ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೀಟರ್ ಹಾಲಿಗೆ 190, ಕೆ.ಜಿ. ಮಟನ್‌ಗೆ 1,100 ರೂ: ಪಾಕಿಸ್ತಾನ ಕಂಗಾಲು

|
Google Oneindia Kannada News

ಇಸ್ಲಾಮಾಬಾದ್, ಮೇ 22: ಅಮೆರಿಕ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯ ಭಾರಿ ಕುಸಿತ ಕಂಡಿರುವಂತೆಯೇ ದೇಶದಲ್ಲಿ ವಸ್ತುಗಳ ಬೆಲೆ ಆಕಾಶಕ್ಕೆ ನೆಗೆದಿದೆ. ಪಾಕಿಸ್ತಾನದ ಕರೆನ್ಸಿಗೆ ಹೊಡೆತ ನೀಡಿರುವ ಹಣದುಬ್ಬರವನ್ನು ನಿಯಂತ್ರಿಸಲು ದಾರಿ ಕಾಣದೆ ಪ್ರಧಾನಿ ಇಮ್ರಾನ್ ಖಾನ್ ಕಂಗೆಟ್ಟಿದ್ದಾರೆ.

ನಾಗರಿಕರು ಅತ್ಯಗತ್ಯ ವಸ್ತುಗಳಿಗೆ ಮೂಲ ಬೆಲೆಗಿಂತ ಹತ್ತು ಇಪ್ಪತ್ತು ಪಟ್ಟು ಹೆಚ್ಚು ಹಣ ನೀಡಿ ಖರೀದಿಸುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಪಾಕಿಸ್ತಾನದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಸ್ಥಿತಿಯಾಗಿದೆ.

ಅಮೆರಿಕ ಡಾಲರ್ ವಿರುದ್ಧ ಸಾರ್ವಕಾಲಿಕ ಕುಸಿತ ಕಂಡ ಪಾಕಿಸ್ತಾನದ ರುಪಾಯಿಅಮೆರಿಕ ಡಾಲರ್ ವಿರುದ್ಧ ಸಾರ್ವಕಾಲಿಕ ಕುಸಿತ ಕಂಡ ಪಾಕಿಸ್ತಾನದ ರುಪಾಯಿ

ಏಷ್ಯಾದಲ್ಲಿಯೇ ಪಾಕಿಸ್ತಾನದ ಕರೆನ್ಸಿ ಅತ್ಯಂತ ದುರ್ಬಲಗೊಂಡಿದೆ. ಡಾಲರ್‌ಗೆ ಪಾಕ್ ರೂಪಾಯಿ ಮೌಲ್ಯ 150ಕ್ಕೆ ಕುಸಿದಿದೆ. ಭಾರತದ ರೂಪಾಯಿ 70 ರೂ., ಬಾಂಗ್ಲಾದೇಶದ ಟಕಾ 84, ನೇಪಾಳದ ರೂಪಾಯಿ 112 ಇದೆ.

ಈರುಳ್ಳಿ, ಟೊಮೆಟೋ, ಬೇಳೆ ಕಾಳುಗಳು ಮುಂತಾದ ಅತಿ ಅಗತ್ಯ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ. ಇದು ರಂಜಾನ್ ಮಾಸವಾಗಿರುವುದರಿಂದ ಅಗತ್ಯ ವಸ್ತುಗಳಿಗೆ ಬೇಡಿಕೆ ಹೆಚ್ಚು.

ಲೀಟರ್ ಹಾಲಿಗೆ 190 ರೂ

ಲೀಟರ್ ಹಾಲಿಗೆ 190 ರೂ

ಪಾಕಿಸ್ತಾನದಲ್ಲಿ ಒಂದು ಲೀಟರ್ ಹಾಲಿನ ಬೆಲೆ 190 ರೂಪಾಯಿ ತಲುಪಿದೆ. ಒಂದು ಕೆ.ಜಿ. ಸೇಬು 400 ರೂ., ಕಿತ್ತಳೆ 360 ರೂ. ಮತ್ತು ಬಾಳೆಹಣ್ಣು ಒಂದು ಕೆ.ಜಿ.ಗೆ 150 ರೂಪಾಯಿಯಂತೆ ಮಾರಾಟವಾಗುತ್ತಿದೆ. ರಂಜಾನ್ ಮಾಸದಲ್ಲಿ ಅತ್ಯಂತ ಬೇಡಿಕೆಯುಳ್ಳ ಮಟನ್ ದರ 1,100 ರೂಪಾಯಿಗೆ ಜಿಗಿದಿದೆ.

