ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ ಸರ್ಕಾರಕ್ಕೆ ನೆರವಾಗಲು ಪಾಕ್‌ಗೆ ಎದುರಾಗಿದೆ ತೊಂದರೆ

|
Google Oneindia Kannada News

ಕಾಬೂಲ್, ಸೆಪ್ಟೆಂಬರ್ 29: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರಕ್ಕೆ ಅಂತರರಾಷ್ಟ್ರೀಯ ಮನ್ನಣೆ ದೊರೆಯದಿರುವುದರಿಂದ ಅಫ್ಘನ್‌ಗೆ ತಾಂತ್ರಿಕ, ಆರ್ಥಿಕ ಹಾಗೂ ತಜ್ಞರ ಬೆಂಬಲವನ್ನು ನೀಡಲು ಪಾಕಿಸ್ತಾನಕ್ಕೆ ಸಮಸ್ಯೆ ಎದುರಾಗಿರುವುದಾಗಿ ತಿಳಿದುಬಂದಿದೆ.

ಆರ್ಥಿಕ ವ್ಯವಹಾರಗಳ ಸಚಿವ ಒಮರ್ ಅಯೂಬ್‌ಖಾನ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, ಪ್ರಮುಖ ಪಾಲುದಾರರು ಹೊಸ ಅಫ್ಘನ್ ಆಡಳಿತದಲ್ಲಿ ಸಾಮರ್ಥ್ಯ ಅಭಿವೃದ್ಧಿ ಹಾಗೂ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ತಾಂತ್ರಿಕ ಪರಿಣತಿ ಮೂಲಕ ಬೆಂಬಲಿಸಲು ವಿವಿಧ ಆಯ್ಕೆಗಳನ್ನು ಪರಿಗಣಿಸಿರುವುದಾಗಿ ತಿಳಿಸಿದ್ದಾರೆ.

ಭಾರತ-ಅಫ್ಘಾನ್ ನಡುವೆ ವಿಮಾನ ಸಂಚಾರ ಪುನಾರಂಭಿಸಲು ತಾಲಿಬಾನ್ ಪತ್ರಭಾರತ-ಅಫ್ಘಾನ್ ನಡುವೆ ವಿಮಾನ ಸಂಚಾರ ಪುನಾರಂಭಿಸಲು ತಾಲಿಬಾನ್ ಪತ್ರ

ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ತೀವ್ರ ಆಹಾರ ಬಿಕ್ಕಟ್ಟು ಎದುರಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸಭೆಯನ್ನು ನಡೆಸಲಾಗಿದೆ.

 Pakistan Facing Problem To Help Taliban Govt In Afghanistan Without Its Recognition

ಆದರೆ ಅಫ್ಘನ್‌ನಲ್ಲಿನ ನೂತನ ಸರ್ಕಾರಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಇಲ್ಲದೇ ಹೇಗೆ ನೆರವು ಒದಗಿಸುವುದು ಎಂಬುದು ಪಾಕಿಸ್ತಾನಕ್ಕೆ ಪ್ರಮುಖ ಸವಾಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಅಫ್ಘಾನಿಸ್ತಾನಕ್ಕೆ ಆರ್ಥಿಕ ಸಹಕಾರ ನೀಡುವ ಸಂಬಂಧ ಚರ್ಚೆ ನಡೆಸಲು ಕರೆಯಲಾದ ಸಭೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಹಾಗೂ ಸಂಶೋಧನಾ ಸಚಿವ ಸೈಯದ್ ಫಖರ್ ಇಮಾಮ್,ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್, ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಗವರ್ನರ್ ಡಾ. ರೇಝಾ ಬಖೀರ್, ಜಲ ಹಾಗೂ ವಿದ್ಯುತ್ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ, ನಿವೃತ್ತ ಲೆಫ್ಟಿನಂಟ್ ಜನರಲ್ ಮುಜಾಮಿಲ್ ಹುಸೇನ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಅಫ್ಘಾನಿಸ್ತಾನದಲ್ಲಿ ಅಮೆರಿಕದ ಡ್ರೋನ್ ಹಾರಾಟ, ಎಚ್ಚರಿಕೆ ನೀಡಿದ ತಾಲಿಬಾನ್ಅಫ್ಘಾನಿಸ್ತಾನದಲ್ಲಿ ಅಮೆರಿಕದ ಡ್ರೋನ್ ಹಾರಾಟ, ಎಚ್ಚರಿಕೆ ನೀಡಿದ ತಾಲಿಬಾನ್

