ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಪತ್ನಿ ಬೈದರೇನಂತೆ, ಹಾಲಿ ಪತ್ನಿಯ ಅಭಿನಂದನೆ ಸಿಕ್ಕಿದೆ ಇಮ್ರಾನ್ ಗೆ!

|
Google Oneindia Kannada News

ಇಸ್ಲಾಮಾಬಾದ್, ಜುಲೈ 28: ಮಾಜಿ ಪತ್ನಿ ರೆಹಾಮ್ ಖಾನ್ ರಿಂದ ಮೊನ್ನೆ ಮೊನ್ನೆ ತಾನೇ ಹಿಗ್ಗಾ ಮುಗ್ಗಾ ಬೈಯ್ಸಿಕೊಂಡ ಪಿಟಿಐ ಮುಖಂಡ ಇಮ್ರಾನ್ ಖಾನ್ ಗೆ ಹಾಲಿ ಪತ್ನಿ ಬುಶ್ರಾ ಮನೆಕಾ ಭುಜಕ್ಕೆ ಭುಜಕೊಟ್ತು ನಿಂತಿದ್ದಾರೆ.

ಮಾಜಿ ಪತ್ನಿ ಬೈದರೇನಂತೆ, ನಾನಿದ್ದೀನಿ ನಿಮ್ಮಜೊತೆ ಎಂದು ಹಾಲಿ ಪತ್ನಿ ಇಮ್ರಾನ್ ಖಾನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಮಾತ್ರವಲ್ಲ, ಜಯಗಳಿಸಿದ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇಮ್ರಾನ್ ಖಾನ್ ಪಾಕ್ ಪ್ರಧಾನಿ? ಜನ್ಮ ಜಾಲಾಡಿದ ಮಾಜಿ ಪತ್ನಿ! ಇಮ್ರಾನ್ ಖಾನ್ ಪಾಕ್ ಪ್ರಧಾನಿ? ಜನ್ಮ ಜಾಲಾಡಿದ ಮಾಜಿ ಪತ್ನಿ!

"ಅಲ್ಲಾಹ್, ದೇವರು ಈ ದೇಶದ ಜನರ ಹಕ್ಕುಗಳನ್ನು ಕಾಪಾಡುವ, ಕಾಳಜಿ ತೋರುವ ನಾಯಕನನ್ನು ಈ ದೇಶಕ್ಕೆ ನೀಡಿದ್ದಾರೆ" ಎಂದು ಬುಶ್ರಾ ಅಭಿನಂದನೆ ಸಲ್ಲಿಸಿದ್ದಾರೆ.''

Pakistan elections: Imran Khans present wife congratulates him for victory

ಇಮ್ರಾನ್ ಖಾನ್ ಅವರ ಮೂರನೇ ಪತ್ನಿಯಾಗಿರುವ ಬುಶ್ರಾ, ಅಧ್ಯಾತ್ಮ ಮಾರ್ಗದರ್ಶಿಯಾಗಿದ್ದಾರೆ.

ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್(ಪಿಟಿಐ) ಪಕ್ಷದ ನಾಯಕ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ.

ಪಾಕಿಸ್ತಾನದ ಕೆಳಮನೆಯಲ್ಲಿ 342 ಸ್ಥಾನಗಳಿದ್ದರೆ ನೇರವಾಗಿ ಚುನಾವಣೆ ನಡೆಯುವುದು 272 ಸ್ಥಾನಗಳಿಗೆ ಮಾತ್ರ. ಇಲ್ಲಿ ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ಸಂಖ್ಯೆ 172. ಈಗಾಗಲೇ 109 ಸ್ಥಾನ ಗಳಿಸಿರುವ ಮಾಜಿ ಕ್ರಿಕೆಟಿಗರೂ ಆದ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಇಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತ. ಆದರೆ ಮೈತ್ರಿ ಸರ್ಕಾರ ಅನಿವಾರ್ಯ ಎನ್ನಿಸಿದೆ.

English summary
Pakistan General elections: Pakistan Tehreek-e-Insaf chief Imran Khan's wife Bushra Maneka has congratulated the whole nation for choosing a leader who is committed to work for welfare of the common man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X