ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವಾಜ್ ಷರೀಫ್ ಮೇಲೆ ಮತ್ತೊಂದು ಆರೋಪ; ಜೈಲಿನಿಂದ NAB ವಶಕ್ಕೆ

|
Google Oneindia Kannada News

ಇಸ್ಲಾಮಾಬಾದ್, ಅಕ್ಟೋಬರ್ 11: ಸದ್ಯಕ್ಕೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಶುಕ್ರವಾರ ಲಂಚ ವಿರೋಧಿ ದಳಕ್ಕೆ ಹದಿನಾಲ್ಕು ದಿನಗಳ ಕಾಲ ನೀಡಲಾಗಿದೆ. ಮತ್ತೊಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದ ಮೇಲೆ ಹದಿನಾಲ್ಕು ದಿನ ವಶಕ್ಕೆ ನೀಡಲಾಗಿದೆ.

ಅಲ್ ಅಜಿಜಿಯಾ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಅರತ್ತೊಂಬತ್ತು ವರ್ಷದ ನವಾಜ್ ಷರೀಫ್ ಈಗ ಲಾಹೋರ್ ನ ಕೋಟ್ ಲಖ್ ಪತ್ ಜೈಲಿನಲ್ಲಿ ಏಳು ವರ್ಷದ ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರನ್ನು ನ್ಯಾಷನಲ್ ಅಕೌಂಟಬಿಲಿಟಿ ಬ್ಯುರೋ ತಂಡವು ವಶಕ್ಕೆ ಪಡೆದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದೆ.

ಜೈಲಿನಲ್ಲಿರುವ ನವಾಜ್ ಶರೀಫ್ ಗೆ ಎಸಿ, ಟಿವಿ ಸೌಲಭ್ಯ ಇನ್ನಿಲ್ಲ: ಇಮ್ರಾನ್ ಖಾನ್ಜೈಲಿನಲ್ಲಿರುವ ನವಾಜ್ ಶರೀಫ್ ಗೆ ಎಸಿ, ಟಿವಿ ಸೌಲಭ್ಯ ಇನ್ನಿಲ್ಲ: ಇಮ್ರಾನ್ ಖಾನ್

ಚೌಧರಿ ಶುಗರ್ ಮಿಲ್ಸ್ ಷೇರು ಮಾರಾಟ ಹಾಗೂ ಖರೀದಿಯಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದ್ದು, ಅದರಲ್ಲಿ ಆರೋಪಿ ಷರೀಫ್ ಭಾಗಿಯಾಗಿರುವ ಶಂಕೆ ಇದೆ. ಆದ್ದರಿಂದ ಹದಿನೈದು ದಿನಗಳ ಕಾಲ ವಶಕ್ಕೆ ನೀಡಬೇಕು ಎಂದು ಕೇಳಲಾಗಿದೆ. ಚೌಧರಿ ಶುಗರ್ ಮಿಲ್ಸ್ ಪ್ರಕರಣದಲ್ಲಿ ಷರೀಫ್ ನೇರ ಫಲಾನುಭವಿ ಆಗಿದ್ದಾರೆ ಎಂದು ಆರೋಪಿಸಲಾಗಿದೆ.

Pakistan Former PM Nawaz Sharif Arrested By NAB

ಷರೀಫ್ ಅವರ ಮಗಳು ಮರ್ಯಾಮ್ ಮತ್ತು ಆಕೆಯ ಸೋದರ ಸಂಬಂಧಿ ಯೂಸೂಫ್ ಅಬ್ಬಾಸ್ ರನ್ನು ಇದೇ ಪ್ರಕರಣದಲ್ಲಿ ಕಳೆದ ಆಗಸ್ಟ್ ನಲ್ಲಿ ಬಂಧಿಸಲಾಗಿತ್ತು. ಷರೀಫ್ ರನ್ನು ಹದಿನಾಲ್ಕು ದಿನಗಳ ಕಾಲ ಎನ್ ಎಬಿ ವಶಕ್ಕೆ ನೀಡಲು ಕೋರ್ಟ್ ಒಪ್ಪಿದೆ. ಲಾಹೋರ್ ನಲ್ಲಿ ಇರುವ ಎನ್ ಎಬಿ ಮುಖ್ಯ ಕಚೇರಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಷರೀಫ್ ವಿಚಾರಣೆ ನಡೆಸಲಾಗುತ್ತದೆ.

ಪನಾಮಾ ಪೇಪರ್ಸ್ ಗೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಲಾಯಿತು. ಆ ನಂತರ ಅವೆನ್ ಫೀಲ್ಡ್ ಹಾಗೂ ಅಲ್- ಅಜಿಜಿಯಾ ಭ್ರಷ್ಟಾಚಾರ ಹಗರಣಗಳಲ್ಲಿ ಕ್ರಮವಾಗಿ ಹತ್ತು ಮತ್ತು ಏಳು ವರ್ಷಗಳ ಶಿಕ್ಷೆ ಆಗಿದೆ.

English summary
National Accountability Bureau Arrested Pakistan former PM Nawaz Sharif in another money laundering case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X