ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಚುನಾವಣೆ ಸಮೀಕ್ಷೆ: ಇಮ್ರಾನ್ ಖಾನ್ ಪಕ್ಷಕ್ಕೆ ಅಲ್ಪಮತದ ಜಯ?

By Mahesh
|
Google Oneindia Kannada News

ಇಸ್ಲಾಮಾಬಾದ್, ಜುಲೈ 24: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಪ್ರಚಾರ ಕಾರ್ಯ ಇಂದು ಅಂತ್ಯ ಕಂಡಿದ್ದು, ಬುಧವಾರ (ಜುಲೈ 25) ದಂದು ಮತದಾನ ನಡೆಯಲಿದೆ.

ಪಾಕಿಸ್ತಾನದ ಮಾಜಿ ನಾಯಕ, ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಹಾಗೂ ಪಿಎಂಎಲ್ ಎನ್ ಪಕ್ಷದ ನವಾಜ್ ಷರೀಫ್ ಅವರ ಸೋದರ ಶಹಬಾಜ್ ಶರೀಫ್ ಅವರ ವಿರುದ್ಧ ನೇರಾನೇರ ಸ್ಪರ್ಧೆ ನಿರೀಕ್ಷಿಸಲಾಗಿದೆ.

ಪಂಜಾಬ್ ಗೆದ್ದರೆ ಪಾಕಿಸ್ತಾನವೇ ಗೆದ್ದಂತೆ, ಇದು ಗದ್ದುಗೆ ಲೆಕ್ಕಾಚಾರ ಪಂಜಾಬ್ ಗೆದ್ದರೆ ಪಾಕಿಸ್ತಾನವೇ ಗೆದ್ದಂತೆ, ಇದು ಗದ್ದುಗೆ ಲೆಕ್ಕಾಚಾರ

ಚುನಾವಣಾ ಪೂರ್ವ ಸಮೀಕ್ಷೆಯಂತೆ ಷರೀಫ್ ಅವರ ಪಿಎಂಎಲ್- ಎನ್ ಗಿಂತ ಇಮ್ರಾನ್ ಖಾನ್ ಅವರ ಪಿಟಿಐ ಅಲ್ಪಮತಗಳ ಮುನ್ನಡೆ ಪಡೆಯುವ ನಿರೀಕ್ಷೆಯಿದೆ. ಅದರಲ್ಲೂ ಪ್ರಧಾನಿ ಹುದ್ದೆಗೆ ರಹದಾರಿ ತೋರಿಸಬಲ್ಲ ಪಂಜಾಬ್ ಪ್ರಾಂತ್ಯದಲ್ಲಿ ಶೇ 14ರಷ್ಟು ಅಧಿಕ ಮಂದಿ ಪಿಟಿಐ ಪರ ನಿಂತಿದ್ದಾರೆ.

Pakistan elections: Imran Khan has thin edge over PML-N says survey

ಪಿಟಿಐ ಪರ ಶೇ 29ರಷ್ಟು ಮತಗಳು ಬಂದಿದ್ದು, ಪಿಎಂಎಲ್ ಎನ್ ಗೆ ಶೇ 25ರಷ್ಟು ಮತಗಳು ಸಿಕ್ಕಿವೆ. ಬಿಲಾವಲ್ ಭುಟ್ಟೋ ಅವರ ಪಾಕಿಸ್ತಾನದ ಪೀಪಲ್ಸ್ ಪಾರ್ಟಿಗೆ ಶೇ20ರಷ್ಟು ಮತಗಳು ಬಂದಿವೆ.

ಹಫೀಜ್ ಸಯೀದ್ ಅವರ ಅಲ್ಲಾ -ಓ- ಅಕ್ಬರ್ ಪಕ್ಷದಿಂದ ಸುಮಾರು 79 ಮಂದಿ ರಾಷ್ಟ್ರೀಯ ಅಸೆಂಬ್ಲಿಗೆ ಸ್ಪರ್ಧಿಸಿದ್ದಾರೆ. 181 ಮಂದಿ ನಾಲ್ಕು ಪ್ರಾಂತ್ಯದ ಅಸೆಂಬ್ಲಿಗೆ ಸ್ಪರ್ಧಿಸುತ್ತಿದ್ದಾರೆ.

ಕೆಳಮನೆಯಲ್ಲಿ 342 ಸ್ಥಾನಗಳಿದ್ದರೆ ನೇರವಾಗಿ ಚುನಾವಣೆ ನಡೆಯುವುದು 272 ಸ್ಥಾನಗಳಿಗೆ ಮಾತ್ರ. ಇಷ್ಟು ಸ್ಥಾನಗಳ ಪೈಕಿ 141 ಸ್ಥಾನಗಳು ಪಾಕಿಸ್ತಾನದಲ್ಲಿರುವ ಪಂಜಾಬ್ ಪ್ರಾಂತ್ಯದಲ್ಲೇ ಬರುತ್ತದೆ. ಇನ್ನು ಸಿಂಧ್ ಪ್ರಾತ್ಯದಲ್ಲಿ 61, ಖೈಬರ್ ಪಖ್ತುನ್ವಾ 39, ಬಲೂಚಿಸ್ತಾನ್ 16, ಎಫ್ ಎಟಿಎ (ಫತಾ) 12, ರಾಜಧಾನಿ (ಇಸ್ಲಾಮಾಬಾದ್ ಭಾಗಕ್ಕೆ) 3 ಸ್ಥಾನಗಳಿವೆ.

ನವಾಜ್ ಷರೀಫ್ ರ ಸೋದರ ಮುನ್ನಡೆಸುತ್ತಿರುವ ಪಾಕಿಸ್ತಾನ ಮುಸ್ಲಿಮ್ ಲೀಗ್ (ಎನ್), ಬೆನಜಿರ್ ಭುಟ್ಟೋ ಮಗ ಬಿಲಾವಲ್ ಭುಟ್ಟೋ ಮುನ್ನಡೆಸುತ್ತಿರುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ- ಇನ್ಸಾಫ್ ಪ್ರಮುಖ ಪಕ್ಷಗಳು.

ಪಾಕಿಸ್ತಾನದ 55 ಜಿಲ್ಲೆಗಳಲ್ಲಿ ಜೂನ್ 25 ಹಾಗೂ ಜುಲೈ 12ರ ನಡುವೆ ಪಂಜಾಬ್, ಖೈಬರ್ ಪಾಖ್ತುಖ್ವಾ, ಸಿಂಧ್ ಹಾಗೂ ಬಲೂಚಿಸ್ತಾನಗಳಲ್ಲಿ ಮುಖ್ಯವಾಗಿ ಸಮೀಕ್ಷೆ ನಡೆಸಿ ಫಲಿತಾಂಶ ಸಂಗ್ರಹಿಸಲಾಗಿತ್ತು.

English summary
The battle in Pakistan is between the PTI led by Imran Khan and PML-N led by Nawaz Sharif's brother Shahbaz Sharif. Campaigning has ended for the elections for which several have cast aspersions on the conduct of the Pakistan army. Pakistan will be voting tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X