ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿನಂದನ್ ಹಸ್ತಾಂತರಕ್ಕೂ ಮೊದಲ ವಿಡಿಯೋ ಡಿಲೀಟ್ ಮಾಡಿದ ಪಾಕ್

|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 02: ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವ ಕೆಲವೇ ಕ್ಷಣ ಮೊದಲು ಪಾಕಿಸ್ತಾನ ಶೂಟ್ ಮಾಡಿದ್ದ ವಿಡಿಯೋವನ್ನು ಒತ್ತಡಕ್ಕೆ ಮಣಿದು ಡಿಲೀಟ್ ಮಾಡಿದೆ.

ಪಾಕ್ ಸೇನೆಯನ್ನು ಅಭಿನಂದನ್ ಹೊಗಳುವಂತಹ ವಿಡಿಯೋವನ್ನು ರೆಕಾರ್ಡ್ ಮಾಡಿ, ಅಭಿನಂದನ್ ಬಿಡುಗಡೆಗೂ ಮುನ್ನವೇ ಪಾಕಿಸ್ತಾನ ಅದನ್ನು ಪಾಕ್ ಮಾಧ್ಯಮಗಳಿಗೆ ಹಂಚಿತ್ತು ಎಂದು ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿತ್ತು. ಅದರಲ್ಲಿ ಅಭಿನಂದನ್ ಪಾಕ್ ಸೇನೆಯನ್ನು ಹೊಗಳಿದ ರೀತಿಯ ಸಾಲುಗಳಿದ್ದವು. ಅವು ನಿಜಕ್ಕೂ ಅಭಿನಂದನ್ ಅವರೇ ಹೇಳಿದ್ದಾ? ಅಥವಾ ಅದು ಎಡಿಟ್ ಮಾಡಿದ್ದಾ ಎಂಬ ಅನುಮಾನ ವ್ಯಕ್ತವಾಗಿದ್ದು, ಇದೀಗ ಪಾಕ್ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದನ್ನು ನೋಡಿದರೆ ಮತ್ತಷ್ಟು ಶಂಕೆ ವ್ಯಕ್ತವಾಗಿದೆ.

1 ನಿಮಿಷ 24 ಸೆಕೆಂಡ್ ವಿಡಿಯೋದಲ್ಲಿ 17 ಜಂಪ್ಸ್ ಗಳಿವೆ ಎನ್ನಲಾಗುತ್ತಿದೆ. ಆದರೆ ಈ ವಿಡಿಯೋ ಈಗಲೂ ಹಲವು ಪಾಕ್ ಚಾನೆಲ್ ಗಳಲ್ಲಿ ಲಭ್ಯವಿದೆ!

ಅಭಿನಂದನ್ ಬಿಡುಗಡೆ ವಿಳಂಬಕ್ಕೆ ಅಸಲಿ ಕಾರಣ ಇದು..ಅಭಿನಂದನ್ ಬಿಡುಗಡೆ ವಿಳಂಬಕ್ಕೆ ಅಸಲಿ ಕಾರಣ ಇದು..

ಈ ವಿಡಿಯೋವನ್ನು ಪಾಕ್ ಡಿಲೀಟ್ ಮಾಡಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗಿತ್ತು.

Pakistan deletes Abhinandan Varthamans video

ತಾಯ್ನೆಲಕ್ಕೆ ಮರಳಿದ ಅಭಿನಂದನ್ ಮೊದಲ ಮಾತುತಾಯ್ನೆಲಕ್ಕೆ ಮರಳಿದ ಅಭಿನಂದನ್ ಮೊದಲ ಮಾತು

ಮಿಗ್ 21 ಬೈಸನ್ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಂದು ಪಾಕ್ ಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಇತರ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು.

ಅಭಿನಂದನ್ ಹಸ್ತಾಂತರ ವಿಳಂಬ ಆಗುತ್ತಿರುವುದೇಕೆ?ಅಭಿನಂದನ್ ಹಸ್ತಾಂತರ ವಿಳಂಬ ಆಗುತ್ತಿರುವುದೇಕೆ?

ಅಭಿನಂದನ್ ಅವರನ್ನು ವಶಕ್ಕೆ ಪಡೆದ ಪಾಕಿಸ್ತಾನದ ನಡೆಯನ್ನು ಇಡೀ ವಿಶ್ವವೂ ಖಂಡಿಸುತ್ತಿದ್ದಂತೆಯೇ ಮುಜುಗರಕ್ಕೀಡಾದ ಪಾಕಿಸ್ತಾನ ಶಾಂತಿಯ ಸಲುವಾಗಿ ಅವರನ್ನು ವಾಪಸ್ ಕಳಿಸುತ್ತೇವೆ ಎಂದಿತ್ತು. ಮಾರ್ಚ್ 01 ರಂದು ಅವರನ್ನು ಬಿಡುಗಡೆ ಮಾಡಿತಾದರೂ, ಅದಕ್ಕೂ ಮುನ್ನ ಅವರು ಪಾಕ್ ಸೇನೆಯನ್ನು ಹೊಗಳುವಂಥ ವಿಡಿಯೋವನ್ನು ಅದು ಶೂಟ್ ಮಾಡಿತ್ತು. ಆ ವಿಡಿಯೋವನ್ನು ಹಲವು ಬಾರಿ ಎಡಿಟ್ ಮಾಡಿರುವ ಸಾಧ್ಯತೆ ಇದ್ದು, ಹಲವೆಡೆ ವಿಡಿಯೋ ಕಟ್ ಆಗಿರುವುದು ತಿಳಿಯುತ್ತದೆ.

English summary
After releasing a seemingly edited video of Indian wing commander Abhinandan Varthaman, Pakistan now deleted it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X