ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ದಾಳಿಯಲ್ಲಿ ಪಾಕ್‌ ಕೈವಾಡ ಇದೆ ಎಂದ ನವಾಜ್‌ಗೆ ಕೋರ್ಟ್‌ ಸಮನ್ಸ್‌

|
Google Oneindia Kannada News

ಲಾಹೋರ್, ಸೆಪ್ಟೆಂಬರ್ 24: ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ತಾನಿಯರು ಭಾಗಿಯಾಗಿದ್ದರು ಎಂದಿದ್ದ ಪಾಕ್ ಮಾಜಿ ನವಾಜ್ ಷರೀಫ್‌ ವಿರುದ್ಧ ಲಾಹೋರ್ ಹೈಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ.

'2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯಲ್ಲಿ ಪಾಕಿಸ್ತಾನದವರು ಇದ್ದರು' ಎಂದು ನವಾಜ್ ಷರೀಫ್‌ ಹೇಳಿದ್ದರು. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿಯೊಂದು ಸಲ್ಲಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ನವಾಜ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಮಗಳಿಗೆ ಜೈಲಿನಿಂದ ಮುಕ್ತಿಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಮಗಳಿಗೆ ಜೈಲಿನಿಂದ ಮುಕ್ತಿ

ಕಳೆದ ಮೇ ತಿಂಗಳಲ್ಲಿ ಪಾಕ್‌ನ ಪ್ರತಿಷ್ಠಿತ ಡಾನ್ ಪತ್ರಿಕೆಗೆ ನವಾಜ್ ಷರೀಫ್‌ ಅವರು ನೀಡಿದ್ದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿ, 'ಮುಂಬೈನಲ್ಲಿ ಹಲವು ಮಂದಿ ಮಡಿದ ಭಯೋತ್ಪಾದನಾ ಕೃತ್ಯದಲ್ಲಿ ಪಾಕಿಸ್ತಾದಲ್ಲಿ ಸಕ್ರಿಯವಾಗಿರುವ ಉಗ್ರರ ಗುಂಪು ಭಾಗವಹಿಸಿತ್ತು' ಎಂದಿದ್ದರು. ಅಲ್ಲದೆ ಆ ಪ್ರಕರಣದ ವಿಚಾರಣೆ ತಡವಾಗುತ್ತಿರುವ ಬಗ್ಗೆ ಆಕ್ಷೇಪ ಸಹ ವ್ಯಕ್ತಪಡಿಸಿದ್ದರು.

Pakistan former PM Nawaz Sharif summonsed by Lahore High court

ಈಗ ಈ ಬಗ್ಗೆ ಲಾಹೋರ್ ಹೈಕೋರ್ಟ್‌ ನವಾಜ್ ಷರೀಫ್‌ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದು, ಖಡ್ಡಾಯವಾಗಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ. ಅಲ್ಲದೆ ಅನುಮತಿ ಇಲ್ಲದೆ ದೇಶಬಿಟ್ಟು ಹೋಗದಂತೆ ಸಹ ಹೇಳಿದೆ. ಇಷ್ಟೆ ಅಲ್ಲದೆ ಡಾನ್ ಪತ್ರಿಕೆಯ ಪತ್ರಕರ್ತ ಸಿರಿಲ್ ಅಲ್ಮೇಡಾ ವಿರುದ್ಧವೂ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ಪಾಕ್ ಮಾತುಕತೆ ಬೇಡಿಕೆ ತಿರಸ್ಕರಿಸಿ, ಕಪಾಳಕ್ಕೆ ಬಾರಿಸಿದ ಭಾರತ!ಪಾಕ್ ಮಾತುಕತೆ ಬೇಡಿಕೆ ತಿರಸ್ಕರಿಸಿ, ಕಪಾಳಕ್ಕೆ ಬಾರಿಸಿದ ಭಾರತ!

10 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅವರನ್ನು ಕೆಲವು ದಿನಗಳ ಹಿಂದೆಯಷ್ಟೆ ಕೋರ್ಟ್‌ ಖುಲಾಸೆ ಮಾಡಿದೆ. ಪಾಕಿಸ್ತಾನ ಚುನಾವಣೆಗೂ ಮುಂಚೆ ನವಾಜ್ ಷರೀಫ್‌ ಅವರು ಭ್ರಷ್ಟಾಚಾರದ ಆರೋಪದ ಮೇಲೆ ಜೈಲುಪಾಲಾಗಿದ್ದರು.

English summary
Pakistan former Prime minister Nawaz Sharif summonsed by Lahore high court. He once said in a interview that 'some Pakistani people involved in 2008's Mumbai blast' He is summonsed for this statement
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X