ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಗೆ ಮರಣ ದಂಡನೆ

|
Google Oneindia Kannada News

ಇಸ್ಲಾಮಾಬಾದ್, ಡಿಸೆಂಬರ್ 17: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಗೆ ಮರಣ ದಂಡನೆ ವಿಧಿಸಲಾಗಿದೆ. ಪಾಕಿಸ್ತಾನದ ವಿಶೇಷ ನ್ಯಾಯಾಲಯವೊಂದು ಇಂದು ಗಲ್ಲುಶಿಕ್ಷೆ ಪ್ರಕಟಿಸಿದೆ.

ಪರ್ವೇಜ್ ಮುಷರಫ್ ಅವರು 1999 ರಿಂದ 2008ರ ಅವಧಿಯಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಪರ್ವೇಜ್ ಅವರ ಮೇಲೆ 2007ರಲ್ಲಿ ಪಾಕಿಸ್ತಾನದಲ್ಲಿ ಸಾಂವಿಧಾನಿಕ ತುರ್ತು ಪರಿಸ್ಥಿತಿ ಬಲವಂತವಾಗಿ ಹೇರಿಕೆ, ದೇಶದ್ರೋಹ ಎಸಗಿದ ಆರೋಪವಿತ್ತು.

ಆರೋಪ ಸಾಬೀತಾದ ಹಿನ್ನಲೆಯಲ್ಲಿ ನವೆಂಬರ್ 19ರಂದು ವಿಚಾರಣೆ ಅಂತ್ಯಗೊಂಡು ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಲಾಗಿತ್ತು, ಡಿಸೆಂಬರ್ 17ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿದೆ. ಸದ್ಯ ಅನಾರೋಗ್ಯ ಪೀಡಿತರಾಗಿರುವ ಮುಷರಫ್ ಅವರು ದುಬೈನಲ್ಲಿ ನೆಲೆಸಿದ್ದಾರೆ.

ರಾಷ್ಟ್ರದ್ರೋಹದ ಆರೋಪ ಹೊತ್ತ ಪರ್ವೇಜ್ ಮುಷರಫ್ ಅವರನ್ನು ಬಂಧಿಸಿ ಕರೆತರುವಂತೆ ಪೊಲೀಸರಿಗೆ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಆದರೆ, ದುಬೈನಿಂದ ಪಾಕಿಸ್ತಾನಕ್ಕೆ ಹಿಂತಿರುಗಿಲ್ಲ, ಈಗ ದುಬೈನಿಂದ ಪಾಕಿಸ್ತಾನಕ್ಕೆ ಪರ್ವೇಜ್ ಅವರನ್ನು ಗಡಿಪಾರು ಮಾಡಿದರೆ ಮಾತ್ರ ಬಂಧಿಸಲು ಸಾಧ್ಯ ಎಂದು ತಿಳಿದು ಬಂದಿದೆ.

"ಪಾಕಿಸ್ತಾನಕ್ಕಾಗಿ ಯುದ್ಧಗಳನ್ನು ಎದುರಿಸಿದ ನನ್ನ ಮೇಲೆ ರಾಷ್ಟ್ರದ್ರೋಹದ ಆರೋಪ ಹೊರೆಸಿರುವುದು ಎಷ್ಟು ಸರಿ" ಎಂದು ಈ ಹಿಂದೆ ಪರ್ವೇಜ್ ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

2007ರಲ್ಲಿ ಪಾಕಿಸ್ತಾನ ಮೇಲೆ ತುರ್ತು ಪರಿಸ್ಥಿತಿ

2007ರಲ್ಲಿ ಪಾಕಿಸ್ತಾನ ಮೇಲೆ ತುರ್ತು ಪರಿಸ್ಥಿತಿ

2007ರಲ್ಲಿ ಪಾಕಿಸ್ತಾನ ಮೇಲೆ ತುರ್ತು ಪರಿಸ್ಥಿತಿ ಹೇರಿದ ಬಳಿಕ ತಮ್ಮ ಆದೇಶದ ಅನ್ವಯ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮುಹಮದ್ ಚೌಧರಿ ಸೇರಿದಂತೆ 60 ನ್ಯಾಯಾಧೀಶರನ್ನು ಮುಷರ‌್ರಫ್ ವಜಾಗೊಳಿಸಿ ಜೈಲಿಗೆ ಕಳುಹಿಸಿದ್ದರು. ಈ ಬಗ್ಗೆ 2009ರ ಆ.11ರಂದು ಮುಷರ‌್ರಫ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ನ್ಯಾಯಾಲಯಕ್ಕೆ ಆಗಮಿಸಿ ವಿವರಣೆ ನೀಡುವಂತೆ ಆದೇಶಿಸಿದ್ದ ನ್ಯಾಯಾಲದ ಸೂಚನೆಯನ್ನು ಮುಷರ‌್ರಫ್ ಲಘುವಾಗಿ ಪರಿಗಣಿಸಿದ್ದರು. ಆದ್ದರಿಂದ ಅವರನ್ನು ಬಂಧಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಸ್ವಯಂ ಗಡಿಪಾರಿಗೆ ಒಳಗಾಗಿ ದುಬೈ, ಲಂಡನ್ ನಲ್ಲಿ ಆಶ್ರಯ ಬಯಸಿದ್ದರು.

