• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧರ್ಮಾಂಧ ಉಗ್ರನಿಗೆ ಕೊನೆಗೂ ಸರಿಯಾದ 'ಫತ್ವಾ' ಹೊರಡಿಸಿದ ಪಾಕ್ ಮತದಾರ

|

ಭಾರತದ ಪ್ರಧಾನಿ ನರೇಂದ್ರ ಮೋದಿಯವನ್ನು ಯಾರು ಬೆಂಬಲಿಸುತ್ತಾರೋ, ಕಾಶ್ಮೀರ ಹೋರಾಟಕ್ಕೆ ಯಾರು ವಿರೋಧ ವ್ಯಕ್ತ ಪಡಿಸುತ್ತಾರೋ ಅಂತವರನ್ನು ಅಲ್ಲಾಹ್ ಶಿಕ್ಷಿಸುತ್ತಾನೆ. ಭಾರತವನ್ನು ಸರ್ವನಾಶ ಮಾಡುವುದೇ ನಮ್ಮ ಗುರಿಯಾಗಿರಬೇಕು, ಹೀಗೆ ತನ್ನ ಜೀವನದುದ್ದಕ್ಕೂ ವಿಷಕಕ್ಕುತ್ತಿದ್ದ ಉಗ್ರ ಹಫೀಜ್ ಸಯೀದ್ ಗೆ ಪಾಕಿಸ್ತಾನದ ಜನತೆ ಕೊನೆಗೂ ಸರಿಯಾದ ಪಾಠ ಕಲಿಸಿದ್ದಾರೆ.

ಭಾರೀ ಅಬ್ಬರದೊಂದಿಗೆ ಪಾಕಿಸ್ತಾನದ ಸಾರ್ವತ್ರಿಕ ಚುನಾವಣಾ ಆಖಾಡಕ್ಕೆ ಇಳಿದಿದ್ದ ಹಫೀಜ್ ನೇತೃತ್ವದ ಅಲ್ಲಾಹೋ-ಅಕ್ಬರ್-ತೆಹ್ರಿಕ್ (ಎಎಟಿ) ಪಕ್ಷವನ್ನು ಅಲ್ಲಿನ ಮತದಾರ ಕಸದ ಬುಟ್ಟಿಗೆ ಎಸೆದಿದ್ದಾರೆ. ಹಫೀಜ್ ಪಕ್ಷಕ್ಕೆ ಪಾಕ್ ಚುನಾವಣಾ ಆಯೋಗ ಸ್ಪರ್ಧಿಸಲು ಅವಕಾಶ ನೀಡಿದಾಗ, ಭಾರತ, ಅಮೆರಿಕ ಸೇರಿ ವಿಶ್ವವೇ ಆತಂಕಕ್ಕೆ ಒಳಗಾಗಿತ್ತು.

ಭಾರತ ಚುನಾವಣೆಗೂ ಪಾಕ್ ಚುನಾವಣೆಗೂ ಇರುವ ವ್ಯತ್ಯಾಸ ಚಿತ್ರಗಳಲ್ಲಿ ನೋಡಿ

ಅಭಿವೃದ್ದಿ ವಿಚಾರದ ಬಗ್ಗೆ ಮತ್ತು ಉಗ್ರ ರಾಷ್ಟ್ರ ಹಣೆಪಟ್ಟಿಯಿಂದ ಹೊರಗೆ ಬರಲು ಪಾಕಿಸ್ತಾನ ಏನು ಮಾಡಬೇಕು ಎನ್ನುವುದರ ಬಗ್ಗೆ ಯಾವುದೇ ಪ್ರಣಾಳಿಕೆಯಿಲ್ಲದೆ ಬರೀ ಧರ್ಮದ ವಿಚಾರದಲ್ಲಿ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಾ, ದ್ವೇಷ ಭಾಷಣ ಮಾಡುತ್ತಿದ್ದ ಹಫೀಜ್ ಪಕ್ಷಕ್ಕೆ ಪಾಕಿಸ್ತಾನದ ಮತದಾರ ಮುಟ್ಟಿನೋಡುವಂತಹ ಪಾಠ ಕಲಿಸಿದ್ದಾರೆ.

26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್ ತೊಯ್ಬಾ ಉಗ್ರ ಸಂಘಟನೆಯನ್ನು ಹುಟ್ಟುಹಾಕಿದ್ದ ಹಫೀಜ್ ಸಯೀದ್ ಕುಟುಂಬದ ಸದಸ್ಯರು ಮತ್ತು ಆತನ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಮಣ್ಣುಮುಕ್ಕಿದ್ದಾರೆ. ಆ ಮೂಲಕ, ವಿಶ್ವಕ್ಕೆ ಹೊಸ ಸಂದೇಶ ರವಾನಿಸಲು ಪಾಕ್ ಮತದಾರ ಹೊರಟಂತಿದೆ.

