ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಾರತದ ಎದುರು ಪಾಕ್ ಸಾಂಪ್ರದಾಯಿಕ ಯುದ್ಧ ಸೋಲಬಹುದು, ಆದರೆ...'

|
Google Oneindia Kannada News

ಇಸ್ಲಾಮಾಬಾದ್, ಸೆಪ್ಟೆಂಬರ್ 15: "ಪಾಕಿಸ್ತಾನವು ಸಾಂಪ್ರದಾಯಿಕ ಯುದ್ಧದಲ್ಲಿ ಭಾರತದ ಎದುರು ಸೋಲಬಹುದು. ಆದರೆ ಅದರ ಪರಿಣಾಮ ಬೇರೆಯೇ ಇರುತ್ತದೆ. ಪಾಕಿಸ್ತಾನವು ಎಂದಿಗೂ ಅಣ್ವಸ್ತ್ರ ಯುದ್ಧವನ್ನು ಆರಂಭಿಸುವುದಿಲ್ಲ ಮತ್ತು ನಾನು ಯುದ್ಧಗಳ ವಿರೋಧಿ" ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

'ಉಗ್ರರಿಗೆ ತರಬೇತಿ ನೀಡಿದ್ದು ನಾವೇ' ಇಮ್ರಾನ್ ಖಾನ್ ಶಾಕಿಂಗ್ ಹೇಳಿಕೆ!'ಉಗ್ರರಿಗೆ ತರಬೇತಿ ನೀಡಿದ್ದು ನಾವೇ' ಇಮ್ರಾನ್ ಖಾನ್ ಶಾಕಿಂಗ್ ಹೇಳಿಕೆ!

ಸಂದರ್ಶನವೊಂದರಲ್ಲಿ ಅಲ್ ಜಝೀರಾ ಟೀವಿ ಚಾನೆಲ್ ಜತೆ ಮಾತನಾಡಿದ ಅವರು, ಅಣ್ವಸ್ತ್ರ ಹೊಂದಿದ ಎರಡು ದೇಶಗಳ ಮಧ್ಯೆ ಸಾಂಪ್ರದಾಯಿಕ ಯುದ್ಧ ಆರಂಭವಾದರೆ ಅದು ಕೊನೆಯಾಗುವುದು ಅಣ್ವಸ್ತ್ರ ಯುದ್ಧದಲ್ಲಿ ಎಂಬುದು ನನಗೆ ಸ್ಪಷ್ಟವಿದೆ. ಸಾಂಪ್ರದಾಯಿಕ ಯುದ್ಧದಲ್ಲಿ ಪಾಕಿಸ್ತಾನವು ಸೋಲುತ್ತಾ ಬಂದರೆ, ಶರಣಾಗತಿಯೇ ಅಥವಾ ಹೋರಾಟವೇ ಎಂಬ ಆಯ್ಕೆ ಎದುರಾದರೆ ಸಾವಿನ ತನಕ ಸ್ವಾತಂತ್ರ್ಯಕ್ಕಾಗಿ ಯುದ್ಧವೇ ಎಂಬ ಆಯ್ಕೆಯನ್ನು ಪಾಕಿಸ್ತಾನ ಮಾಡಿಕೊಳ್ಳುತ್ತದೆ ಎಂದಿದ್ದಾರೆ.

Pakistan Could Lose Conventional War Against India, But...

ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಯ ಸಮುದಾಯವು ಪರಿಹರಿಸದಿದ್ದಲ್ಲಿ ಅದರ ಪರಿಣಾಮ ವಿಶ್ವ ವ್ಯಾಪಾರದ ಮೇಲೆ ಆಗುತ್ತದೆ ಎಂದಿದ್ದಾರೆ ಇಮ್ರಾನ್ ಖಾನ್. ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತವು ಹಿಂಪಡೆದ ಮೇಲೆ ಇಮ್ರಾನ್ ಖಾನ್ ಪದೇಪದೇ ಅಣ್ವಸ್ತ್ರ ಬಳಕೆ ಬಗ್ಗೆ ಮಾತನಾಡುತ್ತಿದ್ದಾರೆ.

English summary
India and Pakistan conventional war could end in nuclear war, said Pakistan PM Imran Khan in an interview with Al Jazeera.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X