ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪುಪಟ್ಟಿಯಿಂದ ಜಸ್ಟ್ ಮಿಸ್... ಆದ್ರೂ ಕೆಲವೇ ತಿಂಗಳಲ್ಲಿ ಪಾಕ್ ಗಿದೆ ಆಘಾತ!

|
Google Oneindia Kannada News

ಇಸ್ಲಾಮಾಬಾದ್, ಅಕ್ಟೋಬರ್ 18: ಪ್ಯಾರಿಸ್ ಮೂಲದ ಉಗ್ರ ಚಟುವಟಿಕೆಗೆಂದು ಅಕ್ರಮವಾಗಿ ಸಾಗಣೆಯಾಗುತ್ತಿರುವ ಹಣವನ್ನು ನಿಯಂತ್ರಿಸುವ FATFಸಂಸ್ಥೆಯು ಪಾಕಿಸ್ತಾನವನ್ನು ಕಪ್ಪಿಪಟ್ಟಿಗೆ ಕಳಿಸುವುದನ್ನು ಮುಂದೂಡಿದೆ!

ಭಯೋತ್ಪಾದನೆಯನ್ನು ನಿಯಂತ್ರಿಸಲು ಪಾಕಿಸ್ತಾನಕ್ಕೆ ಫೆಬ್ರವರಿ 2020 ರವರೆಗೆ ಸಮಯ ನೀಡಲಾಗಿದ್ದು, ಈ ಸಂಸ್ಥೆ ನೀಡಿರುವ 27 ಮಾರ್ಗಸೂಚಿಗಳನ್ನು ಅದು ಫೆಬ್ರವರಿ 2020 ರವೊಳಗೆ ಪೂರ್ಣಗೊಳಿಸಬೇಕಿದೆ. ಇಲ್ಲವೆಂದರೆ ಅದು ಕಪ್ಪುಪಟ್ಟಿಗೆ ಸೇರುವುದು ಖಚಿತವೆನ್ನಿಸಿದೆ.

ಪಾಕಿಸ್ತಾನಕ್ಕೆ ಕೊನೆಯ ವಾರ್ನಿಂಗ್, ಡಾರ್ಕ್ ಗ್ರೇ ಲಿಸ್ಟ್ ಶಿಕ್ಷೆ!ಪಾಕಿಸ್ತಾನಕ್ಕೆ ಕೊನೆಯ ವಾರ್ನಿಂಗ್, ಡಾರ್ಕ್ ಗ್ರೇ ಲಿಸ್ಟ್ ಶಿಕ್ಷೆ!

ಭಯೋತ್ಪಾದನೆಯನ್ನು ನಿಯಂತ್ರಿಸುವಲ್ಲಿ ವಿಫಲವಾದ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಮುಂದಾಗಿತ್ತು. ಆದರೆ ಚೀನಾ, ಟರ್ಕಿ ಮತ್ತು ಮಲೇಶಿಯಾಗಳ ಸಹಾಯದಿಂದ ಕಪ್ಪುಪಟ್ಟಿಗೆ ಸೇರುವ ಸಂದರ್ಭದಿಂದ ಪಾಕಿಸ್ತಾನ ಪಾರಾದರೂ, 2020 ರ ಫೆಬ್ರವರಿಯಲ್ಲಿ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವುದು ಬಹುತೇಕ ಖಚಿತವಾಗಿದೆ.

Pakistan Escapes From Blacklist But Will Be In The List On Feb 2020

ಭಯೋತ್ಪಾದನೆಯ ನಿರ್ಮೂಲನೆಗೆ ವಿಶ್ವಸಂಸ್ಥೆ ಪಾಕಿಸ್ತಾನಕ್ಕೆ ಹಾಕಿರುವ ತಾಕೀತುಗಳನ್ನು ಪಾಲಿಸದೆ ಇದ್ದಲ್ಲಿ ಮತ್ತು ಜಾಗತಿಕ ಉಗ್ರರಿಗೆ ಶಿಕ್ಷೆ ನೀಡದೆ, ಭಯೋತ್ಪಾದನೆಗೆ ಬೆಂಬಲ ನೀಡಿದಲ್ಲಿ ಪಾಕಿಸ್ತಾನ ಡಾರ್ಕ್ ಗ್ರೇ ಲಿಸ್ಟ್ ನಲ್ಲೇ ಉಳಿಯಲಿದೆ. ಅದು ಮತ್ತೆ ಸುಧಾರಣೆ ಕಾಣದೆ ಇದ್ದಲ್ಲಿ ಕಪ್ಪುಪಟ್ಟಿಗೆ ಸೇರಲಿದ್ದು, ಜಗತ್ತಿನ ಯಾವ ರಾಷ್ಟ್ರಗಳೂ ಅದಕ್ಕೆ ಹಣಕಾಸಿನ, ಅಥವಾ ಇನ್ಯಾವುದೇ ನೆರವು ನೀಡಲಾರವು.

English summary
FATF strongly urged Pakistan to swiftly complete its full action plan by February 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X