್‌ಐಎಲ್-ಕೆ ಹಾಗೂ ಅಲ್ ಖೈದಾದ ಬಹುತೇಕ ವಿದೇಶಿ ಸದಸ್ಯರು ಪಾಕ್ ಮೂಲಕ ಅಫ್ಘಾನಿಸ್ತಾನ ಪ್ರವೇಶಿಸಿದ್ದಾರೆ. ಉಗ್ರಪಡೆಯ ನಾಯಕರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದರು ಎಂದಿದ್ದಾರೆ. ಮತ್ತೊಂದು ಕಡೆ ಕಾಬೂಲ್‌ನ ತಾಲಿಬಾನ್ ವಶಕ್ಕೆ ಪಡೆದಿದ್ದು, ಅಫ್ಘಾನ್‌ನಲ್ಲಿ ಉಗ್ರವಾದ ಹೆಚ್ಚುವಂತೆ ಮಾಡಲಿದೆ ಎಂದು ಆತಂಕ ಹೊರಹಾಕಿದ್ದಾರೆ. ಭವಿಷ್ಯದಲ್ಲಿ ಇದು ಅಫ್ಘಾನ್‌ಗೆ ಬಹುದೊಡ್ಡ ಬೆದರಿಕೆ ಎಂದಿದ್ದಾರೆ ಮಹಮ್ಮದ್ ಸಾಯ್ಕಲ್.

ಚೀನಾ, ರಷ್ಯಾ ವಾರ್ನಿಂಗ್

ಚೀನಾ, ರಷ್ಯಾ ವಾರ್ನಿಂಗ್

ಕಳೆದ ಬಾರಿಯಂತೆ ಈ ಬಾರಿ ಅಫ್ಘಾನಿಸ್ತಾನ ಉಗ್ರರಿಗೆ ನೆಲೆ ನೀಡುವುದು ಡೌಟ್. ಏಕೆಂದರೆ ತಾಲಿಬಾನ್ ಈ ಬಾರಿ ಬೇರೆಯದ್ದೇ ಮನಸ್ಥಿತಿಯಲ್ಲಿ ಅಧಿಕಾರ ಹಿಡಿದಿದೆ. ಆದರೆ ಪಾಕಿಸ್ತಾನ ಮಾತ್ರ ತಾಲಿಬಾನ್ ನಾಯಕರನ್ನ ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಈ ನಡುವೆ ರಷ್ಯಾ ಹಾಗೂ ಚೀನಾ ತಾಲಿಬಾನ್‌ಗೆ ಎಚ್ಚರಿಕೆಯನ್ನೂ ನೀಡಿವೆ. ಅಫ್ಘಾನ್ ಗಡಿಯಿಂದ ರಷ್ಯಾ ಅಷ್ಟು ದೂರವಿಲ್ಲ. ಅಕಸ್ಮಾತ್ ಅಫ್ಘಾನಿಸ್ತಾನದಲ್ಲಿ ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಹೆಚ್ಚಾಗಿ, ಉಗ್ರ ಪಡೆಗಳು ಅಲ್ಲೇ ನೆಲೆಯೂರದಿರಲಿ. ಹೊಸ ತಲೆನೋವು ಸೃಷ್ಟಿಯಾಗದಿರಲಿ ಎಂಬುದು ರಷ್ಯಾದ ಪ್ಲ್ಯಾನ್. ಈಗಾಗಲೇ ರಷ್ಯಾ ತಾಲಿಬಾನ್‌ಗೆ ಈ ಬಗ್ಗೆ ಖಡಕ್ ಸಂದೇಶ ರವಾನಿಸಿದೆ. ನೆರೆ ದೇಶಗಳಲ್ಲಿ ಉಗ್ರರು ಉಪಟಳ ನೀಡದಂತೆ, ಅಫ್ಘಾನ್ ಉಗ್ರರಿಗೆ ನೆಲೆಯಾಗದಂತೆ ನೋಡಿಕೊಳ್ಳಲು ಎಚ್ಚರಿಕೆ ನೀಡಲಾಗಿದೆ. ಚೀನಾ ಕೂಡ ಇದೇ ಮಾತನ್ನು ತಾಲಿಬಾನ್ ಮುಖಂಡರಿಗೆ ಹೇಳಿ ವಾರ್ನಿಂಗ್ ನೀಡಿ ಕಳಿಸಿದೆ.

ಯಾಕೆ ಬೇಕಿತ್ತು ಇದೆಲ್ಲಾ..?