ಒಲ್ಲದ ಮನಸ್ಸಿನಿಂದ ಕೊನೆಗೂ ಒತ್ತಡಕ್ಕೆ ಮಣಿದ ಪಾಕಿಸ್ತಾನ

ಧರ್ಮಯುದ್ದ, ಜಿಹಾದಿ ಬಗ್ಗೆ ಉದ್ದದ್ದೂ ಭಾಷಣ ಬಿಗಿಯುತ್ತಾ ಯುವಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಹಫೀಜ್, ಇದೇ ಹುಮ್ಮಸ್ಸಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಎರಡು ವರ್ಷಗಳ ಹಿಂದೆ, ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಹಿಜಬ್ ಕಮಾಂಡರ್ ಬುರಾನ್ ಮುಜಫರ್ ವಾನಿರನ್ನು ಹೊಡೆದುರುಳಿಸಿದ ನಂತರ, ಹಫೀಜ್ 'ಹೇಟ್ ಸ್ಪೀಚ್' ತಾರಕಕ್ಕೇರಿತ್ತು. ಭಾರತ ಮತ್ತು ಮೋದಿ ವಿರುದ್ದ ವಾಕ್ ಪ್ರಹಾರ ನಡೆಸದೇ ಈತನ ಭಾಷಣವೇ ಮುಗಿಯುತ್ತಿರಲಿಲ್ಲ.

ಅಲ್ಲಾಹೋ ಅಕ್ಬರ್ ತೆಹ್ರಿಕ್ ಪಕ್ಷದ ಚಿಹ್ನೆಯಡಿ 265 ಅಭ್ಯರ್ಥಿ

ಅಲ್ಲಾಹೋ ಅಕ್ಬರ್ ತೆಹ್ರಿಕ್ ಪಕ್ಷದ ಚಿಹ್ನೆಯಡಿ 265 ಅಭ್ಯರ್ಥಿ

ಮೊದಲು ಮಿಲ್ಲಿ ಮುಸ್ಲಿಂ ಲೀಗ್ ಪಕ್ಷವನ್ನು ಹಫೀಜ್ ಸಯೀದ್ ಸ್ಥಾಪಿಸಿದ್ದ, ಆದರೆ ಪಾಕ್ ಚುನಾವಣಾ ಆಯೋಗ ಈ ಪಕ್ಷವನ್ನು ನೊಂದಾಯಿಸಲು ನಿರಾಕರಿಸಿತ್ತು. ಇದಾದ ನಂತರ ಅಲ್ಲಾಹೋ ಅಕ್ಬರ್ ತೆಹ್ರಿಕ್ ಪಕ್ಷದ ಚಿಹ್ನೆಯಡಿ 265 ಅಭ್ಯರ್ಥಿಗಳನ್ನು ಹಫೀಜ್ ಕಣಕ್ಕಿಳಿಸಿದ್ದ. ಈತನ ಎರಡನೇ ಅಳಿಯ ತಲ್ಲಾ ಸಯೀದ್ ಸೇರಿದಂತೆ, ಕುಟುಂಬಸ್ಥರೂ ಕಣದಲ್ಲಿದ್ದರು.

ಹಫೀಜ್ ಪಕ್ಷವನ್ನು ಪಾಕಿಸ್ತಾನದ ಮತದಾರ ತಿರಸ್ಕರಿಸಿದ್ದಾನೆ

ಹಫೀಜ್ ಪಕ್ಷವನ್ನು ಪಾಕಿಸ್ತಾನದ ಮತದಾರ ತಿರಸ್ಕರಿಸಿದ್ದಾನೆ

ಹಫೀಜ್ ಕುಟುಂಬಸ್ಥರೂ ಸೇರಿ ಯಾರೊಬ್ಬರೂ ಚುನಾವಣೆಯಲ್ಲಿ ಗೆಲುವಿನ ದಡ ಸೇರಲಾಗದೇ, ಹೀನಾಯ ಸೋಲು ಅನುಭವಿಸಿದ್ದಾರೆ. ಒಂದೇ ಒಂದು ಸೀಟು ಗೆಲ್ಲಲಾಗದೇ ಹಫೀಜ್ ಪಕ್ಷವನ್ನು ಪಾಕಿಸ್ತಾನದ ಮತದಾರ ನೇರಾನೇರ ತಿರಸ್ಕರಿಸಿದ್ದಾನೆ. ಎಎಟಿ ಪಕ್ಷ ಒಂದೂ ಸ್ಥಾನ ಗೆಲ್ಲಲಿಲ್ಲ ಎನ್ನುವುದನ್ನು ಇಸಿಪಿ (ಇಲೆಕ್ಷನ್ ಕಮಿಷನ್ ಆಫ್ ಪಾಕಿಸ್ತಾನ) ಖಚಿತ ಪಡಿಸಿದೆ. (ಚಿತ್ರ: ಎಪಿ)

