ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೊರೊನಾ ವೈರಸ್ ಜಿಂದಾಬಾದ್' ಎಂದ ಪಾಕಿಸ್ತಾನ್ ಯುವಕರು..!

|
Google Oneindia Kannada News

ಇಸ್ಲಾಮಾಬಾದ್, ಮಾರ್ಚ್ 14; ಇಡೀ ಜಗತ್ತು ಕೊರೊನಾ ವೈರಸ್ ಸೋಂಕಿಗೆ (ಕೋವಿಡ್ 19) ಬೆಚ್ಚಿ ಬಿದ್ದಿದೆ. ಪ್ರಪಂಚದಲ್ಲಿ ಈ ಮಹಾ ಪೀಡಿಗಿಗೆ 5000 ಕ್ಕೂ ಹೆಚ್ಚು ಜನ ಇಲ್ಲಿವರೆಗೆ ಬಲಿಯಾಗಿದ್ದಾರೆ.

ಪಾಕಿಸ್ತಾನದಲ್ಲೂ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ಅಲ್ಲಿನ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಿ, ಪರೀಕ್ಷೆಗಳನ್ನೂ ರದ್ದುಗೊಳಿಸಿದೆ.

ಇದನ್ನೇ ನೆಪವಾಗಿಟ್ಟುಕೊಂಡು ಪಾಕಿಸ್ತಾನದ ಕಾಲೇಜು ವಿದ್ಯಾರ್ಥಿಗಳು ಕೊರೊನಾ ವೈರಸ್ ಗೆ ಜಿಂದಾಬಾದ್ ಹೇಳಿದ್ದಾರೆ. ‌ಕೊರೊನಾ ವೈರಸ್ ನಿಂದ ನಮ್ಮ ಪರೀಕ್ಷೆ ಮುಂದೆ ಹೋಗಿವೆ. 'ಕೊರೊನಾ ವೈರಸ್ ಗೆ ಜಯವಾಗಲಿ' ಎಂದು ಅಲ್ಲಿನ ವಿದ್ಯಾರ್ಥಿಗಳು ಹೇಳಿರುವ ವಿಡಿಯೋ ವೈರಲ್ ಆಗಿದೆ.

ತಂದೆ ಸಾವು; ಫೇಸ್‌ಬುಕ್ ಮೂಲಕ ಅಂತಿಮ ದರ್ಶನ ಪಡೆದ ಕೊರೊನಾ ರೋಗಿ!ತಂದೆ ಸಾವು; ಫೇಸ್‌ಬುಕ್ ಮೂಲಕ ಅಂತಿಮ ದರ್ಶನ ಪಡೆದ ಕೊರೊನಾ ರೋಗಿ!

ಎಲ್ಲಿ ನಡೆದಿದ್ದು ಘಟನೆ?

ಪಾಕಿಸ್ತಾನ ಸರ್ಕಾರ ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಪಾಕಿಸ್ತಾನದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ನೀಡಿ, ಪರೀಕ್ಷೆಗಳನ್ನು ರದ್ದು ಮಾಡಿದ್ದನ್ನು ಕೇಳಿ ವಿದ್ಯಾರ್ಥಿಗಳು ಖುಷಿಯಾಗಿದ್ದಾರೆ. ಶುಕ್ರವಾರ ಸಂಜೆ ಇಸ್ಲಾಮಾಬಾದ್ ನ ಕಾಲೇಜೊಂದರಲ್ಲಿ ಹೊರ ಬಂದ ವಿದ್ಯಾರ್ಥಿಗಳು 'ಕೊರೊನಾ ವೈರಸ್ ಜಿಂದಾಬಾದ್' ಎಂದು ಕೂಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಡಿಯೋ ವೈರಲ್!

ವಿಡಿಯೋ ವೈರಲ್!

ಪಾಕಿಸ್ತಾನ ವಿದ್ಯಾರ್ಥಿಗಳು

ಕೊರೊನಾ ವೈರಸ್ ಜಿಂದಾಬಾದ್ ಎಂದ ವಿಡಿಯೋವನ್ನು ಇಸ್ಲಾಮಾಬಾದ್ ಪತ್ರಕರ್ತ ಅನಾಸ್ ಮಲಿಕ್ ಟ್ವಿಟರ್ ನಲ್ಲಿ ಹಾಕಿದ್ದಾರೆ. ಇಡೀ ಜಗತ್ತು ಕೊರೊನಕ್ಕೆ ಬೆದರಿದ್ದರೆ ನಮ್ಮ ಹುಡುಗರು ಕೊರೊನಾ ಸ್ವಾಗತಿಸಿರುವುದು ಸರಿಯಲ್ಲ ಎಂದಿದ್ದಾರೆ. ಅಲ್ಲದೇ ಅನೇಕರು ವಿದ್ಯಾರ್ಥಿಗಳ ಈ ನಡೆಯನ್ನು ವ್ಯಾಪಕವಾಗಿ ಖಂಡಿಸಿದ್ದಾರೆ.

ಪಾಕಿಸ್ತಾನದಲ್ಲಿ 19 ಜನರಿಗೆ ಕೊರೊನಾ

ಪಾಕಿಸ್ತಾನದಲ್ಲಿ 19 ಜನರಿಗೆ ಕೊರೊನಾ

ಇನ್ನು ಪಾಕಿಸ್ತಾನಕ್ಕೂ ಕೂಡ ಕೊರೊನಾ ವೈರಸ್ ಕಾಲಿಟ್ಟಿದ್ದು, ಇದುವರೆಗೆ 19 ಜನಕ್ಕೆ ಸೋಂಕು ದೃಢವಾಗಿದೆ. ಪಾಕಿಸ್ತಾನ ಸರ್ಕಾರ ಎಲ್ಲ ಗಡಿಗಳನ್ನು ಬಂದ್ ಮಾಡಿದ್ದು, ಏಪ್ರಿಲ್ 5 ರವರೆಗೆ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಿಷೇಧಿಸಿದೆ.

ವಿಡಿಯೋ ಸಂವಾದದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ

ವಿಡಿಯೋ ಸಂವಾದದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ

ಕೊರೊನಾ ಸೋಂಕು ತಡೆಗಟ್ಟಲು ಸಾರ್ಕ್ ರಾಷ್ಟ್ರಗಳು ಒಟ್ಟಾಗಿ ಹೋರಾಡಬೇಕು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದು, ಇದಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸ್ಪಂದಿಸಿದ್ದಾರೆ. ವಿಡಿಯೋ ಸಂವಾದದಲ್ಲಿ ಪಾಕಿಸ್ತಾನ ಪಾಲ್ಗೊಳ್ಳಲು ಇಚ್ಚಿಸುತ್ತದೆ ಎಂದಿದ್ದಾರೆ.

English summary
Pakistan College Students Shout Coronavirus Zindabadh. video goes viral. 19 corona cases confirmed cases in pakistna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X