ಅಫ್ಘಾನಿಸ್ತಾನದಿಂದ ಅಮೆರಿಕ ತಮ್ಮ ಸೇನಾ ಪಡೆಗಳನ್ನು ಹಿಂತೆಗೆದುಕೊಂಡ ನಂತರ ಅಫ್ಘನ್ ಆಡಳಿತಕ್ಕೆ ದೊಡ್ಡ ಸವಾಲು ಎದುರಾಗಿದೆ. ಅಲ್ಲಿಂದ ತಾಂತ್ರಿಕ ಹಾಗೂ ಆರ್ಥಿಕ ತಜ್ಞರ ವಲಸೆಯಾಗಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.

 Pakistan Facing Problem To Help Taliban Govt In Afghanistan Without Its Recognition

ಪ್ರಮುಖ ಸಂಸ್ಥೆಗಳಲ್ಲಿ, ವಿಶೇಷವಾಗಿ ತಾಂತ್ರಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಸುಗಮ ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತಿದ್ದ ತಜ್ಞರು ವಲಸೆಯಾಗಿದ್ದಾರೆ. ವಿದ್ಯುತ್, ವೈದ್ಯಕೀಯ ಹಾಗೂ ಹಣಕಾಸು ಸೌಲಭ್ಯಗಳಂಥ ಅಗತ್ಯ ಸೇವೆಗಳನ್ನು ಸುಗಮ ಸುಲಭವಾಗಿ ನಿರ್ವಹಿಸುವುದು ಕೂಡ ಅಸಮರ್ಥವಾಗಿದೆ ಎಂದು ತಿಳಿಸಲಾಗಿದೆ.

ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿ ಹಿನ್ನೆಲೆಯಲ್ಲಿ ಆಯುಬ್, ದ್ವಿಪಕ್ಷೀಯ ಆರ್ಥಿಕ ನೆರವಿನ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಅಫ್ಘಾನಿಸ್ತಾನದ ಜನರಿಗೆ ತಮ್ಮ ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಎದುರಿಸಲು ಬೆಂಬಲ ನೀಡಲು ಪಾಕ್ ಸರ್ಕಾರ ಉತ್ಸುಕವಾಗಿದೆ ಎಂದು ಸಚಿವರು ಹೇಳಿದ್ದಾರೆ. ಅಫ್ಘಾನಿಸ್ತಾನ ಜನರ ಜೀವ ಹಾಗೂ ಜೀವನೋಪಾಯಕ್ಕಾಗಿ ಮಾನವೀಯ ನೆಲೆಯಲ್ಲಿ ತಕ್ಷಣವೇ ತಾಂತ್ರಿಕ ಹಾಗೂ ಆರ್ಥಿಕ ನೆರವು ಒದಗಿಸುವುದು ಅತ್ಯವಶ್ಯಕ ಎಂದು ಹೇಳಿದ್ದಾರೆ.

ಸುಮಾರು 14 ಮಿಲಿಯನ್ ಅಫ್ಘನ್ ಜನರು ತೀವ್ರ ಆಹಾರ ಬಿಕ್ಕಟ್ಟನ್ನು ಎದುರಿಸಬಹುದು ಎಂಬ ಆತಂಕಕಾರಿ ವರದಿಗಳ ಬೆನ್ನಲ್ಲೇ ಸಭೆಗಳು ನಡೆಯುತ್ತಿವೆ.

ಪರಿಸ್ಥಿತಿ ಕುರಿತು ತನ್ನ ಕಾಳಜಿಯನ್ನು ವ್ಯಕ್ತಪಡಿಸಿದ ಸಚಿವರು, ಅಫ್ಘಾನಿಸ್ತಾನದ ಜನರಿಗೆ ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಹಾಗೂ ಒಗ್ಗಟ್ಟಿನ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಅಫ್ಘಾನಿಸ್ತಾನದ ಬಿಕ್ಕಟ್ಟನ್ನು ನಿವಾರಿಸಿ ಸ್ಥಿರತೆ ತರುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಮುದಾಯಗಳು ಹಾಗೂ ತಾಲಿಬಾನ್ ಪರಸ್ಪರ ವ್ಯವಹಾರ ಮಾರ್ಗವನ್ನು ಕಂಡುಕೊಳ್ಳುವುದು ಅವಶ್ಯಕವಾಗಿದೆ ಎಂದು ಯುಎನ್ ನಿರಾಶ್ರಿತರ ಸಂಸ್ಥೆ ಮುಖ್ಯಸ್ಥ ಫಿಲಿಪ್ಪೊ ಗ್ರ್ಯಾಂಡಿ ಈಚೆಗಷ್ಟೆ ಹೇಳಿದ್ದರು.

