ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ವಿಮಾನ ನಮ್ಮ ಮೇಲೆ ಹೋಗುವಂತಿಲ್ಲ ಎಂದ ಪಾಕಿಸ್ತಾನ

|
Google Oneindia Kannada News

Recommended Video

ಮೋದಿ ವಿಮಾನ ಪಾಕಿಸ್ತಾನದ ಮೇಲೆ ಹೋಗುವಂತಿಲ್ಲವಂತೆ | Oneindia Kannada

ಇಸ್ಲಾಮಾಬಾದ್, ಸೆಪ್ಟೆಂಬರ್ 18: ಪ್ರಧಾನಿ ನರೇಂದ್ರ ಮೋದಿ ಅವರ ಮುಂಬರುವ ಅಮೆರಿಕ ಪ್ರವಾಸದ ವೇಳೆ ವಿಮಾನವು ತನ್ನ ವಾಯು ನೆಲೆಯ ಮೂಲಕ ಹಾದುಹೋಗಲು ಅವಕಾಶ ನೀಡಬೇಕೆಂಬ ಭಾರತದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿದೆ.

ಬಿಳಿ ಬಾವುಟ ಪ್ರದರ್ಶಿಸಿ ತನ್ನ ಸೈನಿಕರ ಮೃತದೇಹ ಕೊಂಡೊಯ್ದ ಪಾಕಿಸ್ತಾನಬಿಳಿ ಬಾವುಟ ಪ್ರದರ್ಶಿಸಿ ತನ್ನ ಸೈನಿಕರ ಮೃತದೇಹ ಕೊಂಡೊಯ್ದ ಪಾಕಿಸ್ತಾನ

ಬುಧವಾರ ಬೆಳಿಗ್ಗೆ ಭಾರತವು ಸೆ. 21-27ರಿಂದ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯಾಣಕ್ಕೆ ಪಾಕಿಸ್ತಾನದ ವಾಯು ಪ್ರದೇಶವನ್ನು ಬಳಸಿಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಿತ್ತು.

ಪಾಕಿಸ್ತಾನದ ವಿರುದ್ಧ ಕೇಂದ್ರ ಸರಕಾರದಿಂದ ಸುಳ್ಳು ಅಪಪ್ರಚಾರ: ಶರದ್ ಪವಾರ್ಪಾಕಿಸ್ತಾನದ ವಿರುದ್ಧ ಕೇಂದ್ರ ಸರಕಾರದಿಂದ ಸುಳ್ಳು ಅಪಪ್ರಚಾರ: ಶರದ್ ಪವಾರ್

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ನಮ್ಮ ವಾಯುನೆಲೆಯ ಮೇಲೆ ಪ್ರಧಾನಿ ಮೋದಿ ಅವರ ವಿಮಾನ ಹಾದುಹೋಗಲು ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

Pakistan Denies Indias Request Allow Air Space Modis Flight US Visit

ಭಾರತವು ಮೊದಲು ಮನವಿ ಮಾಡಿದಾಗ ಈ ಬಗ್ಗೆ ಉನ್ನತ ನಾಯಕರ ಅಭಿಪ್ರಾಯ ಪಡೆದು ಪ್ರಕಟಿಸುವುದಾಗಿ ಪಾಕಿಸ್ತಾನ ತಿಳಿಸಿತ್ತು. ಬಳಿಕ ಅದು ವಾಯುನೆಲೆಯನ್ನು ಬಳಸಿಕೊಳ್ಳಲು ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ವೈರಲ್ ವಿಡಿಯೋ: ರಾತ್ರಿ ಉಪಾಯವಾಗಿ ಗಡಿ ನುಸುಳಲು ಪಾಕ್ ಯತ್ನವೈರಲ್ ವಿಡಿಯೋ: ರಾತ್ರಿ ಉಪಾಯವಾಗಿ ಗಡಿ ನುಸುಳಲು ಪಾಕ್ ಯತ್ನ

ಈ ತಿಂಗಳ ಆರಂಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ವಿದೇಶ ಪ್ರಯಾಣದ ವೇಳೆ ಕೂಡ ವಾಯುನೆಲೆಯನ್ನು ಬಳಸಿಕೊಳ್ಳಲು ಪಾಕಿಸ್ತಾನ ಅನುಮತಿ ನಿರಾಕರಿಸಿತ್ತು. ಬಾಲಕೋಟ್ ಮೇಲೆ ಭಾರತದ ವಾಯುಪಡೆಗಳ ದಾಳಿಯ ಬಳಿಕ ಪಾಕಿಸ್ತಾನವು ತನ್ನ ವಾಯುನೆಲೆಯಲ್ಲಿ ಭಾರತದ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಿತ್ತು.

English summary
Pakistan denied India's request to allow PM Narenda Modi's plane in its air space during his US visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X