ಮುಷರಫ್ ಮೇಲೆ ಹಲವು ಆರೋಪ

ಮುಷರಫ್ ಮೇಲೆ ಹಲವು ಆರೋಪ

ಆಲ್ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎಪಿಎಂ ಎಲ್) ಎಂಬ ರಾಜಕೀಯ ಪಕ್ಷದ ಸ್ಥಾಪಕರೂ ಆಗಿರುವ ಎಪ್ಪತ್ತಾರು ವರ್ಷದ ಮುಷರಫ್ ಮೇಲೆ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನ್ ಜಿರ್ ಭುಟ್ಟೋ, ಬಲೂಚಿಸ್ತಾನದ ಮುಖಂಡ ನವಾಬ್ ಅಕ್ಬರ್ ಬುಗ್ತಿ ಹತ್ಯೆ ಮಾಡಿದ ಆರೋಪವೂ ಇದೆ. ಇಸ್ಲಾಮಾಬಾದ್ ಸಮೀಪವಿರುವ ತೋಟದ ಮನೆ ಹಾಗೂ ಹಲವಾರು ನಿವೇಶನ ಇತ್ಯಾದಿಗಳನ್ನು ನ್ಯಾಯಾಲಯವು ಮುಟ್ಟುಗೋಲು ಹಾಕಿಕೊಂಡಿದೆ.

ಬಲೂಚಿಸ್ತಾನದ ಮುಖಂಡ ನವಾಬ್ ಅಕ್ಬರ್ ಹತ್ಯೆ

ಬಲೂಚಿಸ್ತಾನದ ಮುಖಂಡ ನವಾಬ್ ಅಕ್ಬರ್ ಹತ್ಯೆ

2006ರಲ್ಲಿ ನಡೆದ ಸೇನಾ ಕಾರ್ಯಚರಣೆಯಲ್ಲಿ ಬಲೂಚಿಸ್ತಾನದ ಮುಖಂಡ ನವಾಬ್ ಅಕ್ಬರ್ ಬುಗ್ತಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ವೇಳೆ ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥನಾಗಿದ್ದ ಮುಷರಫ್ ಅವರು ಹತ್ಯೆ ಪ್ರಕರಣದ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಬಲೂಚಿಸ್ತಾನದಪೊಲೀಸರು ತನಿಖೆ ನಡೆಸಿದ್ದರು. ಈ ಪ್ರಕರಣದಲ್ಲಿ ಪರ್ವೇಜ್ ಒಮ್ಮೆ ಬಂಧನಕ್ಕೂ ಒಳಗಾಗಿದ್ದರು.

ಪರ್ವೇಜ್ ಮುಷರಫ್ ಸ್ವದೇಶಕ್ಕೆ ಮರಳುವುದಾಗಿ ತಿಳಿಸಿರುವ ಬೆನ್ನಲ್ಲಿಯೇ ಅವರನ್ನು ಹತ್ಯೆಗೈದವರಿಗೆ 10.10 ಕೋಟಿ ರೂಪಾಯಿ ಮೌಲ್ಯದ ಬಹುಮಾನ ನೀಡುವುದಾಗಿ ಬಲೂಚಿಸ್ತಾನದ ಮಾಜಿ ಮುಖಂಡ ಅಕ್ಬರ್ ಬುಗ್ತಿ ಮೊಮ್ಮಗ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಾಜಿ ಪ್ರಧಾನಿ ನವಾಜ್ ಷರೀಫ್ ಮುತುವರ್ಜಿ

ಮಾಜಿ ಪ್ರಧಾನಿ ನವಾಜ್ ಷರೀಫ್ ಮುತುವರ್ಜಿ

ಮಾಜಿ ಪ್ರಧಾನಿ ನವಾಜ್ ಷರೀಫ್ ಮುತುವರ್ಜಿ ವಹಿಸಿ, ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ವಿರುದ್ಧದ ರಾಷ್ಟ್ರದ್ರೋಹದ ಪ್ರಕರಣಕ್ಕೆ ಮತ್ತೆ ಜೀವ ತಂದಿದ್ದರು 2013ರಿಂದ ಬಾಕಿ ಉಳಿದಿದ್ದ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮೂವರು ಸದಸ್ಯರ ನ್ಯಾಯಪೀಠವು ನವೆಂಬರ್ 19ರಂದು ಪರ್ವೇಜ್ ದೋಷಿ ಎಂದು ತೀರ್ಮಾನಿಸಿತ್ತು.

ವಿಶೇಷ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸಲು ಪರ್ವೇಜ್ ಲಾಹೋರ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ದೇಶಭ್ರಷ್ಟ ಎನಿಸಿ ಕೋರ್ಟ್ ವಿಚಾರಣೆಗೆ ಹಾಜರಾಗದ ಕಾರಣ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎಫ್ ಐಎ) ಗೆ ಬಂಧಿಸಿ ಕರೆ ತರುವಂತೆ ಸೂಚಿಸಿತ್ತು. ಮತ್ತೊಂದು ಭ್ರಷ್ಟಾಚಾರ ಪ್ರಕರಣದಲ್ಲಿ 7ವರ್ಷ ಶಿಕ್ಷೆ ಎದುರಿಸಿದ್ದ ಪರ್ವೇಜ್ ಸದ್ಯ ಜಾಮೀನು ಪಡೆದು ಲಂಡನ್ನಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

English summary
A court in Pakistan on Tuesday sentenced former president Pervez Musharraf to death for high treason, giving its judgment on charges relating to the imposition of extra-constitutional emergency in November 2007.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X