ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'Coal' ಕೊಳ್ಳಲು ಕಾಸಿಲ್ಲ, ಪಾಕಿಸ್ತಾನದಲ್ಲಿ 'Power' ಇಲ್ಲ

|
Google Oneindia Kannada News

ಇಸ್ಲಾಮಾಬಾದ್, ಏ. 19: ಆರ್ಥಿಕವಾಗಿ ಜರ್ಜರಿತಗೊಳ್ಳುತ್ತಿರುವ ಪಾಕಿಸ್ತಾನಕ್ಕೆ ಈಗ ಪವರ್ ಸಮಸ್ಯೆ ಕಾಡುತ್ತಿದೆ. ಭಾರತದಲ್ಲಿ ಕಾಡುತ್ತಿರುವ ಕಲ್ಲಿದ್ದಲು ಸಮಸ್ಯೆಗಿಂತ ಬಹಳ ತೀವ್ರ ಮಟ್ಟದಲ್ಲಿ ಪಾಕಿಸ್ತಾನದ ಪರಿಸ್ಥಿತಿ ಇದೆ. ವಿದೇಶಗಳಿಂದ ಕಲ್ಲಿದ್ದಲು ಅಥವಾ ನೈಸರ್ಗಿಕ ತೈಲ ಕೊಳ್ಳುವಷ್ಟು ಹಣ ಪಾಕಿಸ್ತಾನದ ಬಳಿ ಇಲ್ಲ. ಹೀಗಾಗಿ, ಅಲ್ಲಿ ವಿದ್ಯುತ್ ಉತ್ಪಾದನೆ ಬಹಳಷ್ಟು ಕಡಿಮೆ ಆಗಿದೆ.

ಪಾಕಿಸ್ತಾನದಲ್ಲಿ ಒಟ್ಟಾರೆ ಏಳು ಸಾವಿರಕ್ಕೂ ಹೆಚ್ಚು ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕಗಳು ಬಾಗಿಲು ಬಂದ್ ಮಾಡಿವೆ. ಇದರಲ್ಲಿ ಸುಮಾರು 3500 ಮೆ. ವ್ಯಾ. ವಿದ್ಯುತ್ ಘಟಕಗಳು ಇಂಧನ ಕೊರತೆಯಿಂದ ಮುಚ್ಚಿವೆ. ಇನ್ನುಳಿದವರು ತಾಂತ್ರಿಕ ದೋಷದಿಂದ ಕಾರ್ಯಸ್ಥಗಿತಗೊಂಡಿವೆ ಎಂದು ಪಾಕಿಸ್ತಾನದ ನೂತನ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ತಿಳಿಸಿದ್ದಾರೆ. ಈ ಬಗ್ಗೆ ಡಾಟಾ ಇರುವ ಫೋಟೋವೊಂದನ್ನು ಲಗತ್ತಿಸಿ ಟ್ವೀಟ್ ಮಾಡಿರುವ ಅವರು, ಈ ಪವರ್ ಬಿಕ್ಕಟ್ಟಿಗೆ ಇಮ್ರಾನ್ ಖಾನ್ ನೇತೃತ್ವದ ಹಿಂದಿನ ಸರಕಾರದ ಅಸಾಮರ್ಥ್ಯವೇ ಕಾರಣ ಎಂದು ಟೀಕಿಸಿದ್ದಾರೆ.

Breaking; ಪದಚ್ಯುತಿ ಷಡ್ಯಂತ್ರ, ಇಮ್ರಾನ್ ಖಾನ್ ಯೂ-ಟರ್ನ್ Breaking; ಪದಚ್ಯುತಿ ಷಡ್ಯಂತ್ರ, ಇಮ್ರಾನ್ ಖಾನ್ ಯೂ-ಟರ್ನ್

ಪಾಕಿಸ್ತಾನಕ್ಕೆ ಇಷ್ಟು ವಿದ್ಯುತ್ ಕೊರತೆಯನ್ನುಸರಿದೂಗಿಸುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ವಿದ್ಯುತ್ ಉತ್ಪಾದನೆಗೆ ಪಾಕಿಸ್ತಾನ ಹೊರಗಿನಿಂದ ಇಂಧನ ಪೂರೈಕೆಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಪಾಕಿಸ್ತಾನಕ್ಕೆ ದೀರ್ಘ ಕಾಲದಿಂದ ಎಲ್‌ಎನ್‌ಜಿ ಪೂರೈಕೆ ಮಾಡುತ್ತಿದ್ದ ಸಂಸ್ಥೆಗಳು ಕಳೆದ ಕೆಲ ತಿಂಗಳುಗಳಿಂದ ಹಲವು ಶಿಪ್‌ಮೆಂಟ್‌ಗಳನ್ನ ರದ್ದುಗೊಳಿಸಿವೆ. ಇದರಿಂದ ಪಾಕಿಸ್ತಾನಕ್ಕೆ ಎಲ್‌ಎನ್‌ಜಿ ಪೂರೈಕೆ ಬಹಳ ಕಡಿಮೆ ಆಗಿದೆ.

