ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಂ ರಾಷ್ಟ್ರಗಳ ಪ್ರವಾಸಿಗರನ್ನು ಸೆಳೆಯುವ ಸಾಮರ್ಥ್ಯ ಪಾಕಿಸ್ತಾನಕ್ಕಿದೆ: ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ಆಗಸ್ಟ್ 11: ಮುಸ್ಲಿಂ ರಾಷ್ಟ್ರಗಳ ಪ್ರವಾಸಿಗರನ್ನು ನಾವು ಆಕರ್ಷಿಸಬಲ್ಲೆವು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಪ್ರದೇಶಗಳಲ್ಲಿ ರೆಸಾರ್ಟ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಬಾಡಿಗೆಗಿದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಧಿಕೃತ ನಿವಾಸಬಾಡಿಗೆಗಿದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಧಿಕೃತ ನಿವಾಸ

ನಮ್ಮ ದೇಶದಲ್ಲಿ ಮುಸ್ಲಿಂ ದೇಶಗಳ ಪ್ರವಾಸಿಗರು ಇಷ್ಟಪಡುವಂತಹ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ರೆಸಾರ್ಟ್ ಸೇರಿದಂತೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಸಜ್ಜಾಗಿದೆ ಎಂದರು.

 Pakistan Can Attract Tourists From Muslim Countries, Says PM Imran Khan

ಈ ಮೊದಲು ನಮ್ಮ ಜನರು ರಜಾ ದಿನಗಳನ್ನು ಕಳೆಯಲು ಯುರೋಪ್ ಸೇರಿದಂತೆ ವಿಶ್ವದ ಹಲವು ಪ್ರಮುಖ ರಾಷ್ಟ್ರಗಳಿಗೆ ತೆರಳುತ್ತಿದ್ದರು. ಆದರೆ ಅಲೆಲ್ಲಾ ಈಗ ಮುಸ್ಲಿಂ ಸಮುದಾಯದವ ವಿರುದ್ಧ ತಾರತಮ್ಯ ಧೋರಣೆಯ ಮನಸ್ಥಿತಿ ಹೆಚ್ಚುತ್ತಿರುವ ಕಾರಣ, ಆ ದೇಶದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಹಿಂಜರಿಯುತ್ತಿದ್ದಾರೆ. ಆದರೆ, ಪಾಕಿಸ್ತಾನದಂತಹ ರಾಷ್ಟ್ರ ಮುಸ್ಲಿಂ ದೇಶಗಳ ಪ್ರವಾಸಿಗರನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದೆ ಎಂದರು.

ಹವಾಮಾನ ಬದಲಾವಣೆ ಕುರಿತು ವಿಶ್ವ ಸಂಸ್ಥೆ ಬಿಡುಗಡೆ ಮಾಡಿರುವ ಕುರಿತು ಮಾತನಾಡಿರುವ ಅವರು, ಹವಾಮಾನ ಬದಲಾವಣೆಯ ಪರಿಣಾಮದಿಂದ ರಕ್ಷಿಸುಕೊಳ್ಲುತ್ತಿರುವ ಮುಂಚೂಣಿ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನವೂ ಇದೆ ಎಂಬುದು ಹೆಮ್ಮೆಯ ವಿಚಾರ ಎಂದರು.

ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಸೊನ್ಮಿಯಾನ್‌ನಲ್ಲಿರುವ ಮ್ಯಾಂಗ್ರೋವ್ ಕಾಡುಗಳು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದಿಸುತ್ತವೆ. ಅರಣ್ಯ ಪ್ರದೇಶಗಳೇ ಹವಾಮಾನ ಬದಲಾವಣೆ ನಿಯಂತ್ರಿಸಲು ಇರುವ ಉತ್ತಮ ಪರಿಹಾರ ಎಂದು ಹೇಳಿದರು.

ಹವಾಮಾನ ಬದಲಾವಣೆಯಿಂದಾಗಿ ಟರ್ಕಿ, ಗ್ರೀಸ್ ಮತ್ತು ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಕಾಡ್ಗಿಚ್ಚು ಸಂಭವಿಸಿದೆ. ಕೆಲವು ದೇಶಗಳಲ್ಲಿ ಪ್ರವಾಹ ಉಂಟಾಗಿದೆ ಎಂದು ತಿಳಿಸಿದರು.