ಹಫೀಜ್ ಸಯೀದ್ ಪಕ್ಷಕ್ಕೆ ಒಟ್ಟು ಚಲಾವಣೆಯಾದ ಮತ 171,441

ಹಫೀಜ್ ಸಯೀದ್ ಪಕ್ಷಕ್ಕೆ ಒಟ್ಟು ಚಲಾವಣೆಯಾದ ಮತ 171,441

ಇಸಿಪಿ ಅಂಕಿಅಂಶದ ಪ್ರಕಾರ ಹಫೀಜ್ ಸಯೀದ್ ಪಕ್ಷಕ್ಕೆ ಒಟ್ಟು ಚಲಾವಣೆಯಾದ ಮತ 171,441. ನೂರು ಮಿಲಿಯನಿಗೂ ಅಧಿಕ ಮತದಾರನಿರುವ ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಹಫೀಜ್ ಪಕ್ಷಕ್ಕೆ ಬಂದ ಮತಗಳು, ಸಮುದ್ರದಲ್ಲಿ ಒಂದು ಚೊಂಬು ನೀರು ಬಂದಂತೆ. ಪಾಕ್ ಚುನಾವಣೆಯಲ್ಲಿ ಶೇ. 50ಕ್ಕೂ ಹೆಚ್ಚು ಮತದಾನವಾಗಿತ್ತು.

ತೆಹ್ರಿಕ್ - ಇ- ಲಬೈಕ್ ಪಾಕಿಸ್ತಾನ್ (ಟಿಎಲ್ಪಿ) ಪಕ್ಷ

ತೆಹ್ರಿಕ್ - ಇ- ಲಬೈಕ್ ಪಾಕಿಸ್ತಾನ್ (ಟಿಎಲ್ಪಿ) ಪಕ್ಷ

ಹಫೀಜ್ ರೀತಿಯಲ್ಲೇ ಮನಸ್ಥಿತಿ ಹೊಂದಿರುವ ಇನ್ನೊಂದು ಪಕ್ಷ ತೆಹ್ರಿಕ್ - ಇ- ಲಬೈಕ್ ಪಾಕಿಸ್ತಾನ್ (ಟಿಎಲ್ಪಿ) ಪಕ್ಷ ನೂರೈವತ್ತು ಅಭ್ಯರ್ಥಿಗಳನ್ನು ಪಾಕ್ ರಾಷ್ಟ್ರೀಯ ಅಸೆಂಬ್ಲಿಗೆ ಕಣಕ್ಕಿಳಿಸಿತ್ತು. ಈ ಪಕ್ಷಕ್ಕೆ ಸುಮಾರು 22ಲಕ್ಷ ವೋಟ್ ಬಿದ್ದಿತ್ತು ಮತ್ತು ಸಿಂಧ್ ಭಾಗದಲ್ಲಿ ಕೇವಲ ಎರಡು ಸೀಟು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿತ್ತು. ಈ ಫಲಿತಾಂಶ ಮತಾಂಧ ಪಕ್ಷಗಳಿಗೆ ಪಾಕ್ ಮತದಾರ ತೋರಿಸಿದ ಸರಿಯಾದ ಪಾಠ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಮುಖ್ಯವಾಹಿನಿಗೆ ಬರುವ ಈ ಕೋಮು ಪಕ್ಷಗಳ ಪ್ರಯತ್ನಕ್ಕೆ ಭಾರೀ ಹಿನ್ನಡೆ

ಮುಖ್ಯವಾಹಿನಿಗೆ ಬರುವ ಈ ಕೋಮು ಪಕ್ಷಗಳ ಪ್ರಯತ್ನಕ್ಕೆ ಭಾರೀ ಹಿನ್ನಡೆ

ಒಟ್ಟಿನಲ್ಲಿ ಈ ಎರಡು ಪಕ್ಷಗಳು ಜೊತೆಗೆ ಜಮೈತೆ ಉಲೆಮಾ, ಮುತ್ತಾಹಿದಾ ಮಜೀಸ್ ಮುಂತಾದ ಪಕ್ಷಗಳು ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸಿದೆ. ಆ ಮೂಲಕ, ಸದಾ ರಾಜಕೀಯ ಅತಂತ್ರದಲ್ಲಿರುವ ಪಾಕಿಸ್ತಾನದ ಮುಖ್ಯವಾಹಿನಿಗೆ ಬರುವ ಈ ಕೋಮು ಪಕ್ಷಗಳ ಪ್ರಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ.

English summary
Pakistan election: Hafiz Saeed backed Allah-o-Akbar Tehreek party out-rightly rejected by Pak voters. According to the Election Commission of Pakistan (ECP), not a single candidate of the Allah-o-Akbar Tehreek party, supported by the banned Jamaat-ud Dawa (JuD) chief, could win a seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X