ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಹಣ ವರ್ಗಾವಣೆ: ಪಾಕ್ ಮಾಜಿ ಅಧ್ಯಕ್ಷ ಜರ್ದಾರಿ ಬಂಧನ

|
Google Oneindia Kannada News

ಇಸ್ಲಾಮಾಬಾದ್, ಜೂನ್ 10: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ಬಂಧಿಸಲಾಗಿದೆ.

ಜರ್ದಾರಿ ಮತ್ತು ಅವರ ಸಹೋದರಿ ಫರಿಯಲ್ ತಲ್ಪೂರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಮತ್ತು ನಕಲಿ ಖಾತೆಗಳ ಆರೋಪವಿತ್ತು. ತಮ್ಮನ್ನು ಬಂಧಿಸದಂತೆ ನೀಡಲಾಗಿದ್ದ ಬಂಧನಪೂರ್ವ ಜಾಮೀನನ್ನು ಮುಂದುವರಿಸಲು ಇಸ್ಲಾಮಾಬಾದ್ ಹೈಕೋರ್ಟ್ ನಿರಾಕರಿಸಿದ ಬಳಿಕ ಜರ್ದಾರಿ ಅವರನ್ನು ಸೋಮವಾರ ಬಂಧಿಸಲಾಯಿತು.

ತೆರಿಗೆ ಸಂಗ್ರಹ: ಮೋದಿ ದಾರಿ ಅನುಕರಿಸಿದ ಇಮ್ರಾನ್ ಖಾನ್ ತೆರಿಗೆ ಸಂಗ್ರಹ: ಮೋದಿ ದಾರಿ ಅನುಕರಿಸಿದ ಇಮ್ರಾನ್ ಖಾನ್

ಮಾಜಿ ಅಧ್ಯಕ್ಷ ಜರ್ದಾರಿ ಅವರ ಆರೋಗ್ಯ ಸ್ಥಿತಿಯ ಕುರಿತು ವೈದ್ಯರು ತಪಾಸಣೆ ನಡೆಸಲಿದೆ. ಬಳಿಕ ಅವರನ್ನು ಎನ್‌ಎಬಿ ತಂಡ ಕೇಂದ್ರ ಕಚೇರಿಗೆ ಕರೆದೊಯ್ಯಲಿದೆ. ಜರ್ದಾರಿ ಅವರು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮಾಜಿ ಅಧ್ಯಕ್ಷರೂ ಹೌದು.

pakistan former President Asif Ali Zardari arrested in money laundering case

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಪೂರ್ವ ಜಾಮೀನು ರದ್ದುಗೊಳಿಸಿದ ಬಳಿಕ ಶಾಂತಿ ಕಾಪಾಡುವಂತೆ ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

ಮಾತುಕತೆಗೆ ಮುಂದಾದ ಪಾಕ್, ಮೋದಿಗೆ ಇಮ್ರಾನ್ ಖಾನ್ ಪತ್ರಮಾತುಕತೆಗೆ ಮುಂದಾದ ಪಾಕ್, ಮೋದಿಗೆ ಇಮ್ರಾನ್ ಖಾನ್ ಪತ್ರ

ನಕಲಿ ಬ್ಯಾಂಕ್ ಖಾತೆಗಳ ಮೂಲಕ ಜರ್ದಾರಿ ಹಾಗೂ ಫರಿಯಲ್ ತಲ್ಪೂರ್ ಅವರ ಖಾಸಗಿ ಕಂಪೆನಿಗಳಿಗೆ ಕೋಟ್ಯಂತರ ರೂಪಾಯಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅವರ ಬಂಧನ ಪೂರ್ವ ಜಾಮೀನು ಅರ್ಜಿಯ ಕುರಿತಾದ ತೀರ್ಪು ಪ್ರಕಟವಾಗುವ ಮುನ್ನವೇ ಜರ್ದಾರಿ ಹಾಗೂ ಅವರ ಸಹೋದರಿ ನ್ಯಾಯಾಲಯದಿಂದ ಹೊರನಡೆದರು.

ಜರ್ದಾರಿ ಅವರನ್ನು ಬಂಧಿಸಿದರೆ ಪ್ರತಿಭಟನೆ ನಡೆಸುವುದಾಗಿ ಪಿಪಿಪಿ ಸದಸ್ಯರು ಎಚ್ಚರಿಕೆ ನೀಡಿದ್ದರು.

English summary
Former Pakistan President Asif Ali Zardari and his sister Faryal Talpur arrested by NAB team in the money laundering and fake account case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X