ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಎದುರು ಪಾಕಿಸ್ತಾನಕ್ಕೆ ಮತ್ತೊಮ್ಮೆ ಭಾರೀ ಸೋಲು!

|
Google Oneindia Kannada News

ಜೆನೆವಾ, ಸೆಪ್ಟೆಂಬರ್ 20: ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಮತ್ತೊಮ್ಮೆ ಮುಖಭಂಗವಾಗಿದೆ. ಈ ಮೂಲಕ ಭಾರತಕ್ಕೆ ರಾಜತಾಂತ್ರಿಕ ಗೆಲುವು ದೊರೆತಂತಾಗಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಯ 42 ನೇ ಸಭೆಯಲ್ಲಿ ಕಾಶ್ಮೀರದ ಕುರಿತು ನಿರ್ಣಯ ಮಂಡಿಸಲು ನೀಡಿದ್ದ ಗಡುವಿನೊಳಗೆ ಪಾಕಿಸ್ತಾನ ನಿರ್ಣಯ ಮಂಡಿಸಲು ವಿಫಲವಾಗಿದೆ. ಗುರುವಾರ ಮಧ್ಯಾಹ್ನ 1 ಗಂಟೆಯ ಒಳಗೆ ನಿರ್ಣಯ ಮಂಡಿಸುವಂತೆ ಪಾಕಿಸ್ತಾನಕ್ಕೆ UNHRC ಗಡುವು ನೀಡಿತ್ತು. ಆದರೆ ಅದಕ್ಕೂ ಮುನ್ನ ಸಮಿತಿಯ ಸದಸ್ಯರ ಬೆಂಬಲ ಪಡೆಯುವಲ್ಲಿ ಪಾಕಿಸ್ತಾನದ ವಿಫಲವಾದ ಹಿನ್ನೆಲೆಯಲ್ಲಿ ಅದಕ್ಕೆ ನಿರ್ಣಯ ಮಂಡಿಸಲು ಸಾಧ್ಯವಾಗಿಲ್ಲ.

'ಭಾರತದ ಎದುರು ಪಾಕ್ ಸಾಂಪ್ರದಾಯಿಕ ಯುದ್ಧ ಸೋಲಬಹುದು, ಆದರೆ...''ಭಾರತದ ಎದುರು ಪಾಕ್ ಸಾಂಪ್ರದಾಯಿಕ ಯುದ್ಧ ಸೋಲಬಹುದು, ಆದರೆ...'

ಇನ್ನೂ ಅಚ್ಚರಿಯ ಸಂಗತಿ ಎಂದರೆ 57 ಇಸ್ಲಾಮಿಕ್ ದೇಶಗಳ ಒಕ್ಕೂಟವಾದ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೊ ಆಪರೇಶನ್(ಒಐಸಿ) ನ ಬೆಂಬಲ ಸಹ ಪಾಕಿಸ್ತಾನಕ್ಕೆ ಸಿಕ್ಕಿಲ್ಲ!

Pakistan Fails Again In Unhrc Session To Grab Attention Of The World

ಕಾಶ್ಮೀರದಲ್ಲಿ ಮಾನಹ ಹಕ್ಕುಗಳ ಉಲ್ಲಂಘನೆಯಾಘುತ್ತಿದೆ, ಕಾಶ್ಮೀರದ ವಿಷಯದಲ್ಲಿ ಭಾರತ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂಬ ಪಾಕಿಸ್ತಾನದ ಆರೋಪಕ್ಕೆ ಯಾರೂ ಕಿವಿಗೊಡದಿರುವುದರಿಂದ ಭಾರತದ ಕೈ ಮೇಲಾಗಿದೆ. ಪಾಕಿಸ್ತಾನ ಭಾರತದ ಆಂತರಿಕ ವಿಷಯ ಮತ್ತು ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿಲ್ಲ, ಶಾಂತಿ ನೆಲೆಸಿದೆ ಎಂಬ ಭಾರತದ ವಾದಕ್ಕೆ ಈ ಮೂಲಕ ಮನ್ನಣೆ ದೊರೆತಂತಾಗಿದೆ.

English summary
Pakistan on Thursday failed to garner the required support at the 42nd UN Human Rights Council (UNHRC) session here to place a resolution on Kashmir,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X