ನಂಬಿಕೆ ಕಳೆದುಕೊಂಡ ವರ್ತಕರು

ನಂಬಿಕೆ ಕಳೆದುಕೊಂಡ ವರ್ತಕರು

ಮಾರುಕಟ್ಟೆ ನಿಯಂತ್ರಣ ಬರಲಿದೆ ಎಂಬುದರ ಬಗ್ಗೆ ವ್ಯಾಪಾರಿಗಳು ನಂಬಿಕೆ ಕಳೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪಾಕಿಸ್ತಾನದ ಮೇಲೆ ಹೇರಿರುವ 6 ಬಿಲಿಯನ್ ಡಾಲರ್ ಬೇಲ್‌ಔಟ್ ಪ್ಯಾಕೇಜ್ ಮೇಲಿನ ಷರತ್ತುಗಳೊಂದಿಗೆ ಪಾಕಿಸ್ತಾನಿ ರೂಪಾಯಿ ಮೌಲ್ಯ ನೇರ ಸಂಪರ್ಕ ಹೊಂದಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಕಳೆದ 17 ವರ್ಷಗಳಲ್ಲಿಯೇ ಪಾಕಿಸ್ತಾನದಲ್ಲಿ ಷೇರು ಮಾರುಕಟ್ಟೆ ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಹಣದುಬ್ಬರ ನಿಯಂತ್ರಣಕ್ಕಾಗಿ ಪಾಕಿಸ್ತಾನದ ಸ್ಟೇಟ್ ಬ್ಯಾಂಕ್, ಸೋಮವಾರ ಹಣಕಾಸು ನೀತಿ ಪ್ರಕಟಿಸಲಿದೆ.

ಪಾಕಿಸ್ತಾನಿಗಳಿಗೆ ವೀಸಾ ನೀಡುವುದನ್ನು ನಿಲ್ಲಿಸಿದ ಬಾಂಗ್ಲಾದೇಶ್ಪಾಕಿಸ್ತಾನಿಗಳಿಗೆ ವೀಸಾ ನೀಡುವುದನ್ನು ನಿಲ್ಲಿಸಿದ ಬಾಂಗ್ಲಾದೇಶ್

ಐಎಂಎಫ್ ಜತೆ ಒಪ್ಪಂದ

ಐಎಂಎಫ್ ಜತೆ ಒಪ್ಪಂದ

ಕಳೆದ ವಾರವಷ್ಟೇ ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ $ 6 ಬಿಲಿಯನ್ ನೆರವಿಗಾಗಿ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಿತ್ತು. ಪಾಕಿಸ್ತಾನದ ಕರೆನ್ಸಿ ಮೌಲ್ಯದ ಸ್ಥಿರತೆ ಕಾಪಾಡಿಕೊಳ್ಳುವ ಬಗ್ಗೆ ಸರ್ಕಾರಿ ಅಧಿಕಾರಿಗಳು ಕರೆನ್ಸಿ ಡೀಲರ್ ಗಳ ಜತೆಗೆ ಸಭೆ ನಡೆಸಿದ್ದರು. ಎರಡು ವಾರದ ಹಿಂದಷ್ಟೇ ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಜತೆಗೆ ಪ್ರಾಥಮಿಕ ಒಪ್ಪಂದ ಮಾಡಿಕೊಂಡು, ಮಾರುಕಟ್ಟೆ ನಿರ್ಧಾರಿತ ವಿನಿಮಯ ದರವನ್ನು ಅನುಸರಿಸುವುದಾಗಿ ಒಪ್ಪಿಕೊಂಡಿತ್ತು.

ಆರ್ಥಿಕತೆಗೆ ಮತ್ತಷ್ಟು ಹೊಡೆತ

ಹಣಕಾಸು ಮುಗ್ಗಟ್ಟು ಅನುಭವಿಸುತ್ತಿದ್ದ ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಹಣಕಾಸಿನ ನೆರವು ಪಡೆದುಕೊಂಡಿರುವುದು ಅದರ ಆರ್ಥಿಕತೆಗೆ ಮತ್ತಷ್ಟು ಹೊಡೆತ ನೀಡಿದೆ. ಇದರಿಂದ ರೂಪಾಯಿ ಮೌಲ್ಯ ಕುಸಿತ ಕಂಡಿದ್ದು, ವಿದೇಶಿ ಹಣದ ಹರಿವು ಸಂಪೂರ್ಣ ತಗ್ಗಿದೆ. ತೈಲ ಆಮದಿನಲ್ಲಿ ಕೂಡ ಹೆಚ್ಚಳವಾಗಿದ್ದು, ಇವುಗಳನ್ನು ನಿಭಾಯಿಸಲಾಗದೆ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿದೆ.

English summary
Pakistan is facing inflation after its currency weakened against US Dollar to PKR 150. Essential commodities like milk, onion, tomato, fruits are sold at very high prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X