ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್-ಜಿಂಬಾಬ್ವೆ ಪಂದ್ಯ ನಡೆಯುತ್ತಿದ್ದಾಲೇ ಬಾಂಬ್ ಸ್ಫೋಟ

|
Google Oneindia Kannada News

ಲಾಹೋರ್‌, ಮೇ 30: ಪಾಕಿಸ್ತಾನದಲ್ಲಿ ಮತ್ತೆ ಆತ್ಮಾಹುತಿ ಬಾಂಬ್ ಸ್ಫೋಟವಾಗಿದೆ. ಗಡಾಫಿ ಕ್ರಿಕೆಟ್‌ ಮೈದಾನದ ಬಳಿ ಶುಕ್ರವಾರ ರಾತ್ರಿ 9 ಗಂಟೆಗೆ ನಡೆದ ಆತ್ಮಾಹುತಿ ದಾಳಿಯಲ್ಲಿ ಒಬ್ಬ ಪೊಲೀಸ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ಬಾಂಬ್ ದಾಳೀ ನಡೆದಾಗ ಗಡಾಫಿ ಮೈದಾನದಲ್ಲಿ ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವೆ ಏಕದಿನ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದ್ದು ಪಂದ್ಯವನ್ನು 20 ಸಾವಿರ ಜನ ವೀಕ್ಷಿಸುತ್ತಿದ್ದರು.[ಜೆಡಿಯು ನಾಯಕನಿಗೆ ಕಳಿಸಿದ್ದ ಪಾರ್ಸಲ್ ನಲ್ಲಿ ಬಾಂಬ್]

pakistan

ಆಟೋದಲ್ಲಿ ಬಂದ ಆತ್ಮಾಹುತಿ ಬಾಂಬರ್‌ನನ್ನು ಕಲ್ಮಾ ಚೌಕದಲ್ಲಿ ತಡೆದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಅಬ್ದುಲ್‌ ಮಜೀದ್‌ ಪ್ರಶ್ನೆ ಮಾಡಿದರು. ಆಗ ಬಾಂಬರ್ ತನ್ನನ್ನು ತಾನೇ ಸ್ಫೋಟಿಸಿಕೊಂಡ. ಇದೊಂದು ಭಯೋತ್ಪಾದಕ ದಾಳಿಯಾಗಿತ್ತು ಎಂದು ಪಾಕ್ ಸಚಿವ ಪರ್ವೇಜ್‌ ರಶೀದ್‌ ತಿಳಿಸಿದ್ದಾರೆ.

ಸ್ಟೇಡಿಯಂನಿಂದ ಕೇವಲ ಒಂದು ಕಿ.ಮೀ. ದೂರದಲ್ಲಿ ಬಾಂಬ್ ಸ್ಫೋಟ ಮಾಡಲಾಗಿದೆ. ಎಸ್‌ಐ ಮತ್ತು ಇನ್ನೊಬ್ಬ ಮೃತಪಟ್ಟರಲ್ಲದೆ ನಾಲ್ವರು ಪೊಲೀಸ್‌ ಸಿಬಂದಿ ಮತ್ತು ಓರ್ವ ನಾಗರಿಕ ಗಾಯಗೊಂಡಿದ್ದಾರೆ.[ಕುಡಿದ ಮತ್ತಿನಲ್ಲಿ ಸಿಎಂ ಮನೆಯಲ್ಲಿ ಬಾಂಬ್ ಇದೆ ಎಂದ!]

ಹಿಂದೆ ಶ್ರೀಲಂಕಾ ಮತ್ತು ಪಾಕ್ ನಡುವೆ ಸರಣಿ ನಡೆಯುತ್ತಿದ್ದಾಗ ಶ್ರೀಲಂಕಾ ಆಟಗಾರರಿದ್ದ ಬಸ್ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಅದಾದ ನಂತರ ಪಾಕಿಸ್ತಾನದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿರಲಿಲ್ಲ. ಈಗ ಜಿಂಬಾಬ್ವೆ ತಂಡ ಪ್ರವಾಸ ಮಾಡಿದಾಗಲೇ ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದಾರೆ.[ಬಾಂಗ್ಲಾ ಟೂರ್ ನಂತರ ಭಾರತಕ್ಕೆ ಬಿಗಿ ವೇಳಾಪಟ್ಟಿ]

ಭಾರತ ಮತ್ತು ಪಾಕ್ ನಡುವೆ ಮತ್ತೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು ಇಂಥ ಘಟನೆಗಳು ಹಿನ್ನಡೆ ಉಂಟು ಮಾಡಿದರೆ ಆಶ್ಚರ್ಯವಿಲ್ಲ.

English summary
Pakistan's Information Minister Pervaiz Rashid has said the blast that killed two people, including a police officer, near the Gaddafi Stadium in Lahore was a suicide attack. The blast took place at Friday 9 PM when a day-night match between Pakistan and Zimbabwe was underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X