ಯಾಕೆ ಬೇಕಿತ್ತು ಇದೆಲ್ಲಾ..?

ಅಮೆರಿಕ ಸೂಕ್ತ ವ್ಯವಸ್ಥೆ ಮಾಡಿಕೊಂಡು ಅಫ್ಘಾನಿಸ್ತಾನ ಬಿಟ್ಟು ಹೊರಟಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬುದು ತಜ್ಞರ ವಾದ. ಅಮೆರಿಕ ಕೈಗೊಂಡ ಆತುರದ ನಿರ್ಧಾರ ಈಗ ಅದೇ ದೇಶಕ್ಕೆ ಮುಳುವಾಗುತ್ತಿದೆ. ಗಂಟುಮೂಟೆ ಕಟ್ಟಿಕೊಂಡು ಓಡಿ ಹೋಗಿದ್ದ 'ದೊಡ್ಡಣ್ಣ' ವಾಪಸ್ ಬರುವಂತಾಗಿದೆ. ಇಷ್ಟೆಲ್ಲಾ ಹೈಡ್ರಾಮಾಕ್ಕೆ ಮೊದಲು ಸೂಕ್ತವಾಗಿ ಅಫ್ಘಾನ್ ಪಡೆಗಳಿಗೆ ಸೇನಾ ಸ್ಥಳಗಳನ್ನ ಹಸ್ತಾಂತರ ಮಾಡಿದ್ದರೆ ಇಂತಹ ಪರಿಸ್ಥಿತಿಯೇ ಬರುತ್ತಿರಲಿಲ್ಲ. ಆದರೆ ಸುಮ್ಮನೆ ಇರದೆ ಇರುವೆ ಬಿಟ್ಟುಕೊಂಡ ಅಮೆರಿಕ ಜಗತ್ತಿನ ಎದುರು ವಿಲನ್ ಆಗುತ್ತಿದೆ. ತನ್ನದೇ ತಪ್ಪಿಗೆ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾದ ಅನಿವಾರ್ಯತೆ ಕೂಡ ಸೃಷ್ಟಿಯಾಗಬಹುದು.

‘ತೊಲಗದಿದ್ರೆ ಸರಿ ಇರಲ್ಲ’

‘ತೊಲಗದಿದ್ರೆ ಸರಿ ಇರಲ್ಲ’

ಅಮೆರಿಕ ಈಗಾಗಲೇ ಗಟ್ಟಿ ನಿರ್ಧಾರ ಕೈಗೊಂಡಾಗಿದೆ. ತನ್ನ ಸೇನೆಯನ್ನು ಹಿಂದಕ್ಕೆ ಕರಸಿಕೊಳ್ಳಬೇಕೆಂದು ಸ್ವತಃ ಅಮೆರಿಕ ಅಧ್ಯಕ್ಷರು ಖಡಕ್ ಆದೇಶ ಹೊರಡಿಸಿದ್ದಾರೆ. ಆದರೆ ಇದೀಗ ಒತ್ತಡಗಳು ಕೇಳಿಬರುತ್ತಿರುವ ಬೆನ್ನಲ್ಲೇ ತಾಲಿಬಾನ್ ಉಗ್ರರು ಮತ್ತೊಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ನೀವು ಆಗಸ್ಟ್ 31ರೊಳಗಾಗಿ ಅಫ್ಘಾನ್ ಬಿಟ್ಟು ಹೋಗದಿದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ತಾಲಿಬಾನ್ ಮುಖಂಡರು ಎಚ್ಚರಿಸಿದ್ದಾರೆ. ಕೆಂಡವಾಗಿರುವ ಪರಿಸ್ಥಿತಿ ತಣ್ಣಗಾಗಿಸಲು ಅಮೆರಿಕ ಪರದಾಡುತ್ತಿದೆ. ತನ್ನವರನ್ನ ಸ್ಥಳಾಂತರ ಮಾಡಲು ಬೃಹತ್ ಕಾರ್ಯಾಚರಣೆ ಕೈಗೊಂಡಿದೆ. ಇದರ ನಡುವೆ ಅಫ್ಘಾನ್ ಬಿಟ್ಟು ಹೊರಹೋಗದಂತೆ ಒತ್ತಡಗಳು ಹೆಚ್ಚಾಗುತ್ತಿವೆ.

English summary
Pakistan gave birth to Taliban to counter India: Afghans former envoy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X