'ಅಂತರರಾಷ್ಟ್ರೀಯ ಸಮುದಾಯಗಳು ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ. ವಾಸ್ತವಿಕತೆ, ಅಫ್ಘಾನಿಸ್ತಾನದಲ್ಲಿ ಸ್ಥಿರತೆಯನ್ನು ತರುವ ಅವಶ್ಯಕತೆ ಹಾಗೂ ತಾಲಿಬಾನ್ ನೇತೃತ್ವದ ಸರ್ಕಾರಕ್ಕೆ ಬೆಂಬಲಿಸುವ ರಾಜಕೀಯ ನೀತಿಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಿದೆ' ಎಂದಿದ್ದರು.

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡ ತಿಂಗಳ ನಂತರ ಇದೀಗ ದೇಶದಲ್ಲಿ ಒಂದೊಂದೇ ಸಮಸ್ಯೆಗಳು ಎದುರಾಗುತ್ತಿವೆ. ಕಳೆದ 20 ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ನೂರಾರು ಶತಕೋಟಿ ಡಾಲರ್ ವೆಚ್ಚ ಮಾಡಿದ್ದು, ಸದ್ಯಕ್ಕೆ ಅಫ್ಘಾನಿಸ್ತಾನದ ಆರ್ಥಿಕತೆ ಕುಸಿಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಈ ತಿಂಗಳ ಅಂತ್ಯದ ವೇಳೆಗೆ ಆಹಾರ ಕೊರತೆ ಭಯಾನಕ ರೂಪ ತಾಳಬಹುದು ಎಂದು ಅಂದಾಜಿಸಲಾಗಿದೆ.

ತನ್ನ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟುಗಳಿಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡದೇ ಎಚ್ಚೆತ್ತುಕೊಳ್ಳದೇ ಇದ್ದರೆ ದೇಶ ಬಡತನ ರೇಖೆಗಿಂತ ಕೆಳಗೆ ಇಳಿಯುವ ಅಪಾಯದಲ್ಲಿದೆ ಎಂದು ಯುಎನ್‌ಡಿಪಿ ಕೂಡ ಎಚ್ಚರಿಕೆ ನೀಡಿದೆ. ಶತಕೋಟಿ ಡಾಲರ್ ವಿದೇಶಿ ನೆರವು ಅಫ್ಘಾನಿಸ್ತಾನಕ್ಕೆ ಹರಿದುಬಂದಿದ್ದರೂ ಅಫ್ಘಾನಿಸ್ತಾನದ ಆರ್ಥಿಕತೆ ಹೆಣಗುತ್ತಿದೆ. ಜನಸಂಖ್ಯೆ ಏರಿಕೆಗೆ ಅನುಗುಣವಾಗಿ ಬೆಳವಣಿಗೆ ಅಸಾಧ್ಯವೆನಿಸುತ್ತಿದೆ. ಉದ್ಯೋಗ ಕಳೆದುಕೊಂಡವರು ಒಂದೆಡೆಯಿದ್ದರೆ, ಅನೇಕ ಸರ್ಕಾರಿ ಉದ್ಯೋಗಿಗಳಿಗೆ ಕನಿಷ್ಠ ಜುಲೈ ತಿಂಗಳಿನಿಂದಲೂ ಸಂಬಳ ನೀಡಿಲ್ಲದಿರುವುದು ಆರ್ಥಿಕ ಬಿಕ್ಕಟ್ಟಿಗೆ ಒಂದು ಉದಾಹರಣೆಯಾಗಿದೆ.

English summary
Pakistan is facing difficulties in providing technical, financial and expert support to the Taliban government in Afghanistan in the absence of the regime’s international recognition
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X