ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ನಲ್ಲಿ ಹುಡುಗಿ ಋತುಮತಿಯಾದರೆ ಏನು ಬೇಕಾದರೂ ಮಾಡಬಹುದಂತೆ..!

|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 8: ಮೂಲಭೂತವಾದಿಗಳ ಕೈಯಲ್ಲಿ ಸಿಕ್ಕು ನಲುಗುತ್ತಿರುವ ದೇಶ ಪಾಕಿಸ್ತಾನ. ಈ ದೇಶದ ವಕ್ತಾರರು ತಾವು 'ಪ್ರಜಾಪ್ರಭುತ್ವವಾದಿಗಳು' ಎಂದು ಹೇಳಿಕೊಳ್ಳುತ್ತಾರಾದರೂ ಅಲ್ಲಿ ನಡೆಯುವ ಕೆಟ್ಟ ಸಂಗತಿಗಳು ಜಗತ್ತಿಗೆ ತಿಳಿಯುವುದಿಲ್ಲ ಎಂದೇನಿಲ್ಲ.

ಯಾರು ಏನೇ ಹೇಳಿದರೂ ಪಾಕಿಸ್ತಾನದಲ್ಲಿ ಮೂಲಭೂತವಾದಿಗಳ ಅಬ್ಬರ ನಿಲ್ಲುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸಂವಿಧಾನದ ಮೂಲಭೂತ ಹಕ್ಕುಗಳು ಈ ಮೂಲಭೂತವಾದಿಗಳ ಲೆಕ್ಕಕ್ಕೆ ಅಷ್ಟೇ ಅಲ್ಲ, ಅಲ್ಲಿನ ನ್ಯಾಯಾಲಯಗಳಿಗೂ ಲೆಕ್ಕಕ್ಕೆ ಇಲ್ಲ ಎಂಬುದು ಬಹಿರಂಗವಾಗಿದೆ.

ಕೊರೊನಾ ವೈರಸ್: ಪಾಕಿಸ್ತಾನದ ವಿದ್ಯಾರ್ಥಿಗಳನ್ನೂ ರಕ್ಷಿಸುತ್ತಾ ಭಾರತ? ಕೊರೊನಾ ವೈರಸ್: ಪಾಕಿಸ್ತಾನದ ವಿದ್ಯಾರ್ಥಿಗಳನ್ನೂ ರಕ್ಷಿಸುತ್ತಾ ಭಾರತ?

ಪಾಕ್‌ನಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಕ್ರಿಶ್ಚಿಯನ್ ಧರ್ಮದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಮದುವೆಯಾಗಿದ್ದು ಜಗತ್ತಿನ ತುಂಬ ದೊಡ್ಡ ಸುದ್ದಿಯಾಗಿತ್ತು. ಈ ಕುರಿತು ಬಾಲಕಿಯ ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ವಿಚಾರಣೆ ನಡೆಸಿರುವ ಕರಾಚಿ ನ್ಯಾಯಾಲಯ 'ಷರಿಯಾ ಕಾನೂನಿನ ಪ್ರಕಾರ ಋತುಮತಿಯಾದ ಯುವತಿಯನ್ನು ಏನು ಬೇಕಾದರೂ ಮಾಡಬಹುದು. ಹಾಗಾಗಿ ಈ ಮದುವೆ ಷರಿಯಾ ಕಾನೂನಿನ ಪ್ರಕಾರ ಊರ್ಜಿತ' ಎಂದು ಹೇಳಿದೆ.

ಬಾಲಕಿ ಹುಮಾ ಯೂನಸ್ ಯಾರು?

ಬಾಲಕಿ ಹುಮಾ ಯೂನಸ್ ಯಾರು?

ಕಳೆದ 2019 ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನದ ಕರಾಚಿಯಿಂದ 14 ವರ್ಷದ ಹುಮಾ ಯೂನಸ್ ಎಂಬ ಕ್ರಿಶ್ಚಿಯನ್ ಬಾಲಕಿಯನ್ನು ಅಬ್ದುಲ್ ಜಬ್ಬಾರ್‌ ಎನ್ನುವ ಅಪಹರಿಸಿ, ಬಲವಂತದಿಂದ ಮದುವೆ ಮಾಡಿಕೊಂಡಿದ್ದ. ಬಾಲಕಿಯನ್ನು ಅಪಹರಿಸಿ ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್‌ ಪ್ರದೇಶಕ್ಕೆ ಅಬ್ದುಲ್ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ.

ದೂರು ದಾಖಲಿಸಿದ್ದ ಪೋಷಕರು

ದೂರು ದಾಖಲಿಸಿದ್ದ ಪೋಷಕರು

18 ವರ್ಷ ತುಂಬದ ಬಾಲಕಿಯನ್ನು ಅಪಹರಿಸಿ ಮದುವೆಯಾಗಿರುವುದು ಬಾಲ್ಯ ವಿವಾಹ ನಿರ್ಬಂಧ ಕಾಯ್ದೆ ಅನ್ವಯ ಸಿಂಧುವಾಗುವುದಿಲ್ಲ ಎಂದು ಕರಾಚಿಯ ನ್ಯಾಯಾಲಯಕ್ಕೆ ಬಾಲಕಿಯ ಪೋಷಕರು ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಮಹಮ್ಮದ್ ಇಕ್ಬಾಲ್ ಹಾಗೂ ಇರ್ಷಾದ್ ಅಲಿ ಶಾ ಅವರು ಅರ್ಜಿಯನ್ನು ವಿಚಾರಣೆ ನಡೆಸಿ ಆದೇಶ ನೀಡಿದ್ದಾರೆ.

