ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಭಾರತ ಕಾಲದ ಪಾರಂಪರಿಕ ಸ್ಥಳದ ರಕ್ಷಣೆಗೆ ಮುಂದಾದ ಪಾಕಿಸ್ತಾನ

|
Google Oneindia Kannada News

ಪೇಶಾವರದಲ್ಲಿರುವ ಹಿಂದೂ ಪ್ರಾಚೀನ ಧಾರ್ಮಿಕ ಸ್ಥಳ ಪಂಜ್ ತೀರ್ಥವನ್ನು ಖೈಬರ್ ಪಂಖ್ತುವಾ ಪ್ರಾಂತ್ಯದ ಸರಕಾರವು ರಾಷ್ಟ್ರೀಯ ಪಾರಂಪರಿಕ ಸ್ಥಳವನ್ನಾಗಿ ಘೋಷಣೆ ಮಾಡಿದೆ. ದೇವಾಲಯ, ಐದು ಕೊಳದ ತುಂಬ ನೀರು, ಹಸಿರಿನಿಂದ ತುಂಬಿದ ನೆಲ ಮತ್ತು ಇದರ ಜತೆಗೆ ಖರ್ಜೂರದ ಮರಗಳಿವೆ.

ಪಾಕಿಸ್ತಾನದಲ್ಲಿರುವ ರಿಷಿ ಕಪೂರ್ ಪೂರ್ವಜರ ಮನೆ ಆಗಲಿದೆ ಮ್ಯೂಸಿಯಂ ಪಾಕಿಸ್ತಾನದಲ್ಲಿರುವ ರಿಷಿ ಕಪೂರ್ ಪೂರ್ವಜರ ಮನೆ ಆಗಲಿದೆ ಮ್ಯೂಸಿಯಂ

ಈ ಐದು ಕೊಳಗಳು ಇರುವ ಈ ಪಾರಂಪರಿಕ ಸ್ಥಳವು ಖೈಬರ್ ಪಂಖ್ತುವಾ ವಾಣಿಜ್ಯ ಹಾಗೂ ಕೈಗಾರಿಕೆ ಒಕ್ಕೂಟ ಹಾಗೂ ಚಾಚಾ ಯೂನುಸ್ ಉದ್ಯಾನ ವ್ಯಾಪ್ತಿಯಲ್ಲಿ ಬರುತ್ತದೆ. ನಂಬಿಕೆಹಳ ಪ್ರಕಾರ, ಮಹಾಭಾರತದಲ್ಲಿ ಬರುವ ಪಾಂಡು ಮಹಾರಾಜ ಇದೇ ಪ್ರದೇಶಕ್ಕೆ ಸೇರಿದವನು.

Pakistan declares Panj Tirath Hindu religious site as national heritage

ಹಿಂದೂಗಳು ಕಾರ್ತೀಕ ಮಾಸದಲ್ಲಿ ಇಲ್ಲಿಗೆ ಬರುತ್ತಾರೆ. ಇಲ್ಲಿನ ಕೊಳಗಳಲ್ಲಿ ಸ್ನಾನ ಮಾಡಿ, ಎರಡು ದಿನಗಳ ಕಾಲ ಮರಗಳ ಅಡಿ ಆರಾಧನೆ ಮಾಡುತ್ತಾರೆ. ಅಫ್ಘನ್ ನ ದುರಾನಿ ವಂಶಸ್ಥರು ರಾಜ್ಯಭಾರ ನಡೆಸುವಾಗ ಅಂದರೆ 1747ರಲ್ಲಿ ಈ ಸ್ಥಳವು ಹಾಳಾಗಿತ್ತು. ಆ ನಂತರ ಇಲ್ಲಿನ ಸ್ಥಳೀಯ ಹಿಂದೂಗಳು 1834ರಲ್ಲಿ ಸಿಖ್ಖರ ಆಡಳಿತಾವಧಿಯಲ್ಲಿ ಮತ್ತೆ ದುರಸ್ತಿ ಮಾಡಿದರು.

ಕಪೂರ್ ಕುಟುಂಬದ ಆರ್ ಕೆ ಸ್ಟುಡಿಯೋ ಗೋದ್ರೇಜ್ ಸಂಸ್ಥೆ ಪಾಲು ಕಪೂರ್ ಕುಟುಂಬದ ಆರ್ ಕೆ ಸ್ಟುಡಿಯೋ ಗೋದ್ರೇಜ್ ಸಂಸ್ಥೆ ಪಾಲು

Pakistan declares Panj Tirath Hindu religious site as national heritage

ಈ ಸ್ಥಳವನ್ನು ಹಾಳು ಮಾಡಿದರೆ ಇಪ್ಪತ್ತು ಲಕ್ಷ ತನಕ ಜುಲ್ಮಾನೆ ಮತ್ತು ಐದು ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಸರಕಾರ ಘೋಷಣೆ ಮಾಡಿದೆ. ಈ ಸ್ಥಳವನ್ನು ಇನ್ನೂ ಚೆನ್ನಾಗಿ ಅಭಿವೃದ್ಧಿಪಡಿಸಿ, ಕಾಯ್ದಿಟ್ಟುಕೊಳ್ಳುವ ಉದ್ದೇಶದಿಂದ ಸ್ಥಳೀಯವಾಗಿ ಒತ್ತುವರಿ ತೆರವುಗೊಳಿಸುವಂತೆ ಸ್ಥಳೀಯ ಸರಕಾರ ಸೂಚನೆ ನೀಡಿದೆ. ಜತೆಗೆ ಸುತ್ತಲೂ ಭದ್ರತಾ ಗೋಡೆ ನಿರ್ಮಾಣಕ್ಕೂ ಮುಂದಾಗಿದೆ.

English summary
The provincial Khyber Pakhtunkhwa government in northwest Pakistan has declared the ancient Hindu religious site of Panj Tirath in Peshawar as national heritage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X