Pakistan Facing Power Crisis Due to Coal and Natural Gas Shortage

ಸ್ಪಾಟ್ ಮಾರ್ಕೆಟ್‌ನಿಂದ ಆರು ಎಲ್‌ಎನ್‌ಜಿ ಕಾರ್ಗೊಗಳ ಸರಬರಾಜಿಗೆ ಇದೇ ಭಾನುವಾರದಂದು ಪಾಕಿಸ್ತಾನ ಟೆಂಡರ್ ಕರೆದಿದೆ. ಈ ಮಾರುಕಟ್ಟೆಯಲ್ಲಿ ನ್ಯಾಚುರಲ್ ಗ್ಯಾಸ್ ಖರೀದಿ ಮಾಡಿದರೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಇದು ಈಗ ಪಾಕಿಸ್ತಾನವನ್ನ ಸಂಕಷ್ಟಕ್ಕೆ ಮತ್ತು ಪೀಕಲಾಟಕ್ಕೆ ದೂಡುತ್ತಿದೆ.

ನಿರಂತರವಾಗಿ ವಿದ್ಯುತ್ ಪೂರೈಕೆ ಸ್ಥಗಿತ
"ಮುಂಬರುವ ದಿನಗಳಲ್ಲೂ ಈ ಜಾಗತಿಕ ಸ್ಥಿತಿ ಇದೇ ರೀತಿ ಇರುವುದರಿಂದ ಪಾಕಿಸ್ತಾನದ ಪರಿಸ್ಥಿತಿಯಲ್ಲಿ ಸದ್ಯ ಯಾವ ಬದಲಾವಣೆಯೂ ಆಗುವುದು ಅನುಮಾನ," ಎಂದು ಪಾಕಿಸ್ತಾನ್ ಕುವೇತ್ ಇನ್ವೆಸ್ಟ್‌ಮೆಂಟ್ ಸಂಸ್ಥೆಯ ಸಂಶೋಧನಾ ಘಟಕದ ಮುಖ್ಯಸ್ಥ ಸಮೀವುಲ್ಲಾ ತಾರಿಖ್ ಹೇಳಿರುವುದು ವರದಿಯಾಗಿದೆ.

ಈಗ ಪಾಕಿಸ್ತಾನ ಸದ್ಯ ತನಗಿರುವ ವಿದ್ಯುತ್ ಅನ್ನು ಮಾತ್ರ ಬಳಸದೇ ಬೇರೆ ವಿಧಿ ಇಲ್ಲ. ಹೀಗಾಗಿ, ಪಾಕಿಸ್ತಾನದ ಹಲವೆಡೆ ನಿರಂತರವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಪವರ್ ಕಟ್ ಪರಿಸ್ಥಿತಿಯಿಂದ ಪಾಕಿಸ್ತಾನದ ಅನೇಕ ಭಾಗಗಳು ಕತ್ತಲಲ್ಲಿ ಇರಬೇಕಾಗಬಹುದು.

ಇಮ್ರಾನ್ ಖಾನ್ ನೇತೃತ್ವದ ಸರಕಾರ ಪತನಗೊಂಡ ಬಳಿಕ ಅಧಿಕಾರಕ್ಕೆ ಬಂದಿರುವ ನೂತನ ಪ್ರಧಾನಿ ಶಾಹಬಾಜ್ ಅಹ್ಮದ್ ನೇತೃತ್ವದ ಸರಕಾರಕ್ಕೆ ಬಹಳ ದೊಡ್ಡ ಸವಾಲು ಇದೆ. ಲಂಕಾವನ್ನು ಛಿದ್ರಗಳಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಪಾಕಿಸ್ತಾನವನ್ನೂ ಹೈರಾಣಗೊಳಿಸಿದೆ. ಚೀನಾದಿಂದಲೂ ಪಾಕಿಸ್ತಾನಕ್ಕೆ ನಿರೀಕ್ಷಿತ ಸಹಾಯ ಸಿಗುತ್ತಿಲ್ಲ.

ಅಮೆರಿಕವೇ ಅತಿಹೆಚ್ಚು ಸಾಲಗಾರ; ಭಾರತ, ರಷ್ಯಾ ಸೇರಿ ಪ್ರಮುಖ ದೇಶಗಳ ಸಾಲ ಎಷ್ಟೆಷ್ಟು? ಅಮೆರಿಕವೇ ಅತಿಹೆಚ್ಚು ಸಾಲಗಾರ; ಭಾರತ, ರಷ್ಯಾ ಸೇರಿ ಪ್ರಮುಖ ದೇಶಗಳ ಸಾಲ ಎಷ್ಟೆಷ್ಟು?

ಇದೇ ವೇಳೆ, ಶ್ರೀಲಂಕಾ ಮತ್ತು ಪಾಕಿಸ್ತಾನವನ್ನು ಕಾಡುತ್ತಿರುವ ಆರ್ಥಿಕ ಬಿಕ್ಕಟ್ಟು ಮುಂದಿನ ವರ್ಷಗಳಲ್ಲಿ ಭಾರತವನ್ನೂ ಬಾಧಿಸಬಹುದು ಎಂದು ಕೆಲ ತಜ್ಞರು ಎಚ್ಚರಿಸುತ್ತಿದ್ದಾರೆ. ಭಾರತದಲ್ಲೂ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ವಿದ್ಯುತ್ ಉತ್ಪಾದನೆ ಬಹುತೇಕ ಸ್ಥಗಿತಗೊಂಡಿದೆ. ಬಹುತೇಕ ರಾಜ್ಯಗಳಲ್ಲಿ ನಿತ್ಯವೂ ಪವರ್ ಕಟ್ ಆಗುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
Pakistan is facing power crisis due to coal and natural gas supply stoppage. This situation may continue in coming days as International situation not likely to change.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X