ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಸಹಕಾರದಲ್ಲಿ 'ಪಾಕ್‌ವಾಕ್' ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದ ಪಾಕಿಸ್ತಾನ

|
Google Oneindia Kannada News

ಇಸ್ಲಾಮಾಬಾದ್, ಜೂನ್ 02: ಚೀನಾ ಸಹಕಾರದೊಂದಿಗೆ ಪಾಕಿಸ್ತಾನವು 'ಪಾಕ್‌ವಾಕ್' ಎನ್ನುವ ಸ್ವದೇಶಿ ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ಆರೋಗ್ಯ ವಿಶೇಷ ಸಹಾಯಕ ಡಾ. ಫೈಸಲ್ ಸುಲ್ತಾನ್ ಮಾತನಾಡಿ, ಪಾಕಿಸ್ತಾನವು ಕಠಿಣ ಸವಾಲುಗಳನ್ನು ನಿವಾರಿಸಲು, ಸ್ನೇಹಿತರ ಸಹಾಯದಿಂದ ಅವುಗಳನ್ನು ಅವಕಾಶಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. 'ಕೋವಿಡ್ -19 ಸವಾಲನ್ನು ಎದುರಿಸುವಲ್ಲಿ ನಮ್ಮ ಸ್ನೇಹಿತ ಚೀನಾ ನಮಗೆ ಸಹಾಯಕರಾಗಿದ್ದಾರೆ ಎಂದು ನಾವು ತಿಳಿದುಕೊಂಡಿದ್ದೇವೆ ಎಂದು ಬಿಡುಗಡೆ ಸಮಾರಂಭದಲ್ಲಿ ಹೇಳಿದರು.

ಇಮ್ರಾನ್ ಖಾನ್ ಪ್ರಧಾನಿಯಾಗಿ ಅಧಿಕಾರಾವಧಿ ಪೂರೈಸಿದರೆ ಪಾಕಿಸ್ತಾನ ದಿವಾಳಿ: ಭುಟ್ಟೊಇಮ್ರಾನ್ ಖಾನ್ ಪ್ರಧಾನಿಯಾಗಿ ಅಧಿಕಾರಾವಧಿ ಪೂರೈಸಿದರೆ ಪಾಕಿಸ್ತಾನ ದಿವಾಳಿ: ಭುಟ್ಟೊ

ತನ್ನ ಮಿತ್ರ ರಾಷ್ಟ್ರವಾದ ಚೀನಾದ ಸಹಾಯದಿಂದ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ದೇಶದ ಜನರಿಗೆ ಲಸಿಕೆ ಹಾಕಲು ಮತ್ತು ರಾಷ್ಟ್ರದಲ್ಲಿ ಕೊರೊನಾ ಹರಡುವಿಕೆಯನ್ನು ನಿಯಂತ್ರಣಕ್ಕೆ ಸಹಾಯಕವಾಗುತ್ತದೆ.

 ಹೊಸ ಪ್ರಕರಣಗಳೆಷ್ಟು?

ಹೊಸ ಪ್ರಕರಣಗಳೆಷ್ಟು?

ಕಳೆದ 24 ಗಂಟೆಗಳಲ್ಲಿ 1,771 ಹೊಸ ಪ್ರಕರಣಗಳು ವರದಿಯಾಗಿದ್ದು ಮೂರು ತಿಂಗಳಲ್ಲಿ ಮೊದಲ ಬಾರಿಗೆ ಸಕಾರಾತ್ಮಕ ಪ್ರಮಾಣವು ಶೇಕಡಾ 4ಕ್ಕಿಂತ ಕಡಿಮೆಯಾಗಿದೆ. ಒಟ್ಟಾರೆ ಕೋವಿಡ್ ಸೋಂಕಿತರ ಸಂಖ್ಯೆ 922,824ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸೇವೆಗಳ ಸಚಿವಾಲಯ ತಿಳಿಸಿದೆ.

ಕಚ್ಚಾ ವಸ್ತುಗಳನ್ನು ಒದಗಿಸಿದೆ

ಕಚ್ಚಾ ವಸ್ತುಗಳನ್ನು ಒದಗಿಸಿದೆ

ಚೀನಾ ಲಸಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಒದಗಿಸಿದೆ. ಆದರೆ ಲಸಿಕೆಯನ್ನು ಅಭಿವೃದ್ಧಿಪಡಿಸುವುದು ಸುಲಭವಲ್ಲ. ಮುಂದಿನ ದಿನಗಳಲ್ಲಿ ಲಸಿಕೆಯ ಸ್ಥಳೀಯ ಸಾಮೂಹಿಕ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ರಾಷ್ಟ್ರೀಯ ಕಮಾಂಡ್ ಮತ್ತು ಕಾರ್ಯಾಚರಣೆ ಕೇಂದ್ರದ(ಎನ್‌ಸಿಒಸಿ) ಮುಖ್ಯಸ್ಥ ಅಸಾದ್ ಉಮರ್ ಹೇಳಿದ್ದು ಇಂದು ಪಾಕಿಸ್ತಾನಕ್ಕೆ ಮಹತ್ವದ ದಿನವಾಗಿದೆ ಎಂದರು.

 ಎಷ್ಟು ಮಂದಿಗೆ ಲಸಿಕೆ

ಎಷ್ಟು ಮಂದಿಗೆ ಲಸಿಕೆ

ದೇಶದಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆಗಳು ಸಹ ನಡೆಯುತ್ತಿದ್ದು ಇಲ್ಲಿಯವರೆಗೆ 5.3 ಮಿಲಿಯನ್ ಜನರಿಗೆ ಲಸಿಕೆ ಹಾಕಲಾಗಿದೆ. ಇದರಲ್ಲಿ ಸುಮಾರು 2 ಮಿಲಿಯನ್ ಜನರಿಗೆ ಎರಡು ಡೋಸ್ ನ ಸಂಪೂರ್ಣ ಲಸಿಕೆ ನೀಡಲಾಗಿದೆ.

 ಇಮ್ರಾನ್‌ಖಾನ್‌ಗೆ ಕೊರೊನಾ ಸೋಂಕು ತಗುಲಿತ್ತು

ಇಮ್ರಾನ್‌ಖಾನ್‌ಗೆ ಕೊರೊನಾ ಸೋಂಕು ತಗುಲಿತ್ತು

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಮಾರಕ ಕೊರೊನಾ ವೈರಸ್ ಸೋಂಕು ತಗುಲಿತ್ತು.
ಕೊರೊನಾ ಪರೀಕ್ಷೆಯಲ್ಲಿ ಇಮ್ರಾನ್ ಖಾನ್ ಹಾಗೂ ಬುಶ್ರಾ ಬೀಬಿ ಅವರಿಗೆ ಪಾಸಿಟಿವ್ ಫಲಿತಾಂಶ ಬಂದಿದ್ದು, ಇಬ್ಬರನ್ನೂ ಅಧಿಕೃತ ನಿವಾಸದಲ್ಲಿ ಕ್ವಾರಂಟೈನ್‌ಗೆ ಗುರಿಪಡಿಸಲಾಗಿತ್ತು.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾಸ್ಕ್ ಧರಿಸದೇ ಹಲವು ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸಭೆಗಳಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ಎಡವಿದ್ದರು ಎಂಬ ಆರೋಪಗಳು ಕೇಳಿ ಬಂದಿತ್ತು.

English summary
Pakistan on Tuesday launched its homemade Covid-19 vaccine named "PakVac" which it developed with the help of its ally China in order to vaccinate people in the country and bring under control the spread of coronavirus cases in the nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X