ಮುಂಬರುವ ವರ್ಷಗಳಲ್ಲಿ ಹವಾಮಾನ ಬದಲಾವಣೆಯ ಪ್ರಬಲ ಪರಿಣಾಮಗಳು ಎದುರಾಗಲಿದ್ದು, ಭಾರತ ಈಗಲೇ ಕಾರ್ಯೋನ್ಮುಖವಾಗಬೇಕು ಎಂದು ಮಂಗಳವಾರ ಪರಿಸರ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ತುರ್ತಾಗಿ, ಹಸಿರುಮನೆ ಅನಿಲ ಹೊರಸೂಸುವಿಕೆಯ ನಿಯಂತ್ರಣ ಸೇರಿದಂತೆ ಹವಾಮಾನ ಬದಲಾವಣೆ ಎದುರಿಸಲು ಸ್ಥಿತಿಸ್ಥಾಪಕ ಮೂಲಸೌಕರ್ಯ ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕು ಎಂದು ಐಪಿಸಿಸಿ ವರದಿಯಲ್ಲಿ ಎಚ್ಚರಿಸಲಾಗಿದೆ.

ಇಂಟರ್‌ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (IPCC) ತನ್ನ ಆರನೇ ಮೌಲ್ಯಮಾಪನ ವರದಿಯಲ್ಲಿ ಈ ಎಚ್ಚರಿಕೆಯನ್ನು ನೀಡಿದೆ. ಭೂಮಿಯ ಪ್ರತಿ ಭಾಗವು ಮುಂಬರುವ ವರ್ಷಗಳಲ್ಲಿ ಹವಾಮಾನ ಬದಲಾವಣೆಯ ಗಂಭೀರ ಪರಿಣಾಮವನ್ನು ಎದುರಿಸಲಿವೆ.

ಸಮುದ್ರ ಮಟ್ಟದ ಏರಿಕೆ ಸೇರಿದಂತೆ ಶಾಖದ ಅಲೆಗಳು, ಭಾರೀ ಮಳೆ, ಬರ, ಕಾಡ್ಗಿಚ್ಚು ಹಾಗೂ ಪ್ರವಾಹಗಳಂಥ ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳಿಗೆ ಭೂಮಿ ಸಾಕ್ಷಿಯಾಗಲಿದೆ ಎಂದು ತಿಳಿಸಿದೆ.

ತುರ್ತಾಗಿ ಇಂಗಾಲದ ಹೊರಸೂಸುವಿಕೆಯನ್ನು ಶೇ 50ರಷ್ಟು ಕಡಿಮೆ ಮಾಡುವುದು ಬಹಳ ಮುಖ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹಸಿರುಮನೆ ಅನಿಲ ಹೊರಸೂಸುವಿಕೆ ಶೂನ್ಯವಾಗುವವರೆಗೂ ಭೂಮಿ ಮೇಲಿನ ಈ ಪರಿಣಾಮಗಳು ಮುಂದುವರೆಯುತ್ತವೆ ಎಂದು ವರದಿಯ ಲೇಖಕರಲ್ಲಿ ಒಬ್ಬರಾದ ಕೃಷ್ಣ ಅಚ್ಯುತರಾವ್ ಪಿಟಿಐಗೆ ನೀಡಿರುವ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಹವಾಮಾನ ಬದಲಾವಣೆಯ ಪರಿಣಾಮ ಭಾರತ ಹಾಗೂ ವಿಶ್ವದ ಇತರೆ ದೇಶಗಳಿಗೆ ಒಂದೇ ಆಗಿರುತ್ತವೆ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು, ಇಂಗಾಲದ ಡೈ ಆಕ್ಸೈಡ್ ಮಟ್ಟ ತಗ್ಗಿಸಲು ತುರ್ತಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅವಶ್ಯಕ ಎಂದು ವರದಿ ತಿಳಿಸಿದೆ.

ನಾವು ಈಗಾಗಲೇ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ ಮತ್ತು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಶೂನ್ಯವಾಗುವವರೆಗೂ ಬಲವಾದ ಪರಿಣಾಮಗಳನ್ನು ಅನುಭವಿಸುತ್ತಲೇ ಇರುತ್ತೇವೆ ಎಂಬ ಸಂದೇಶ ಸ್ಪಷ್ಟವಾಗಿವೆ.

ಈ ಬದಲಾವಣೆಗೆ ನಾವು ಹೇಗೆ ಹೊಂದಿಕೊಳ್ಳಬೇಕು ಎಂಬುದರ ಕುರಿತು ಕೂಡ ಗಮನ ಹರಿಸಬೇಕು. ಜನಸಂಖ್ಯೆ, ಆರ್ಥಿಕತೆ ಹಾಗೂ ಮೂಲಸೌಕರ್ಯದ ಮೇಲೆ ಹವಾಮಾನ ಬದಲಾವಣೆ ಪರಿಣಾಮವನ್ನು ಕಡಿಮೆ ಮಾಡುವ ಕುರಿತು ಯೋಚಿಸಬೇಕು ಎಂದು ರಾವ್ ಹೇಳಿದ್ದಾರೆ.

English summary
:Prime Minister Imran Khan on Tuesday said Pakistan has great potential in attracting tourists from Muslim countries as leading travel destinations such as Europe were developing an Islamophobic mind set. Addressing a function during a day-long visit to Karachi, Khan said the government plans to build resorts that would attract tourists from Muslim countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X