ತಮ್ಮ ವಿದ್ಯಾರ್ಥಿಗಳಿಗೆ ಚೀನಾದಿಂದ ಬರಬೇಡಿ ಎಂದ ಇಮ್ರಾನ್ ಖಾನ್ತಮ್ಮ ವಿದ್ಯಾರ್ಥಿಗಳಿಗೆ ಚೀನಾದಿಂದ ಬರಬೇಡಿ ಎಂದ ಇಮ್ರಾನ್ ಖಾನ್

ಕರಾಚಿ ಕೋರ್ಟ್ ಹೇಳಿದ್ದು ಏನು?

ಕರಾಚಿ ಕೋರ್ಟ್ ಹೇಳಿದ್ದು ಏನು?

ಹುಮಾ ಯೂನಸ್ ಪ್ರಕರಣದಲ್ಲಿ ಕರಾಚಿ ನ್ಯಾಯಾಲಯ ನೀಡಿದ ಆದೇಶ ಈಗ ಚರ್ಚೆಗೆ ಗ್ರಾಸ ಒದಗಿಸಿದೆ. ಮೊದಲ ಬಾರಿ ಋತುಮತಿಯಾದ ಹುಡುಗಿಯನ್ನು ಅಪಹರಿಸುವುದು, ಅಪಹರಿಸಿ ಮದುವೆಯಾಗುವುದು, ಅಪಹರಿಸಿ ಮತಾಂತರ ಮಾಡುವುದು ಷರಿಯಾ ಕಾನೂನಿನ ಪ್ರಕಾರ ತಪ್ಪಲ್ಲ. ಹಾಗಾಗಿ ಹುಮಾ ಹಾಗೂ ಜಬ್ಬಾರ್ ಮದುವೆ ಸಿಂಧು ಆಗುತ್ತದೆ. ಅವರಿಬ್ಬರೂ ಒಟ್ಟಾಗಿ ಸಂಸಾರ ನಡೆಸಲೇಬೇಕು ಎಂದು ಆದೇಶ ನೀಡಿದೆ.

ಮೂಲಭೂತ ಹಕ್ಕುಗಳ ಉಲ್ಲಂಘನೆ

ಮೂಲಭೂತ ಹಕ್ಕುಗಳ ಉಲ್ಲಂಘನೆ

ಕರಾಚಿಯ ಕೋರ್ಟ್‌ನ ಈ ಆದೇಶದ ವಿರುದ್ಧ ಮಾನವ ಹಕ್ಕುಗಳು ಸಿಡಿದೇಳುವ ಸಂಭವವಿದೆ ಎಂದು ಓಪಿ ಇಂಡಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಾಲಕಿಯ ಒಪ್ಪಿಗೆ ಇಲ್ಲದೇ ಮದುವೆ ಮಾಡಿಕೊಂಡು ಮತಾಂತರಿಸಿದರೂ ತಪ್ಪಲ್ಲ ಎಂದು ಕೋರ್ಟ್‌ ಹೇಳಿರುವುದು ಪಾಕಿಸ್ತಾನದಲ್ಲಿ ಮೂಲಭೂತ ಹಕ್ಕುಗಳು ಎಷ್ಟರ ಮಟ್ಟಿಗೆ ಪರಿಪಾಲನೆ ಆಗುತ್ತಿವೆ ಎಂಬುದನ್ನು ಗಮನಿಸಬೇಕಾಗಿದೆ.

ಹಿಂದೂ ಬಾಲಕಿಯರನ್ನೂ ಅಪಹರಿಸಲಾಗಿತ್ತು

ಹಿಂದೂ ಬಾಲಕಿಯರನ್ನೂ ಅಪಹರಿಸಲಾಗಿತ್ತು

ಇತ್ತೀಚೆಗೆ ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಕೂಡ ಇಂತಹದೇ ಘಟನೆ ನಡೆದಿತ್ತು. ಗೋಟಕಿ ಜಿಲ್ಲೆಯ ರವೀನಾ ಹಾಗೂ ರೀನಾ ಎಂಬ ಹಿಂದೂ ಯುವತಿಯರಿಬ್ಬರನ್ನು ಮುಸ್ಲಿಂ ಧರ್ಮಿಯರಿಬ್ಬರು ಅಪಹರಿಸಿದ್ದರು. ಈ ಕುರಿತು ಭಾರತ ಸೇರಿದಂತೆ ಅನೇಕ ಕಡೆ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಕರಾಚಿ ನ್ಯಾಯಾಲಯದ ಆದೇಶ ಮಹತ್ವ ಪಡೆದುಕೊಂಡಿದೆ.

English summary
Pakistan Court Orders Minor Girl Is Valid As Per Sharia Law For Marriage As she had her first period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X